LSG vs RR: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರಾಜಸ್ಥಾನಕ್ಕೆ ಗೆದ್ದರಷ್ಟೆ ಉಳಿಗಾಲ

CSK vs GT, IPL 2022: ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಗುಜರಾತ್ ಟೈಟಾನ್ಸ್ ತಂಡ ಕಾದಾಟ ನಡೆಸಲಿದೆ. ದ್ವಿತೀಯ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿ ಆಗಲಿದೆ.

LSG vs RR: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರಾಜಸ್ಥಾನಕ್ಕೆ ಗೆದ್ದರಷ್ಟೆ ಉಳಿಗಾಲ
LSG vs RR IPL 2022
Follow us
TV9 Web
| Updated By: Vinay Bhat

Updated on:May 15, 2022 | 9:19 AM

ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ರಲ್ಲಿಂದು ಎರಡು ಪಂದ್ಯಗಳು ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಮೊದಲ ಪಂದ್ಯದಲ್ಲಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಈಗಾಗಲೇ ಪ್ಲೇ ಆಫ್​ಗೆ ಕ್ವಾಲಿಫೈ ಆಗಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (CSK vs GT) ತಂಡ ಕಾದಾಟ ನಡೆಸಲಿದೆ. ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಲಖನೌ ಸೂಪರ್ ಜೇಂಟ್ಸ್ ಹಾಗೂ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ (LSG vs RR) ತಂಡ ಮುಖಾಮುಖಿ ಆಗಲಿದೆ. ಗುಜರಾತ್ ಆಡಿರುವ 12 ಪಂದ್ಯಗಳಿಂದ 9 ಗೆಲುವು ದಾಖಲಿಸಿ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳುವ ಸಲುವಾಗಿ ಸಿಎಸ್‌ಕೆ ಗೆಲುವಿಗಾಗಿ ಹೋರಾಡಬೇಕಿದೆ. ಇತ್ತ ಲಖನೌ 12ರಲ್ಲಿ 8 ಪಂದ್ಯಗಳನ್ನು ಜಯಿಸಿದ್ದು, 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಲಖನೌವನ್ನು ಮಣಿಸಿದರೆ ರಾಜಸ್ಥಾನ್ ಪ್ಲೇ ಆಫ್​ಗೆ ಹತ್ತಿರವಾಗಲಿದೆ.

ಸಿಎಸ್​ಕೆ vs ಗುಜರಾತ್:

ಟೂರ್ನಿಯಲ್ಲಿ ಇದುವರೆಗೂ ಪ್ರಭುತ್ವ ಸಾಧಿಸುತ್ತಾ ಬಂದಿರುವ ಗುಜರಾತ್ ತಂಡ ಇದೀಗ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಗುರಿಯಲ್ಲಿದೆ. ಕಳೆದ ಪಂದ್ಯದಲ್ಲಿ ಲಖನೌ ಎದುರು ಸಾಧಾರಣ ಮೊತ್ತವನ್ನು ಕಟ್ಟಿಹಾಕಿಕೊಳ್ಳುವ ಮೂಲಕ ಗುಜರಾತ್ ಬೌಲರ್‌ಗಳು ಗಮನಸೆಳೆದಿದ್ದರು. ಗುಜರಾತ್‌ ಹಿಂದಿನೆರಡು ಮುಖಾಮುಖಿಗಳಲ್ಲಿ ಒಂದು ಸೋಲು, ಒಂದು ಗೆಲುವು ದಾಖಲಿಸಿದೆ. ಮುಂಬೈ ಎದುರು 5 ವಿಕೆಟ್‌ಗಳಿಂದ ಎಡವಿದರೆ, ಲಖನೌ ಎದುರು 144 ರನ್‌ ಗಳಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಗುಜರಾತ್‌ ಹಾರ್ಡ್‌ ಹಿಟ್ಟರ್ ಅಥವಾ ಟಿ20 ಸ್ಟಾರ್‌ ಆಟಗಾರರನ್ನು ಹೊಂದಿರುವ ತಂಡವೇನೂ ಅಲ್ಲ. ಆದರೆ ತಂಡವಾಗಿ ಅದು ತೋರ್ಪಡಿಸಿದ ನಿರ್ವಹಣೆ ಅಮೋಘ. ಹೀಗಾಗಿ ಗುಜರಾತ್‌ ಟೈಟಾನ್ಸ್‌ ಈ ಬಾರಿಯ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ
Image
SRH vs KKR: 15 ಸೆಕೆಂಡ್​ಗಳ ನಂತರ ಡಿಆರ್​ಎಸ್​; ಮನವಿಯನ್ನು ಒಪ್ಪದ ಅಂಪೈರ್ ಜತೆ ರಿಂಕು ಸಿಂಗ್ ವಾಗ್ವಾದ​
Image
Andrew Symonds: ಕ್ರಿಕೆಟ್ ಲೋಕಕ್ಕೆ ಮತ್ತೊಂದು ಆಘಾತ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್‌ ನಿಧನ
Image
KKR vs SRH IPL Match Result: ರಸೆಲ್ ಅಬ್ಬರಕ್ಕೆ ಮಂಕಾದ ಹೈದರಾಬಾದ್; ಕೆಕೆಆರ್ ಪ್ಲೇ ಆಫ್ ಕನಸು ಜೀವಂತ
Image
Sachin Tendulkar: ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ‘ಫೇಕ್’

ಶುಭ್ಮನ್ ಗಿಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಟಿಯಾ, ವೃದ್ಧಿಮನ್ ಸಹಾ, ಹಾರ್ದಿಕ್ ಪಾಂಡ್ಯ ಜಿಟಿಯ ಪ್ರಮಖ ಆಧಾರ. ಇವರು ಪರಿಸ್ಥಿತಿಗೆ ತಕ್ಕನಾದ ಆಟವನ್ನು ಆಡಬಲ್ಲರು. ಬೌಲಿಂಗ್ ವಿಭಾಗದಲ್ಲಿ ಲಾಕಿ ಫಾರ್ಗ್ಯುಸನ್, ಮೊಹಮ್ಮದ್ ಶಮಿ, ಪ್ರದೀಪ್ ಸಾಂಗ್ವಾನ್ ಶಿಸ್ತು ಬದ್ಧ ದಾಳಿ ಸಂಘಟಿಸಬೇಕಿದೆ. ಸ್ಪಿನ್ ಬೌಲರ್ ರಶೀದ್ ಖಾನ್ ಮೋಡಿ ನಡೆದರೆ ಗೆಲುವು ನಿಶ್ಚಿತ.

ಇತ್ತ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಸಿಎಸ್‌ಕೆ ತಂಡ ಕಡೇ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿ ಟೂರ್ನಿಗೆ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ. ಚೆನ್ನೈ ಪರ ಇನ್ನಿಂಗ್ಸ್ ಆರಂಭಿಸುವ ರುತುರಾಜ್ ಗಾಯಕ್ವಾಡ್ ಹಾಗೂ ಡಾನ್ವೆ ಕಾನ್ವೆ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಮಧ್ಯಮ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ, ಶಿವಂ ದುಬೆ, ಅಂಬಟಿ ರಾಯುಡು ದೊಡ್ಡ ಇನ್ನಿಂಗ್ಸ್ ಆಡಬೇಕಿದೆ. ಕಳೆದ ಪಂದ್ಯದಲ್ಲಿ ಆಡಿದ ರೀತಿ ಧೋನಿ ಸ್ಥಿರ ಪ್ರದರ್ಶನ ನೀಡಬೇಕಿದೆ. ಮುಕೇಶ್ ಚೌಧರಿ, ಸಿಮ್ರಾನ್‌ಜೀತ್ ಸಿಂಗ್ ಗಮನಸೆಳೆಯುತ್ತಿದ್ದಾರೆ. ಮೊದಲ ಹಣಾಹಣಿಯಲ್ಲಿ ಗುಜರಾತ್ ಎದುರು ಅನುಭವಿಸಿದ್ದ ಸೋಲಿಗೂ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಲಖನೌ vs ರಾಜಸ್ಥಾನ್:

ಇತ್ತ ಲಖನೌ ಇಂದಿನ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಪ್ರವೇಶಿಸುವುದು ಖಚಿತವಾಗಲಿದೆ. ಇದುವರೆಗೂ ಆಡಿರುವ 12 ಪಂದ್ಯಗಳಿಂದ 8 ಜಯ ದಾಖಲಿಸಿರುವ ರಾಹುಲ್ ಪಡೆ, 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಲಖನೌಗೆ ಹೆಚ್ಚಿನ ಆಸರೆ ಒದಗಿಸಿದವರೆಂದರೆ ಆರಂಭಿಕರಾದ ಕೆಎಲ್ ರಾಹುಲ್‌ ಮತ್ತು ಡಿ ಕಾಕ್‌. ಇವರಲ್ಲಿ ರಾಹುಲ್‌ ಕೆಲವು ಸೊನ್ನೆ ಸುತ್ತಿದರೂ 2 ಸೆಂಚುರಿ ಮೂಲಕ ಪ್ಯಾಚಪ್‌ ಮಾಡಿಕೊಂಡಿದ್ದಾರೆ. 12 ಪಂದ್ಯಗಳಿಂದ 459 ರನ್‌ ಪೇರಿಸಿದ್ದಾರೆ. ಡಿ ಕಾಕ್‌ 12 ಪಂದ್ಯಗಳಿಂದ 355 ರನ್‌ ಬಾರಿಸಿದ್ದಾರೆ. ದೀಪಕ್‌ ಹೂಡಾ ತಂಡದ ಮತ್ತೋರ್ವ ಪ್ರಮುಖ ಸ್ಕೋರರ್‌. ಇವರ ಗಳಿಕೆ 347 ರನ್‌. ಆದರೆ ಗುಜರಾತ್‌ ಎದುರಿನ ಕೊನೆಯ ಪಂದ್ಯದಲ್ಲಿ 82 ರನ್ನಿಗೆ ಗಂಟುಮೂಟೆ ಕಟ್ಟಿದ್ದು ಲಖನೌಗೆ ಎದುರಾಗಿರುವ ದೊಡ್ಡ ಹಿನ್ನಡೆ.

ಇತ್ತ ರಾಜಸ್ಥಾನ ತಂಡಕ್ಕೆ ಪ್ಲೇಆಫ್ ಖಾತ್ರಿಗಾಗಿ ಗೆಲುವು ಅನಿವಾರ್ಯವಾಗಿದೆ. ಇದುವರೆಗೂ ಆಡಿರುವ 12 ಪಂದ್ಯಗಳಿಂದ 7 ಜಯ ಕಂಡಿರುವ ರಾಯಲ್ಸ್ 14 ಪಾಯಿಂಟ್ಸ್ ಹೊಂದಿದ್ದು, ಈ ಪಂದ್ಯದಲ್ಲಿ ಗೆದ್ದರೆ ಮುಂದಿನ ಹಂತಕ್ಕೆ ಮತ್ತಷ್ಟು ಸನಿಹವಾಗಲಿದೆ. ಜಾಸ್‌ ಬಟ್ಲರ್‌ 3 ಸೆಂಚುರಿ, 3 ಅರ್ಧ ಶತಕಗಳ ನೆರವಿನಿಂದ 625 ರನ್‌ ಪೇರಿಸಿದ್ದಾರೆ. ನಾಯಕ ಸಂಜು ಸ್ಯಾಮ್ಸನ್‌ ಪೂರ್ಣ ಸಾಮರ್ಥ್ಯ ತೋರ್ಪಡಿಸದೇ ಹೋದರೂ 12 ಪಂದ್ಯಗಳಿಂದ 327 ರನ್‌ ಹೊಡೆದಿದ್ದಾರೆ. ದೇವದತ್ತ ಪಡಿಕ್ಕಲ್‌ ಕೂಡ ಭರವಸೆಗಳಾಗಿದ್ದಾರೆ. ಬೌಲಿಂಗ್‌ ವಿಭಾಗದಲ್ಲೂ ಚಹಲ್‌-ಅಶ್ವಿ‌ನ್‌ ಮೋಡಿಗೈಯುತ್ತಿದೆ. ಟ್ರೆಂಟ್‌ ಬೌಲ್ಟ್ ಮತ್ತು ಪ್ರಸಿದ್ಧ್ ಕೃಷ್ಣ ವೇಗದ ವಿಭಾಗದ ಪ್ರಮುಖರು.

ಮತ್ತಷ್ಟು ಐಪಿಎಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 am, Sun, 15 May 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್