5 ಸಿಕ್ಸ್ಗಳೊಂದಿಗೆ ಅಬ್ಬರಿಸಿದ ಅಭಿನವ್: ಶಿವಮೊಗ್ಗ ಲಯನ್ಸ್ಗೆ ರೋಚಕ ಜಯ
Maharaja Trophy 2023: 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅನಿರುದ್ಧ್ ಜೋಶಿ ಮಂಗಳೂರು ಡ್ರಾಗನ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜೋಶಿ 31 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅರ್ಧಶತಕ ಸಿಡಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿಯ 3ನೇ ಟಿ20 ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ದ ಶಿವಮೊಗ್ಗ ಲಯನ್ಸ್ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ತಂಡದ ನಾಯಕ ಕೃಷ್ಣಪ್ಪ ಗೌತಮ್ ಶಿವಮೊಗ್ಗ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡಕ್ಕೆ ರೋಹನ್ ಕದಮ್ (27) ಹಾಗೂ ನಿಹಾಲ್ ಉಳ್ಳಾಲ್ (28) ಉತ್ತಮ ಆರಂಭ ಒದಗಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೋಹಿತ್ ಕುಮಾರ್ 18 ರನ್ಗಳಿಸಿ ಔಟಾದರು.
ಆ ಬಳಿಕ ಜೊತೆಯಾದ ನಾಯಕ ಶ್ರೇಯಸ್ ಗೋಪಾಲ್ ಹಾಗೂ ಅಭಿನವ್ ಮನೋಹರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿದರು. 32 ಎಸೆತಗಳಲ್ಲಿ 46 ರನ್ ಬಾರಿಸಿ ಶ್ರೇಯಸ್ ಗೋಪಾಲ್ ಔಟಾದರು.
ಆದರೆ ಇನ್ನೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಅಭಿನವ್ ಮನೋಹರ್ 25 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 50 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನೊಂದಿಗೆ ಶಿವಮೊಗ್ಗ ಲಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು.
Weather Update: It was raining sixes ft. @Abhinavms36 & @ShreyasGopal19 ☔⚡#MDvSML #IlliGeddavareRaja #MaharajaTrophy #KSCA #Karnataka pic.twitter.com/JVLnb4aNaX
— Maharaja Trophy T20 (@maharaja_t20) August 14, 2023
177 ರನ್ಗಳ ಕಠಿಣ ಗುರಿ ಬೆನ್ನತ್ತಿದ ಮಂಗಳೂರು ಡ್ರಾಗನ್ಸ್ ತಂಡವು ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇದಾಗ್ಯೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ. ಸಿದ್ಧಾರ್ಥ್ 35 ಎಸೆತಗಳಲ್ಲಿ 46 ರನ್ಗಳ ಕೊಡುಗೆ ನೀಡಿದರು.
ಹಾಗೆಯೇ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅನಿರುದ್ಧ್ ಜೋಶಿ ಮಂಗಳೂರು ಡ್ರಾಗನ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜೋಶಿ 31 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅರ್ಧಶತಕ ಸಿಡಿಸಿದರು. ಈ ಹಂತದಲ್ಲಿ ವಿ. ಕೌಶಿಕ್ ಎಸೆತವನ್ನು ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ಔಟ್ ಆದರು.
ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕುವ ಮೂಲಕ ಮಂಗಳೂರು ಡ್ರಾಗನ್ಸ್ ತಂಡವು 9 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಶಿವಮೊಗ್ಗ ಲಯನ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲೇ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಮಂಗಳೂರು ಡ್ರಾಗನ್ಸ್ ಪ್ಲೇಯಿಂಗ್ 11: ನಿಕಿನ್ ಜೋಸ್ , ಶರತ್ ಬಿ.ಆರ್ (ವಿಕೆಟ್ ಕೀಪರ್) , ಕೃಷ್ಣಮೂರ್ತಿ ಸಿದ್ಧಾರ್ಥ್ , ಅನೀಶ್ವರ್ ಗೌತಮ್ , ಕೃಷ್ಣಪ್ಪ ಗೌತಮ್ (ನಾಯಕ) , ಅನಿರುದ್ಧ್ ಜೋಶಿ , ಆದಿತ್ಯ ಗೋಯಲ್ , ಆನಂದ್ ದೊಡ್ಡಮನಿ , ಪ್ರತೀಕ್ ಜೈನ್ , ನವೀನ್ ಎಂಜಿ , ಧೀರಜ್ ಜೆ ಗೌಡ , ರೋಹನ್ ಪಾಟೀಲ್.
ಇದನ್ನೂ ಓದಿ: ಟೀಮ್ ಇಂಡಿಯಾ ಪಾಲಿಗೆ ಶ್ರೇಯಸ್ ಅಯ್ಯರ್ ಅನಿವಾರ್ಯ..!
ಶಿವಮೊಗ್ಗ ಲಯನ್ಸ್ ಪ್ಲೇಯಿಂಗ್ 11: ರೋಹನ್ ಕದಮ್ , ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್) , ರೋಹಿತ್ ಕುಮಾರ್, ಶ್ರೇಯಸ್ ಗೋಪಾಲ್ (ನಾಯಕ) , ಅಭಿನವ್ ಮನೋಹರ್ , ಕ್ರಾಂತಿ ಕುಮಾರ್ , ಎಸ್ ಶಿವರಾಜ್ , ಪ್ರಣವ್ ಭಾಟಿಯಾ , ಎಚ್ ಎಸ್ ಶರತ್ , ನಿಶ್ಚಿತ್ ಎನ್ ರಾವ್ , ವಾಸುಕಿ ಕೌಶಿಕ್.