ICC Hall Of Fame: ಐಸಿಸಿ ಹಾಲ್ ಆಫ್ ಫೇಮ್‌ಗೆ ಮಹೇಲಾ ಜಯವರ್ಧನಾ, ಶಾನ್ ಪೊಲಾಕ್, ಜಾನೆಟ್ ಬ್ರಿಟಿನ್
ಭಾನುವಾರ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಕ್ಲೈವ್ ಲಾಯ್ಡ್ ಅವರು ಈ ಮೂವರು ಕ್ರಿಕೆಟಿಗರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಮಾಡಲಿದ್ದಾರೆ. 2009ರಲ್ಲಿ ಆರಂಭವಾದ ಹಾಲ್‌ನಲ್ಲಿ ಇದುವರೆಗೆ 106 ಖ್ಯಾತನಾಮ ಕ್ರಿಕೆಟಿಗರನ್ನು ಸೇರ್ಪಡೆ ಮಾಡಲಾಗಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಮಹೇಲಾ ಜಯವರ್ಧನೆ (Mahela Jayawardena), ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಶಾನ್ ಪೊಲಾಕ್ (Shaun Pollock) ಮತ್ತು ಇಂಗ್ಲೆಂಡಿನ ಮಾಜಿ ಆಟಗಾರ್ತಿ ಜೆನೆತ್ ಬ್ರಿಟಿನ್ (Janette Brittin) ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ (ICC Hall Of Fame) ಗೌರವ ನೀಡಲಾಗಿದೆ. ಇಂದು ಜರುಗಲಿರುವ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯದ ವೇಳೆ ಐಸಿಸಿ ಹಾಲ್ ಆಫ್ ಫೇಮ್‌ಗೆ ಇವರ ಹೆಸರಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ.
ಶ್ರೀಲಂಕಾದ ದಿಗ್ಗಜ ಆಟಗಾರ ಎನಿಸಿರುವ ಮಹೇಲಾ ಜಯವರ್ಧನೆ, 2014ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. 149 ಟೆಸ್ಟ್ ಪಂದ್ಯಗಳಿಂದ 34 ಶತಕ, 50 ಅರ್ಧಶತಕ ಸೇರಿದಂತೆ 11814 ರನ್ ಬಾರಿಸಿದ್ದರೆ, 448 ಏಕದಿನ ಪಂದ್ಯಗಳಿಂದ 19 ಶತಕ, 77 ಅರ್ಧಶತಕ ಒಳಗೊಂಡಂತೆ 12650 ರನ್ ಬಾರಿಸಿದ್ದಾರೆ. 55 ಟಿ20 ಪಂದ್ಯಗಳಿಂದ 1 ಶತಕ ಸೇರಿದಂತೆ 1493 ರನ್ ಕಲೆಹಾಕಿದ್ದರು. ಮುತ್ತಯ್ಯ ಮುರಳೀಧರನ್ ಮತ್ತು ಕುಮಾರ ಸಂಗಕ್ಕಾರ ಅವರ ನಂತರ ಮಹೇಲಾ ಈ ಗೌರವ ಪಡೆದ ಲಂಕಾ ಆಟಗಾರನಾಗಿದ್ದಾರೆ.
ದ.ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಎನಿಸಿರುವ ಪೊಲ್ಲಾರ್ಕ್, ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಂದ 3 ಸಾವಿರ ರನ್, 300 ವಿಕೆಟ್ ಕಬಳಿಸಿದ್ದಾರೆ. ಬ್ರಿಟಿನ್ ಅವರು 1979-1998ರ ಅವಧಿಯಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ್ತಿಯಾಗಿದ್ದರು. ಮಹಿಳಾ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2017ರಲ್ಲಿ ಅವರು ನಿಧನರಾಗಿದ್ದಾರೆ.
ಭಾನುವಾರ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಕ್ಲೈವ್ ಲಾಯ್ಡ್ ಅವರು ಈ ಮೂವರು ಕ್ರಿಕೆಟಿಗರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಮಾಡಲಿದ್ದಾರೆ. 2009ರಲ್ಲಿ ಆರಂಭವಾದ ಹಾಲ್‌ನಲ್ಲಿ ಇದುವರೆಗೆ 106 ಖ್ಯಾತನಾಮ ಕ್ರಿಕೆಟಿಗರನ್ನು ಸೇರ್ಪಡೆ ಮಾಡಲಾಗಿದೆ.
T20 World Cup Final: ಆಸ್ಟ್ರೇಲಿಯಾ-ನ್ಯೂಜಿಲೆಂಡ್: ಮೊದಲ ಟಿ20 ವಿಶ್ವಕಪ್ ಕಿರೀಟ ಯಾರ ಮುಡಿಗೆ?, ಯಾವ ತಂಡ ಬಲಿಷ್ಠ?
(Mahela Jayawardena Shaun Pollock and Janette Brittin To Be Inducted Into ICC Hall Of Fame)