LSG vs RCB: Kಕೊಹ್ಲಿ Gಗ್ಲೆನ್ Fಫಾಫ್ ನೋಡಲು ಅಧೀರನ ಎಂಟ್ರಿ..!

Adheera and Ramika Sen: ಆರ್​ಸಿಬಿ-ಲಕ್ನೋ ನಡುವಣ ಕದನದ ವೇಳೆ ಅಧೀರನ ಉಪಸ್ಥಿತಿ ಇರಲಿದೆ. ಅಲ್ಲದೆ ಕದನ ಕೂತಹಲವನ್ನು ರಮಿಕಾ ಸೇನ್ ಅಲಿಯಾಸ್ ರವೀನಾ ಟಂಡನ್ ಕೂಡ ಕಣ್ತುಂಬಿಕೊಳ್ಳಲಿದ್ದಾರೆ.

LSG vs RCB: Kಕೊಹ್ಲಿ Gಗ್ಲೆನ್ Fಫಾಫ್ ನೋಡಲು ಅಧೀರನ ಎಂಟ್ರಿ..!
RCB-Sanjay Dutt
Updated By: ಝಾಹಿರ್ ಯೂಸುಫ್

Updated on: Apr 19, 2022 | 6:31 PM

ಕೆಜಿಎಫ್ ಚಾಪ್ಟರ್-2 (KGF Chapter 2) ಅಬ್ಬರ ಜೋರಾಗಿದೆ. ರಾಕಿ ಭಾಯ್ ಆರ್ಭಟ, ಅಧೀರ ಸಂಜಯ್ ದತ್ ಅವರ ಘರ್ಜನೆಯನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದರ ನಡುವೆ ರಾಕಿ ಭಾಯ್ ಅಡ್ಡಾದಲ್ಲಿ ಆರ್​ಸಿಬಿ (RCB) ಆಟಗಾರರು ಕೂಡ ಕಾಣಿಸಿಕೊಂಡಿದ್ದರು. ಹೌದು, ಆರ್​ಸಿಬಿ ಆಟಗಾರರಿಗೆ ದಿನಗಳ ಹಿಂದೆಯಷ್ಟೇ ಹೊಂಬಾಳೆ ಫಿಲಂಸ್ KGF Chapter 2 ಚಿತ್ರದ ವಿಶೇಷ  ಪ್ರದರ್ಶನ ಏರ್ಪಡಿಸಿತ್ತು. ವಿಶೇಷ ಎಂದರೆ ವಿದೇಶಿ ಆಟಗಾರರು ಸೇರಿ ನರಾಚಿ ದುನಿಯಾದಲ್ಲಿನ ಕಹಾನಿಯನ್ನು ಕ್ರಿಕೆಟಿಗರು ಕಣ್ತುಂಬಿಕೊಂಡಿದ್ದರು. ಇದೀಗ ನರಾಚಿಗಾಗಿ ಕಾದಾಡಿದ್ದ ಅಧೀರ ಮೈದಾನಕ್ಕೆ ಬರುತ್ತಿದ್ದಾರೆ. ಅದು ಕೂಡ ಪ್ರಧಾನಿ ರಮಿಕಾ ಸೇನ್ ಜೊತೆ ಎಂಬುದು ವಿಶೇಷ.

ಹೌದು, ಕೆಜಿಎಫ್ ಚಿತ್ರದ ಅಧೀರ ಸಂಜಯ್ ದತ್ ಹಾಗೂ ಪ್ರಧಾನಿ ಪಾತ್ರಧಾರಿ ರವೀನಾ ಟಂಡನ್ ಆರ್​ಸಿಬಿ ಪಂದ್ಯವನ್ನು ವೀಕ್ಷಿಸಲು ಬರುತ್ತಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಲಕ್ನೋ ಸೂಪರ್​ಜೈಂಟ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯ ವೀಕ್ಷಿಸಲು ಸಂಜು ಬಾಬ ಹಾಗೂ ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಆಗಮಿಸಲಿದ್ದಾರೆ.

ಅದರಂತೆ ಆರ್​ಸಿಬಿ-ಲಕ್ನೋ ನಡುವಣ ಕದನದ ವೇಳೆ ಅಧೀರನ ಉಪಸ್ಥಿತಿ ಇರಲಿದೆ. ಅಲ್ಲದೆ ಕದನ ಕೂತಹಲವನ್ನು ರಮಿಕಾ ಸೇನ್ ಅಲಿಯಾಸ್ ರವೀನಾ ಟಂಡನ್ ಕೂಡ ಕಣ್ತುಂಬಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲಂಸ್ ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ಇತ್ತೀಚೆಗಷ್ಟೇ ಹೊಂಬಾಳೆ ಫಿಲಂಸ್ ಹಾಗೂ ಆರ್​ಸಿಬಿ ಸಹಯೋಗವು ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಕಾರಣ, ಐಪಿಎಲ್​ ತಂಡ ಹಾಗೂ ಚಿತ್ರ ನಿರ್ಮಾಣ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ಕೈಜೋಡಿಸಿದ್ದವು.

 

ಬೆಂಗಳೂರೇ ತವರೂರಾಗಿರುವ ಎರಡೂ ಸಂಸ್ಥೆಗಳ ಸಹಯೋಗವು ಸಿನಿ-ಕ್ರಿಕೆಟ್ ಪ್ರೇಮಿಯರನ್ನು ಗಮನ ಸೆಳೆದಿತ್ತು. ಮೊದಲೇ ಆರ್​ಸಿಬಿ ತಂಡದಲ್ಲಿ ಕೆಜಿಎಫ್​ ಟ್ರೆಂಡ್ ಒಂದು ಸೃಷ್ಟಿಯಾಗಿದ್ದ ಕಾರಣ (Kಕೊಹ್ಲಿ Gಗ್ಲೆನ್ ಮ್ಯಾಕ್ಸ್​ವೆಲ್​ Fಫಾಫ್ ಡುಪ್ಲೆಸಿಸ್) ಕೆಜಿಎಫ್ ಚಾಪ್ಟರ್-2 ಆರ್​ಸಿಬಿ ಅಭಿಮಾನಿಗಳ ಪಾಲಿಗೆ ವಿಶೇಷವಾಗಿತ್ತು. ಇದೀಗ ಸಹಯೋಗದ ಮುಂದುವರೆದ ಭಾಗವಾಗಿ ಆರ್​ಸಿಬಿ ಆಟಗಾರರು ಕೆಜಿಎಫ್​-2 ಚಿತ್ರವನ್ನು ವೀಕ್ಷಿಸಿದ್ದಾರೆ. ಹಾಗೆಯೇ ಇದೀಗ ಆರ್​ಸಿಬಿ ತಂಡದ ಆಟವನ್ನು ವೀಕ್ಷಿಸಲು ಅಧೀರ (ಸಂಜಯ್ ದತ್) ಹಾಗೂ ರಿಮಿಕಾ ಸೇನ್ (ರವೀನಾ ಟಂಡನ್) ಆಗಮಿಸುತ್ತಿದ್ದಾರೆ. ಹೀಗಾಗಿ ಆರ್​ಸಿಬಿ-ಲಕ್ನೋ ಪಂದ್ಯದ ವೇಳೆ ಸಂಜಯ್ ದತ್ ಹಾಗೂ ರವೀನಾ ಟಂಡನ್ ವಿಶೇಷ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ

Published On - 6:15 pm, Tue, 19 April 22