Jimmy Neesham: ಸೆಮಿಫೈನಲ್​ ಗೆಲ್ಲಲು ನಾವು ಇಲ್ಲಿಗೆ ಬಂದಿಲ್ಲ, ಆಸ್ಟ್ರೇಲಿಯನ್ನರಿಗೆ ಎಚ್ಚರಿಕೆ..!

Australia vs New zealand Final: ನ್ಯೂಜಿಲೆಂಡ್ ವಿಶ್ವ ಕ್ರಿಕೆಟ್‌ನಲ್ಲಿ ಮತ್ತು ವಿಶೇಷವಾಗಿ ಐಸಿಸಿ ಪಂದ್ಯಾವಳಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡ. ಟೀಮ್​ನ ಅತ್ಯುತ್ತಮ ಯೋಜನೆಯೇ ಸ್ಥಿರ ಪ್ರದರ್ಶನಕ್ಕೆ ಕಾರಣ.

Jimmy Neesham: ಸೆಮಿಫೈನಲ್​ ಗೆಲ್ಲಲು ನಾವು ಇಲ್ಲಿಗೆ ಬಂದಿಲ್ಲ, ಆಸ್ಟ್ರೇಲಿಯನ್ನರಿಗೆ ಎಚ್ಚರಿಕೆ..!
Jimmy Neesham
Follow us
TV9 Web
| Updated By: ಝಾಹಿರ್ ಯೂಸುಫ್

Updated on: Nov 13, 2021 | 10:26 PM

ಟಿ20 ವಿಶ್ವಕಪ್​ನ ಅಂತಿಮ ಹಣಾಹಣಿಗಾಗಿ ವೇದಿಕೆ ಸಿದ್ದವಾಗಿದೆ. ದಾಯಾದಿಗಳ ಕದನ ಎಂದೇ ಬಿಂಬಿತವಾಗಿರುವ ಫೈನಲ್​​ ಪಂದ್ಯದದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಆಲ್​ರೌಂಡರ್ ಜಿಮ್ಮಿ ನೀಶಮ್ ಆಸ್ಟ್ರೇಲಿಯನ್ನರಿಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಗೆಲ್ಲಲು ತಮ್ಮ ತಂಡ ಅರ್ಧದಷ್ಟು ಪ್ರಪಂಚವನ್ನು ಸುತ್ತಿ ಇಲ್ಲಿಗೆ ಬಂದಿಲ್ಲ ಎಂದು ಜಿಮ್ಮಿ ನೀಶಮ್ ಹೇಳಿದ್ದಾರೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೋಟಕ ಇನ್ನಿಂಗ್ಸ್ ಆಡುವ ಮೂಲಕ ನೀಶಮ್ ನ್ಯೂಜಿಲೆಂಡ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದೀಗ ನಾವು ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ ನೀಶಮ್.

ಸೆಮಿಫೈನಲ್ ಗೆದ್ದ ಬಳಿಕ ಕೂಡ ಸಂಭ್ರಮಿಸದ ಕಾರಣವನ್ನು ಕೇಳಿದಾಗ, ‘ಇದು ಆಚರಿಸಬೇಕಾದ ಸಂದರ್ಭ ಅಲ್ಲ ಎಂದು ನಾನು ಭಾವಿಸುತ್ತೇನೆ. ಸೆಮಿಫೈನಲ್ ಗೆಲ್ಲಲು ಅರ್ಧದಷ್ಟು ಪ್ರಪಂಚವನ್ನು ಸುತ್ತಿ ಇಲ್ಲಿಗೆ ನಾವು ಬಂದಿಲ್ಲ. ಫೈನಲ್‌ ಮೇಲೆ ನಮ್ಮ ಕಣ್ಣು ನೆಟ್ಟಿದೆ. ನಾನು ವೈಯಕ್ತಿಕವಾಗಿ ಮತ್ತು ತಂಡವಾಗಿ ನಾವು ಹೆಚ್ಚು ಮುಂದೆ ನೋಡುತ್ತಿಲ್ಲ. ಫೈನಲ್‌ನಲ್ಲಿ ನಾವು ಜಯಗಳಿಸಿದರೆ, ನಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ ಜಿಮ್ಮಿ ನೀಶಮ್ ತಿಳಿಸಿದ್ದಾರೆ.

ನ್ಯೂಜಿಲೆಂಡ್ ವಿಶ್ವ ಕ್ರಿಕೆಟ್‌ನಲ್ಲಿ ಮತ್ತು ವಿಶೇಷವಾಗಿ ಐಸಿಸಿ ಪಂದ್ಯಾವಳಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡ. ಟೀಮ್​ನ ಅತ್ಯುತ್ತಮ ಯೋಜನೆಯೇ ಸ್ಥಿರ ಪ್ರದರ್ಶನಕ್ಕೆ ಕಾರಣ. ಕಳೆದ ಐದಾರು ವರ್ಷಗಳಲ್ಲಿ ನಾವು ಟೂರ್ನಿಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಮ್ಮ ಭಾವನೆಗಳನ್ನು ಹೇಗೆ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಗೆಲುವು ಅಥವಾ ಸೋಲನ್ನು ಹೇಗೆ ಸ್ವೀಕರಿಸಬೇಕೆಂದು ನಮಗೆ ತಿಳಿದಿದೆ ಎಂದು ಜಿಮ್ಮಿ ನೀಶಮ್ ಹೇಳಿದ್ದಾರೆ.

ಫೈನಲ್ ಪಂದ್ಯಕ್ಕಾಗಿ ಆಟಗಾರರ ಆಯ್ಕೆಯಿಂದ ಹಿಡಿದು ಪಂದ್ಯದ ಪ್ಲಾನಿಂಗ್ ವರೆಗೆ ಕೆಲಸದ ಕಡೆ ಸಂಪೂರ್ಣ ಗಮನ ನೀಡುತ್ತೇವೆ. ನಮ್ಮಲ್ಲಿ ಬಹಳ ಬಲವಾದ ತಂತ್ರವಿದೆ. ಆ ಎಲ್ಲಾ ತಂತ್ರಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಜಿಮ್ಮಿ ನೀಶಮ್ ಹೇಳಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ದದ 2015 ರ ಏಕದಿನ ವಿಶ್ವಕಪ್​ ಫೈನಲ್​ನ ಸೋಲಿನ ಸೇಡನ್ನು ಈ ಬಾರಿ ತೀರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ ನ್ಯೂಜಿಲೆಂಡ್​ನ ಆಲ್​ರೌಂಡರ್.

ಇದನ್ನೂ ಓದಿ: Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

(You don’t come halfway around the world just to win a semi-final: Jimmy Neesham)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ