AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup Final: ಆಸ್ಟ್ರೇಲಿಯಾ-ನ್ಯೂಜಿಲೆಂಡ್: ಮೊದಲ ಟಿ20 ವಿಶ್ವಕಪ್ ಕಿರೀಟ ಯಾರ ಮುಡಿಗೆ?, ಯಾವ ತಂಡ ಬಲಿಷ್ಠ?

Who Will Win Today T20 World Cup Final Match: ಟಿ20 ವಿಶ್ವಕಪ್​ನಲ್ಲಿ ಉಭಯ ತಂಡಗಳು ಇದುವರೆಗೆ 2016 ರಲ್ಲಿ ಒಂದು ಬಾರಿ ಮಾತ್ರ ಮುಖಾಮುಖಿ ಆಗಿದೆ. ಇದರಲ್ಲಿ ನ್ಯೂಜಿಲೆಂಡ್ ಗೆದ್ದಿತ್ತು. ಒಟ್ಟಾರೆಯಾಗಿ ಉಭಯ ತಂಡಗಳು 14 ಬಾರಿ ಮುಖಾಮುಖಿ ಆಗಿವೆ.

T20 World Cup Final: ಆಸ್ಟ್ರೇಲಿಯಾ-ನ್ಯೂಜಿಲೆಂಡ್: ಮೊದಲ ಟಿ20 ವಿಶ್ವಕಪ್ ಕಿರೀಟ ಯಾರ ಮುಡಿಗೆ?, ಯಾವ ತಂಡ ಬಲಿಷ್ಠ?
T20 World Cup Final New Zealand vs Australia
TV9 Web
| Edited By: |

Updated on: Nov 14, 2021 | 8:31 AM

Share

ಆರನೇ ಆವೃತ್ತಿಯ ಟಿ20 ವಿಶ್ವಕಪ್ (ICC T20 World Cup) ಪ್ರಶಸ್ತಿ ಎತ್ತಿ ಹಿಡಿಯಲು ಇಂದು ಮಹಾ ಕಾಳಗ ನಡೆಯಲಿದೆ. ಕಳೆದ ಐದು ಆವೃತ್ತಿಯಿಂದ ಒಂದೂ ಪ್ರಶಸ್ತಿ ಗೆಲ್ಲದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (New Zealand vs Australia) ತಂಡಗಳ ಪೈಕಿ ಒಂದು ತಂಡ ಇಂದು ಹೊಸ ಚಾಂಪಿಯನ್ ಆಗಿ ಹೊರಹೊಮ್ಮಲಿದೆ. ಏಕದಿನ ವಿಶ್ವಕಪ್‌ನಲ್ಲಿ (ODI World Cup) ಹ್ಯಾಟ್ರಿಕ್‌ ಸಹಿತ ಅತ್ಯಧಿಕ 5 ಸಲ ಚಾಂಪಿಯನ್‌ ಆಗಿ ಮೆರೆದ ಆಸ್ಟ್ರೇಲಿಯ ಇದುವರೆಗೆ ಟಿ20 ವಿಶ್ವಕಪ್‌ ಎತ್ತಿಹಿಡಿದಿಲ್ಲ. ಇತ್ತ 2015 ಮತ್ತು 2019ರ ಏಕದಿನ ವಿಶ್ವಕಪ್‌ ಫೈನಲ್‌ ಪ್ರವೇಶಿಸಿ ಎರಡರಲ್ಲೂ ಸೋತಿರುವ ಕೇನ್ ಪಡೆ ಈಗ ಮತ್ತೊಂದು ಅಗ್ನಿ ಪರೀಕ್ಷೆಗೆ ಇಳಿಯುತ್ತಿದೆ.

ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸಮಾನ ಅಂಕ ಕಲೆ ಹಾಕಿ ಗುಂಪಿನ ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆಸೀಸ್ ಹಾಗೂ ಕಿವೀಸ್ ಆಡಿರುವ ಐದು ಪಂದ್ಯಗಳ ಪೈಕಿ ತಲಾ ನಾಲ್ಕರಲ್ಲಿ ಗೆಲುವು ದಾಖಲಿಸಿತ್ತು. ಸೆಮಿಫೈನಲ್‌ನಲ್ಲೂ ಸಮಾನ ಪರಿಸ್ಥಿತಿ ಎದುರಾಗಿತ್ತು. ಇಂಗ್ಲೆಂಡ್ ವಿರುದ್ಧ 167 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಕಿವೀಸ್ ಇನ್ನೊಂದು ಓವರ್ ಬಾಕಿ ಉಳಿರುವಂತೆಯೇ ಐದು ವಿಕೆಟ್ ಅಂತರಕ್ಕೆ ಗೆಲುವು ದಾಖಲಿಸಿತ್ತು. ದ್ವಿತೀಯ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಒಡ್ಡಿದ 177 ರನ್ ಗುರಿಯನ್ನು ಆಸೀಸ್ ಕೂಡ ಇನ್ನೊಂದು ಓವರ್ ಬಾಕಿ ಉಳಿದರುವಂತೆಯೇ ಗುರಿ ತಲುಪಿತ್ತು.

ನ್ಯೂಜಿಲೆಂಡ್​ಗೆ ಇದು ಸೇಡಿನ ಪಂದ್ಯ ಕೂಡ ಹೌದು. ಈ ಹಿಂದೆ 2015ರ ಏಕದಿನ ವಿಶ್ವಕಪ್‌ನಲ್ಲಿ ಕಿವೀಸ್ ತಂಡ ಹೀನಾಯವಾಗಿ ಆಸ್ಟ್ರೇಲಿಯಾಗೆ ಶರಣಾಗಿತ್ತು. ಇದೀಗ ನ್ಯೂಜಿಲೆಂಡ್ ತಂಡಕ್ಕೆ ಸೇಡು ತೀರಿಸಿಕೊಳ್ಳುವುದರ ಜತೆಗೆ ಚೊಚ್ಚಲ ಚುಟುಕು ಪ್ರಶಸ್ತಿ ಜಯಿಸುವ ಅವಕಾಶ ಲಭಿಸಿದೆ. 2015ರ ಏಕದಿನ ವಿಶ್ವಕಪ್ ಬಳಿಕ ಐಸಿಸಿ ಟ್ರೋಫಿ ಜಯಿಸಲು ವಿಫಲವಾಗಿರುವ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಉತ್ಸಾಹದಲ್ಲಿದೆ.

ಟಿ20 ವಿಶ್ವಕಪ್​ನಲ್ಲಿ ಉಭಯ ತಂಡಗಳು ಇದುವರೆಗೆ 2016 ರಲ್ಲಿ ಒಂದು ಬಾರಿ ಮಾತ್ರ ಮುಖಾಮುಖಿ ಆಗಿದೆ. ಇದರಲ್ಲಿ ನ್ಯೂಜಿಲೆಂಡ್ ಗೆದ್ದಿತ್ತು. ಒಟ್ಟಾರೆಯಾಗಿ ಉಭಯ ತಂಡಗಳು 14 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ನ್ಯೂಜಿಲೆಂಡ್ 5 ರಲ್ಲಿ ಗೆದ್ದರೆ, ಆಸ್ಟ್ರೇಲಿಯಾ 9 ಪಂದ್ಯಗಳಲ್ಲಿ ಜಯ ಸಾಧಿಸಿದ ಇತಿಹಾಸವಿದೆ. ಮೇಲ್ನೋಟಕ್ಕೆ ಆಸ್ಟ್ರೇಲಿಯಾ ಬಲಿಷ್ಠವಾಗಿದ್ದರೂ ನ್ಯೂಜಿಲೆಂಡ್ ತಂಡ ಪ್ರಶಸ್ತಿ ಗೆಲ್ಲುವ ಫೆವರಿಟ್ ಎನಿಸಿದೆ.

ಸಂಭಾವ್ಯ ತಂಡ:

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಸ್ ಹ್ಯಾಸಲ್‌ವುಡ್.

ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಡೆರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸಿಫರ್ಟ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಾಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಂ ಮಿಲ್ನೆ, ಟ್ರೆಂಟ್ ಬೌಲ್ಟ್, ಇಶ್ ಸೋಧಿ.

ಪಂದ್ಯ ಆರಂಭ: ಸಂಜೆ 7:30 (ಭಾರತೀಯ ಕಾಲಮಾನ)

ಸ್ಥಳ: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ

New Zealand vs Australia: ಇಂದು ಟಿ20 ವಿಶ್ವಕಪ್ ಫೈನಲ್: ಚೊಚ್ಚಲ ಪ್ರಶಸ್ತಿಗಾಗಿ ನ್ಯೂಜಿಲೆಂಡ್- ಆಸ್ಟ್ರೇಲಿಯಾ ನಡುವೆ ಕಾದಾಟ

(New Zealand vs Australia Prediction Who Will Win Today ICC Mens T20 World Cup 2021 Final Match)