ಲವ್ನೀತ್ ಶತಕ ವ್ಯರ್ಥ: ಗೆದ್ದು ಬೀಗಿದ ಮೈಸೂರು ವಾರಿಯರ್ಸ್
Maharaja Trophy T20 2023: ವಿಶೇಷ ಎಂದರೆ ಇದು ಹುಬ್ಬಳ್ಳಿ ಟೈಗರ್ಸ್ ತಂಡದ ಮೊದಲ ಸೋಲು. ಕಳೆದ ಐದು ಪಂದ್ಯಗಳಲ್ಲಿ ಸತತ ಗೆಲುವಿನೊಂದಿಗೆ ನಾಗಾಲೋಟ ಮುಂದುವರೆಸಿದ್ದ ಮನೀಶ್ ಪಾಂಡೆಗೆ ಸೋಲುಣಿಸುವಲ್ಲಿ ಕೊನೆಗೂ ಮೈಸೂರು ವಾರಿಯರ್ಸ್ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರುಣ್ ನಾಯರ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಹುಬ್ಳಳ್ಳಿ ಟೈಗರ್ಸ್ ಪರ ಆರಂಭಿಕ ಆಟಗಾರ ಲವ್ನೀತ್ ಸಿಸೋಡಿಯಾ ಅಬ್ಬರಿಸಿದ್ದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಎಡಗೈ ದಾಂಡಿಗ ಮೈಸೂರು ವಾರಿಯರ್ಸ್ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ಲವ್ನೀತ್ ಬ್ಯಾಟ್ನಿಂದ 62 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 7 ಫೋರ್ಗಳು ಮೂಡಿಬಂತು. ಅಲ್ಲದೆ ಭರ್ಜರಿ ಶತಕವನ್ನು ಸಿಡಿಸಿದರು. ಆದರೆ ಶತಕದ ಬೆನ್ನಲ್ಲೇ ಹಿಟ್ ವಿಕೆಟ್ ಆಗುವ ಮೂಲಕ ಲವ್ನೀತ್ ಸಿಸೋಡಿಯಾ (105) ಹೊರನಡೆದರು.
Precision and power. 🔥🤩
Taking a look at Luvnith Sisodia’s incredible century! 🔁 #MWvHT #IlliGeddavareRaja #MaharajaTrophy #KSCA #Karnataka pic.twitter.com/NmRIJQCicH
— Maharaja Trophy T20 (@maharaja_t20) August 20, 2023
ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಮನೀಶ್ ಪಾಂಡೆ 33 ರನ್ಗಳ ಕಾಣಿಕೆ ನೀಡಿದರು. ಇದರೊಂದಿಗೆ ಹುಬ್ಳ್ಳಳ್ಳಿ ಟೈಗರ್ಸ್ ತಂಡದ ಮೊತ್ತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ಕ್ಕೆ ಬಂದು ನಿಂತಿತು.
186 ರನ್ಗಳ ಕಠಿಣ ಗುರಿ ಪಡೆದ ಮೈಸೂರು ವಾರಿಯರ್ಸ್ ತಂಡಕ್ಕೆ ಆರಂಭಿಕ ದಾಂಡಿಗ ರವಿಕುಮಾರ್ ಸಮರ್ಥ್ ಸ್ಪೋಟಕ ಆರಂಭ ಒದಗಿಸಿದ್ದರು. 42 ಎಸೆತಗಳನ್ನು ಎದುರಿಸಿದ ಸಮರ್ಥ್ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 73 ರನ್ಗಳಿಸಿ ರನೌಟ್ ಆದರು.
ಆ ಬಳಿಕ ಬಂದ ನಾಯಕ ಕರುಣ್ ನಾಯರ್ 25 ಎಸೆತಗಳಲ್ಲಿ 45 ರನ್ ಚಚ್ಚಿದರು. ಇನ್ನು ಅಜಿತ್ ಕಾರ್ತಿಕ್ 29 ರನ್ಗಳ ಕೊಡುಗೆ ನೀಡಿದರು. ಇನ್ನು ಶೊಯೇಬ್ ಮ್ಯಾನೇಜರ್ 16 ಎಸೆತಗಳಲ್ಲಿ ಅಜೇಯ 21 ರನ್ ಹಾಗೂ ಶಿವಕುಮಾರ್ ರಕ್ಷಿತ್ 11 ಎಸೆತಗಳಲ್ಲಿ ಅಜೇಯ 22 ರನ್ ಬಾರಿಸುವ ಮೂಲಕ 18.5 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಮೈಸೂರು ವಾರಿಯರ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ವಿಶೇಷ ಎಂದರೆ ಇದು ಹುಬ್ಬಳ್ಳಿ ಟೈಗರ್ಸ್ ತಂಡದ ಮೊದಲ ಸೋಲು. ಕಳೆದ ಐದು ಪಂದ್ಯಗಳಲ್ಲಿ ಸತತ ಗೆಲುವಿನೊಂದಿಗೆ ನಾಗಾಲೋಟ ಮುಂದುವರೆಸಿದ್ದ ಮನೀಶ್ ಪಾಂಡೆಗೆ ಸೋಲುಣಿಸುವಲ್ಲಿ ಕೊನೆಗೂ ಮೈಸೂರು ವಾರಿಯರ್ಸ್ ಯಶಸ್ವಿಯಾಗಿದ್ದಾರೆ.
ಮೈಸೂರು ವಾರಿಯರ್ಸ್ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಕೋದಂಡ ಅಜಿತ್ ಕಾರ್ತಿಕ್ , ಕರುಣ್ ನಾಯರ್ (ನಾಯಕ) , ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್) , ಮನೋಜ್ ಭಾಂಡಗೆ , ಜಗದೀಶ ಸುಚಿತ್ , ಮುರಳೀಧರ ವೆಂಕಟೇಶ್ , ಮೋನಿಶ್ ರೆಡ್ಡಿ , ಶಶಿ ಕುಮಾರ್ ಕೆ , ಶ್ರೀಶ ಆಚಾರ್ , ಶೋಯಬ್ ಮ್ಯಾನೇಜರ್ , ಲಂಕೇಶ್ ಕೆ ಎಸ್.
ಇದನ್ನೂ ಓದಿ: ಏಷ್ಯಾಕಪ್ಗೆ 17 ಸದಸ್ಯರ ಸಂಭಾವ್ಯ ಟೀಮ್ ಇಂಡಿಯಾ ಹೀಗಿದೆ
ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್) , ಮೊಹಮ್ಮದ್ ತಾಹಾ , ಬೆಂಗಳೂರು ಮೋಹಿತ್ , ನಾಗ ಭರತ್ , ಮನೀಶ್ ಪಾಂಡೆ (ನಾಯಕ) , ಪ್ರವೀಣ್ ದುಬೆ , ಮನ್ವಂತ್ ಕುಮಾರ್ ಎಲ್ , ಕೆ ಸಿ ಕಾರ್ಯಪ್ಪ , ಸಂತೋಕ್ ಸಿಂಗ್ , ನಾಥನ್ ಡಿಮೆಲ್ಲೊ , ಎಂ ಬಿ ದರ್ಶನ್ , ಮಲ್ಲಿಕ್ ಸಾಬ್ ಸಿರೂರ್.