
ಐಡೆನ್ ಮಾರ್ಕ್ರಾಮ್ ಮತ್ತು ನಿಕೋಲಸ್ ಪೂರನ್ ಅವರ ಅರ್ಧಶತಕಗಳ ಸಹಾಯದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಅರ್ಧಶತಕ ಸಿಡಿಸಿ ತಂಡವನ್ನು 20 ಓವರ್‌ಗಳಲ್ಲಿ 180 ರನ್ಗಳಿಗೆ ಕೊಂಡೊಯ್ದರು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 19.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 186 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಲಕ್ನೋ ಪರ ಪೂರನ್ 34 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಏಳು ಸಿಕ್ಸರ್‌ಗಳ ಸಹಾಯದಿಂದ 61 ರನ್ ಗಳಿಸಿದರೆ, ಮಾರ್ಕ್ರಾಮ್ 31 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ಸಹಾಯದಿಂದ 58 ರನ್ ಗಳಿಸಿದರು.
ಮೊದಲ ಎಸೆತದಲ್ಲೇ ಸಾಯಿ ಕಿಶೋರ್ ಸಿಂಗಲ್ ಬಿಟ್ಟುಕೊಟ್ಟರು. ಈಗ ಐದು ಎಸೆತಗಳಲ್ಲಿ ಐದು ರನ್‌ಗಳು ಬೇಕಾಗಿವೆ. ಎರಡನೇ ಎಸೆತದಲ್ಲಿ ಅದ್ಭುತ ಸ್ವೀಪ್ ಮತ್ತು ಬೌಂಡರಿ ಬಾರಿಸಿದ ಆಯುಷ್ ಪಂದ್ಯವನ್ನು ಸಮಬಲಗೊಳಿಸಿದರು. ಹಾಗೆಯೇ ಮೂರನೇ ಎಸೆತವನ್ನು ಸಿಕ್ಸರ್ಗಟ್ಟಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು
19ನೇ ಓವರ್ ಎಸೆದ ವಾಷಿಂಗ್ಟನ್ ಸುಂದರ್ ಕೇವಲ 3 ರನ್ ನೀಡಿ ಡೇವಿಡ್ ಮಿಲ್ಲರ್ ವಿಕೆಟ್ ಪಡೆದರು. ಈಗ ಕೊನೆಯ 6 ಎಸೆತಗಳಲ್ಲಿ 6 ರನ್‌ಗಳು ಬೇಕಾಗಿವೆ. ಅಬ್ದುಲ್ ಸಮದ್ ಮತ್ತು ಆಯುಷ್ ಬದೋನಿ ಕ್ರೀಸ್‌ನಲ್ಲಿದ್ದಾರೆ.
7 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 61 ರನ್ ಗಳಿಸಿದ್ದ ನಿಕೋಲಸ್ ಪೂರನ್ ಔಟಾದರು. ರಶೀದ್ ಖಾನ್ ಅವರ ಎಸೆತದಲ್ಲಿ ಸಿಕ್ಸರ್ ಬಾರಿಸಲು ಪ್ರಯತ್ನಿಸುವಾಗ ಅವರು ವಿಕೆಟ್ ಕಳೆದುಕೊಂಡರು.
ನಿಕೋಲಸ್ ಪೂರನ್ ಅವರ ಸ್ಫೋಟಕ ಬ್ಯಾಟಿಂಗ್ ಮುಂದುವರೆದಿದ್ದು, ಈ ಬ್ಯಾಟ್ಸ್‌ಮನ್ ಈ ಸೀಸನ್ನಲ್ಲಿ ನಾಲ್ಕನೇ ಅರ್ಧಶತಕ ಗಳಿಸಿದ್ದಾರೆ. ಪೂರನ್ ಕೇವಲ 23 ಎಸೆತಗಳಲ್ಲಿ ಈ ಅರ್ಧಶತಕ ಗಳಿಸಿದ್ದಾರೆ.
ಲಕ್ನೋ ತಂಡ ಎರಡನೇ ವಿಕೆಟ್ ಕಳೆದುಕೊಂಡಿದ್ದು, ಐಡೆನ್ ಮಾರ್ಕ್ರಾಮ್ (58) ಅವರ ಉತ್ತಮ ಇನ್ನಿಂಗ್ಸ್ ಅಂತ್ಯಗೊಂಡಿದೆ. ಪ್ರಸಿದ್ಧ್ ಕೃಷ್ಣ ಎಸೆದ 12ನೇ ಓವರ್‌ನ ಮೊದಲ ಎಸೆತದಲ್ಲಿ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸುವಾಗ ಮಾರ್ಕ್ರಾಮ್ ಬೌಂಡರಿಯಲ್ಲಿ ಕ್ಯಾಚ್ ನೀಡಿ ಔಟಾದರು.
ನಿಕೋಲಸ್ ಪೂರನ್ ಕ್ರೀಸ್‌ಗೆ ಬಂದಾಗಿನಿಂದ ಸಿಕ್ಸರ್‌ಗಳನ್ನು ಬಾರಿಸುತ್ತಿದ್ದಾರೆ. ಸಾಯಿ ಕಿಶೋರ್ ಎಸೆದ ಒಂದೇ ಓವರ್‌ನಲ್ಲಿ ಪೂರನ್ 3 ಸಿಕ್ಸರ್‌ಗಳನ್ನು ಬಾರಿಸಿದರು. ಇಲ್ಲಿಯವರೆಗೆ ಅವರು 5 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ
ಲಕ್ನೋದ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ ಗುಜರಾತ್ ವಿರುದ್ಧ ಅರ್ಧಶತಕ ಗಳಿಸಿದ್ದಾರೆ. ಮಾರ್ಕ್ರಾಮ್ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮಾರ್ಕ್ರಾಮ್ ಜೊತೆಗೆ, ನಿಕೋಲಸ್ ಪೂರನ್ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಅವರ ಸಹಾಯದಿಂದ ಲಕ್ನೋ ತಂಡವು 10 ಓವರ್‌ಗಳ ಅಂತ್ಯದ ವೇಳೆಗೆ ಒಂದು ವಿಕೆಟ್‌ಗೆ 114 ರನ್‌ಗಳನ್ನು ಗಳಿಸಿದೆ. ಲಕ್ನೋ ತಂಡಕ್ಕೆ ಈಗ 60 ಎಸೆತಗಳಲ್ಲಿ 67 ರನ್ ಬೇಕಾಗಿದೆ.
ಪ್ರಸಿದ್ಧ್ ಕೃಷ್ಣ ನಾಯಕ ರಿಷಭ್ ಪಂತ್ ಅವರನ್ನು ಔಟ್ ಮಾಡುವ ಮೂಲಕ ಲಕ್ನೋ ತಂಡಕ್ಕೆ ಮೊದಲ ಹೊಡೆತ ನೀಡಿದ್ದಾರೆ. ಪಂತ್ ಮತ್ತು ಮಾರ್ಕ್ರಾಮ್ ಉತ್ತಮ ಫಾರ್ಮ್‌ನಲ್ಲಿದ್ದರು, ಈ ಜೋಡಿ ಮೊದಲ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ನೀಡಿತು. ಪವರ್ ಪ್ಲೇ ಮುಗಿದ ನಂತರ, ಗುಜರಾತ್ ತನ್ನ ಮೊದಲ ಯಶಸ್ಸನ್ನು ಪಡೆಯುವಲ್ಲಿ ಯಶಸ್ವಿಯಾಯಿತು. 18 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 21 ರನ್ ಗಳಿಸಿದ ನಂತರ ಪಂತ್ ಔಟಾದರು.
ಗುಜರಾತ್ ವಿರುದ್ಧ ಮಾರ್ಕ್ರಮ್ ಮತ್ತು ಪಂತ್ ಲಕ್ನೋ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಪವರ್‌ಪ್ಲೇ ಮುಗಿದ ನಂತರ ಲಕ್ನೋ ಯಾವುದೇ ವಿಕೆಟ್ ನಷ್ಟವಿಲ್ಲದೆ 61 ರನ್ ಗಳಿಸಿದೆ. ಗೆಲ್ಲಲು ಇನ್ನೂ 84 ಎಸೆತಗಳಲ್ಲಿ 120 ರನ್ ಗಳಿಸಬೇಕಾಗಿದೆ.
ಪ್ರಸಿದ್ಧ್ ಕೃಷ್ಣ ಎಸೆದ ಮೊದಲ ಎಸೆತದಲ್ಲೇ ಮಾರ್ಕ್ರಾಮ್ ಸಿಕ್ಸರ್ ಬಾರಿಸಿದರು. ಇದಾದ ನಂತರ ಮಾರ್ಕ್ರಾಮ್ ಬೌಂಡರಿ ಕೂಡ ಬಾರಿಸಿದರು. ಲಕ್ನೋ ತಂಡ 5 ಓವರ್‌ಗಳಲ್ಲಿ ಐವತ್ತು ರನ್‌ಗಳನ್ನು ಪೂರೈಸಿತು.
ಮೂರನೇ ಓವರ್‌ನಲ್ಲಿ ಸಿರಾಜ್ 20 ರನ್‌ಗಳನ್ನು ನೀಡಿದರು. ಮಾರ್ಕ್ರಾಮ್ 2 ಬೌಂಡರಿಗಳನ್ನು ಹೊಡೆದರು. ಐದನೇ ಎಸೆತದಲ್ಲಿ ಪಂತ್ ಬೌಂಡರಿ ಬಾರಿಸಿದರು. ಆದರೆ ಕೊನೆಯ ಎಸೆತದಲ್ಲಿ ಬಟ್ಲರ್ ಪಂತ್ ಕ್ಯಾಚ್ ಕೈಚೆಲ್ಲಿದರು.
ರಿಷಭ್ ಪಂತ್ ಮತ್ತು ಐಡೆನ್ ಮಾರ್ಕ್ರಾಮ್ 2 ಓವರ್‌ಗಳಲ್ಲಿ ಕೇವಲ 8 ರನ್ ಮಾತ್ರ ಕಲೆಹಾಕಿದ್ದಾರೆ. ತಂಡಕ್ಕೆ ಮಿಚೆಲ್ ಮಾರ್ಷ್ ಅವರ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ
ಲಕ್ನೋ ತಂಡಕ್ಕೆ 181 ರನ್‌ಗಳ ಗುರಿ ಸಿಕ್ಕಿದ್ದು, ಪಂತ್ 9 ವರ್ಷಗಳ ನಂತರ ಆರಂಭಿಕನಾಗಿ ಕಣಕ್ಕಿಳಿದಿದ್ದಾರೆ.
ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕಗಳ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ಗೆ 181 ರನ್ಗಳ ಗುರಿ ನೀಡಿದೆ.
ಗುಜರಾತ್ ಟೈಟಾನ್ಸ್ ತಂಡವು ಲಕ್ನೋ ವಿರುದ್ಧ 150 ರನ್‌ಗಳ ಗಡಿ ದಾಟಿದೆ. 18 ಓವರ್‌ಗಳ ಅಂತ್ಯಕ್ಕೆ ಗುಜರಾತ್ ನಾಲ್ಕು ವಿಕೆಟ್‌ಗಳಿಗೆ 157 ರನ್ ಗಳಿಸಿದೆ. ಗುಜರಾತ್ ಪರ ರುದರ್ಫೋರ್ಡ್ ಮತ್ತು ಶಾರುಖ್ ಖಾನ್ ಕ್ರೀಸ್‌ನಲ್ಲಿದ್ದಾರೆ.
ದಿಗ್ವೇಶ್ ರಾಟಿ ಜೋಸ್ ಬಟ್ಲರ್ ವಿಕೆಟ್ ಪಡೆದರು. ಬಟ್ಲರ್ ಕೇವಲ 16 ರನ್ ಗಳಿಸಲಷ್ಟೇ ಶಕ್ತರಾದರು. ವಿಕೆಟ್ ಪಡೆದ ನಂತರ ದಿಗ್ವೇಶ್ ಪಿಚ್‌ಗೆ ಸಹಿ ಹಾಕಿದ್ದಾರೆ.
ವಾಷಿಂಗ್ಟನ್ ಸುಂದರ್ 2 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಓವರ್‌ನಲ್ಲಿ ಬಿಷ್ಣೋಯ್, ಸುದರ್ಶನ್ ಮತ್ತು ಸುಂದರ್ ಅವರ ವಿಕೆಟ್ ಪಡೆದರು.
14ನೇ ಓವರ್‌ನಲ್ಲಿ ಲಕ್ನೋಗೆ ಮತ್ತೊಂದು ವಿಕೆಟ್ ಸಿಕ್ಕಿತು. ರವಿ ಬಿಷ್ಣೋಯ್ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿದರು. 56 ರನ್ ಗಳಿಸಿ ಸುದರ್ಶನ್ ವಿಕೆಟ್ ಒಪ್ಪಿಸಿದರು
ಗುಜರಾತ್‌ಗೆ ಮೊದಲ ಹೊಡೆತ, ಶುಭಮನ್ ಗಿಲ್ 60 ರನ್ ಗಳಿಸಿ ಔಟಾದರು. ಅವೇಶ್ ಖಾನ್ ಅವರ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ಲಾಂಗ್ ಆನ್ ಬೌಂಡರಿಯಲ್ಲಿ ಕ್ಯಾಚ್ ನೀಡಿದರು.
ಸಾಯಿ ಸುದರ್ಶನ್ 32 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಐಪಿಎಲ್‌ನಲ್ಲಿ ಅವರ 10 ನೇ ಅರ್ಧಶತಕವಾಗಿದೆ. ಸಾಯಿ ಸುದರ್ಶನ್ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು.
ದಿಗ್ವೇಶ್ ರಥಿ ಓವರ್‌ನಲ್ಲಿ ಸಾಯಿ ಸುದರ್ಶನ್ ಕ್ಯಾಚ್ ಮಿಸ್ ಆಯಿತು. ಅಬ್ದುಲ್ ಸಮದ್ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು.
ಗುಜರಾತ್ 9.5 ಓವರ್‌ಗಳಲ್ಲಿ 100 ರನ್ ದಾಟಿತು, ಗುಜರಾತ್ ತಂಡ ಈಗ ಕನಿಷ್ಠ 200 ರನ್‌ಗಳ ಗುರಿಯನ್ನು ಹೊಂದಿದೆ.
ಶುಭಮನ್ ಗಿಲ್ ಮತ್ತೊಂದು ಅರ್ಧಶತಕ ದಾಖಲಿಸಿದ್ದಾರೆ. 31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಗಿಲ್ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕೇವಲ 5.1 ಓವರ್‌ಗಳಲ್ಲಿ ಗಿಲ್ ಮತ್ತು ಸುದರ್ಶನ್ ಐವತ್ತು ರನ್‌ಗಳನ್ನು ಸ್ಕೋರ್‌ಬೋರ್ಡ್‌ನಲ್ಲಿ ಕಲೆಹಾಕಿದರು. ಇದೀಗ ಸ್ಕೋರ್ 200 ದಾಟುವ ಸಾಧ್ಯತೆ ಇದೆ. ಸುದರ್ಶನ್ ಮತ್ತು ಗಿಲ್ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಗುಜರಾತ್ ತಂಡಕ್ಕೆ ಗಿಲ್-ಸುದರ್ಶನ್ ವೇಗದ ಆರಂಭ ನೀಡಿದ್ದಾರೆ. ಎರಡನೇ ಓವರ್‌ನಲ್ಲಿ ಗಿಲ್ ಮತ್ತು ಸಾಯಿ ಸುದರ್ಶನ್ ತಲಾ ಒಂದು ಬೌಂಡರಿ ಬಾರಿಸಿದರು. ಇಬ್ಬರೂ ಸೇರಿ 13 ರನ್ ಗಳಿಸಿದರು.
ಗುಜರಾತ್ ಇನ್ನಿಂಗ್ಸ್ ಆರಂಭವಾಗಿದೆ. ಗುಜರಾತ್ ಪರ ಸಾಯಿ ಸುದರ್ಶನ್ ಅವರೊಂದಿಗೆ ಕ್ಯಾಪ್ಟನ್ ಶುಭಮನ್ ಗಿಲ್ ಕಣಕ್ಕಿಳಿದಿದ್ದಾರೆ.
ಶುಭಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಶೆರ್ಫಾನೆ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಅರ್ಷದ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್.
ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ರಿಷಬ್ ಪಂತ್, ಹಿಮ್ಮತ್ ಸಿಂಗ್, ಡೇವಿಡ್ ಮಿಲ್ಲರ್, ದಿಗ್ವೇಶ್ ಸಿಂಗ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಆಕಾಶ್ ದೀಪ್, ಅವೇಶ್ ಖಾನ್, ರವಿ ಬಿಷ್ಣೋಯ್.
ಟಾಸ್ ಗೆದ್ದ ಲಕ್ನೋ ನಾಯಕ ರಿಷಬ್ ಪಂತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 3:03 pm, Sat, 12 April 25