IPL 2022 Points Table: ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಇಬ್ಬರು ಆರ್​ಸಿಬಿ ಪ್ಲೇಯರ್ಸ್: ಪಾಯಿಂಟ್ ಟೇಬಲ್, ಆರೆಂಜ್ ಕ್ಯಾಪ್ ಮಾಹಿತಿ ಇಲ್ಲಿದೆ

IPL 2022 Points Table: ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಇಬ್ಬರು ಆರ್​ಸಿಬಿ ಪ್ಲೇಯರ್ಸ್: ಪಾಯಿಂಟ್ ಟೇಬಲ್, ಆರೆಂಜ್ ಕ್ಯಾಪ್ ಮಾಹಿತಿ ಇಲ್ಲಿದೆ
IPL 2022

IPL 2022 Orange Cap and Purple Cap: ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

TV9kannada Web Team

| Edited By: Vinay Bhat

May 15, 2022 | 10:12 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15ನೇ ಆವೃತ್ತಿ ರೋಚಕ ಘಟ್ಟದತ್ತ ಸಾಗುತ್ತಿದೆ. ಒಂದು ತಂಡದ ಸೋಲು-ಗೆಲುವು ಇನ್ನೊಂದು ತಂಡದ ಅಳಿವು-ಉಳಿವಿನ ಲೆಕ್ಕಚಾರ ಆರಂಭವಾಗಿದೆ. ಈ ಬಾರಿ ಹಿಂದಿನ ಸೀಸನ್​ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದ ತಂಡ ಹೊಸ ಆಟಗಾರರನ್ನು ಸೇರಿಸಿ ಭರ್ಜರಿ ಪ್ರದರ್ಶನ ತೋರುತ್ತಿದ್ದರೆ, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಇದರ ನಡುವೆ ಎರಡು ಹೊಸ ತಂಡಗಳಾದ ಗುಜರಾತ್ ಮತ್ತು ಲಖನೌ ಕೂಡ ನಿರೀಕ್ಷೆ ಹುಟ್ಟಿಸಿದ್ದು, ಹಾರ್ದಿಕ್ ಪಡೆ ಕ್ವಾಲಿಫೈ ಆದ ಮೊದಲ ತಂಡವಾಗಿದೆ. ಈ ಬಾರಿ ಅತಿ ಹೆಚ್ಚು ರನ್ ಕಲೆಹಾಕಿದವರಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಕಿತ್ತವರು ಪರ್ಪಲ್ ಕ್ಯಾಪ್ ಧರಿಸುತ್ತಾರೆ. ಹಾಗಾದ್ರೆ ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

ಪಾಯಿಂಟ್ ಟೇಬಲ್:

  1. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲ್ಲಿದ್ದು ಕ್ವಾಲಿಫೈ ಆದ ಮೊದಲ ತಂಡವಾಗಿದೆ. ಆಡಿದ 12 ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಸೋಲು, ಒಂಬತ್ತರಲ್ಲಿ ಗೆಲುವು ಕಂಡು 18 ಅಂಕದೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ಗುಜರಾತ್ ನಿವ್ವಳ ರನ್ ರೇಟ್ +0.376 ಆಗಿದೆ.
  2. ಮತ್ತೊಂದು ಹೊಸ ತಂಡವಾದ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ಎರಡನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯಗಳ ಪೈಕಿ ಎಂಟರಲ್ಲಿ ಗೆದ್ದು ನಾಲ್ಕು ಪಂದ್ಯಗಳಲ್ಲಿ ಸೋತು ಒಟ್ಟು 16 ಅಂಕದೊಂದಿಗೆ ಲಖನೌದ ನಿವ್ವಳ ರನ್ ರೇಟ್ 0.385 ಆಗಿದೆ.
  3. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಇವರು ಆಡಿದ 12 ಪಂದ್ಯಗಳ ಪೈಕಿ ಎಂಟರಲ್ಲಿ ಗೆಲುವು ನಾಲ್ಕರಲ್ಲಿ ಸೋಲುಂಡು ಒಟ್ಟು 14 ಅಂಕ ಸಂಪಾದಿಸಿದೆ. ಆರ್​ಆರ್​ +0.228 ರನ್​​ರೇಟ್ ಹೊಂದಿದೆ.
  4. ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 13 ಪಂದ್ಯಗಳಲ್ಲಿ ಆರರಲ್ಲಿ ಸೋಲು ಏಳರಲ್ಲಿ ಗೆಲುವು ಕಂಡಿದೆ. 14 ಅಂಕದೊಂದಿಗೆ RCB ನಿವ್ವಳ ರನ್ ರೇಟ್ -0.323 ಆಗಿದೆ.
  5. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಆರ್​ಆರ್​ ವಿರುದ್ಧ ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 12 ಅಂಕದೊಂದಿಗೆ ಡೆಲ್ಲಿಯ ನಿವ್ವಳ ರನ್ ರೇಟ್ 0.210 ಆಗಿದೆ.
  6. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರನೇ ಸ್ಥಾನದಲ್ಲಿದೆ. ಆಡಿದ 13 ಪಂದ್ಯಗಳ ಪೈಕಿ ಆರರಲ್ಲಿ ಗೆಲುವು, ಏಳರಲ್ಲಿ ಸೋಲು ಕಂಡು ಒಟ್ಟು 12 ಅಂಕದೊಂದಿಗೆ 0.160 ರನ್​​ರೇಟ್​ ಹೊಂದಿದೆ.
  7. ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಏಳನೇ ಸ್ಥಾನದಲ್ಲಿದೆ. 12 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 12 ಅಂಕದೊಂದಿಗೆ ಪಂಜಾಬ್ ನಿವ್ವಳ ರನ್ ರೇಟ್ 0.023 ಆಗಿದೆ.
  8. ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಎಂಟನೇ ಸ್ಥಾನಕ್ಕೆ ಕುಸಿದಿದೆ. ಆಡಿದ 12 ಪಂದ್ಯಗಳಲ್ಲಿ ಐದರಲ್ಲಷ್ಟೆ ಜಯ ಸಾಧಿಸಿ 10 ಅಂಕ ಸಂಪಾದಿಸಿ -0.270 ರನ್ ರೇಟ್ ಹೊಂದಿದೆ.
  9. ಇತ್ತ ಆಡಿದ 12 ಪಂದ್ಯಗಳ ಪೈಕಿ 8 ರಲ್ಲಿ ಸೋಲು ನಾಲ್ಕರಲ್ಲಿ ಗೆಲುವು ಕಂಡಿರುವ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ಅಂಕದೊಂದಿಗೆ -0.181 ರನ್​ರೇಟ್​​ ಹೊಂದಿ ಎಂಟನೇ ಸ್ಥಾನದಲ್ಲಿದೆ.
  10. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಎಂಐ ಆಡಿದ 12 ಪಂದ್ಯದ ಪೈಕಿ ಮೂರರಲ್ಲಿ ಜಯ ಸಾಧಿಸಿದೆ. ಮುಂಬೈ ನಿವ್ವಳ ರನ್ ರೇಟ್ -0.613.

ಆರೆಂಜ್ ಕ್ಯಾಪ್:

ಅತಿ ಹೆಚ್ಚು ರನ್ ಗಳಿಸಿದವರ ಮೊದಲ ಸ್ಥಾನದಲ್ಲಿ ಆರ್​ ಆರ್​ ತಂಡದ ಜೋಸ್ ಬಟ್ಲರ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದು ಮೂರು ಅರ್ಧಶತಕ 3 ಶತಕದೊಂದಿಗೆ ಇವರು 12 ಪಂದ್ಯಗಳಿಂದ 625 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಲಖನೌ ತಂಡದ ನಾಯಕ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದು 12 ಪಂದ್ಯಗಳಿಂದ 459 ರನ್ ಗಳಿಸಿದ್ದಾರೆ. ಮೂರನೇ ಸ್ಥಾನಕ್ಕೆ ಡೆಲ್ಲಿ ಬ್ಯಾಟರ್ ಡೇವಿಡ್ ವಾರ್ನರ್ ಜಿಗಿದಿದ್ದು 10 ಪಂದ್ಯಗಳಿಂದ 427 ರನ್ ಕಲೆಹಾಕಿದ್ದಾರೆ. ಶಿಖರ್ ಧವನ್ 12 ಪಂದ್ಯಗಳಿಂದ 402 ರನ್ ಸಿಡಿಸಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ 13 ಪಂದ್ಯಗಳಲ್ಲಿ 399 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್:

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ವನಿಂದು ಹಸರಂಗ ಟಾಪ್​ನಲ್ಲಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದು 23 ವಿಕೆಟ್ ಕಬಳಿಸಿದ್ದಾರೆ. ಆರ್​ಆರ್​​ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಎರಡನೇ ಸ್ಥಾನಕ್ಕೆ ಕುಸಿದಿದ್ದು 12 ಪಂದ್ಯಗಳಿಂದ 23 ವಿಕೆಟ್ ಕಿತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಕಗಿಸೊ ರಬಾಡ ಅವರಿದ್ದು 11 ಪಂದ್ಯಗಳಿಂದ 21 ವಿಕೆಟ್ ತಮ್ಮದಾಗಿಸಿದ್ದಾರೆ.  ಹರ್ಷಲ್ ಪಟೇಲ್ 4ನೇ ಸ್ಥಾನದಲ್ಲಿದ್ದು 12 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಕುಲ್ದೀಪ್ ಯಾದವ್ 12 ಪಂದ್ಯಗಳಲ್ಲಿ 18 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada