
T20 World Cup 2026: ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನ 3ನೇ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ (ಫೆ.22) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮರಿಯಾನಾ ಮೊರ್ಕೆಲ್ ಯಾರಿಗೆ ಸಪೋರ್ಟ್ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಇಂತಹದೊಂದು ಗೊಂದಲಕ್ಕೆ ಕಾರಣ ಅವರ ಇಬ್ಬರು ಮಕ್ಕಳು ಎರಡು ತಂಡಗಳ ಜೊತೆ ಕಾಣಿಸಿಕೊಂಡಿರುವುದು.
ಹೌದು, ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರರಾದ ಅಲ್ಬಿ ಮೊರ್ಕೆಲ್ ಮತ್ತು ಮೋರ್ನೆ ಮೊರ್ಕೆಲ್ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ಕೋಚಿಂಗ್ ಸಿಬ್ಬಂದಿಯಲ್ಲಿದ್ದಾರೆ. ಅಣ್ಣ ಅಲ್ಬಿ ಮೊರ್ಕೆಲ್ ಆಫ್ರಿಕಾ ತಂಡದ ಸ್ಪೆಷಲಿಸ್ಟ್ ಕೋಚಿಂಗ್ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತ ತಮ್ಮ ಮೋರ್ನೆ ಮೊರ್ಕೆಲ್ ಟೀಮ್ ಇಂಡಿಯಾದ ಬೌಲಿಂಗ್ ಕೋಚ್.
ಹೀಗಾಗಿಯೇ ತಾಯಿ ಮರಿಯಾನಾ ಮಾರ್ಕೆಲ್ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಪಂದ್ಯದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಈ ವಿಚಾರವನ್ನು ಖುದ್ದು ಮೋರ್ನೆ ಮೊರ್ಕಲೆ್ ಬಹಿರಂಗಪಡಿಸಿದ್ದಾರೆ.
ತಾಯಿಯು ಅಣ್ಣನಿಗೆ ಸಪೋರ್ಟ್ ಮಾಡ್ಬೇಕಾ ಇಲ್ಲ ನನಗೆ ಸಪೋರ್ಟ್ ಮಾಡಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಇಲ್ಲಿ ನಾವು ಪಂದ್ಯವನ್ನು ಗೆಲ್ಲುವ ಬಗ್ಗೆ ಯೋಚಿಸುತ್ತಿದ್ದರೆ, ಅಲ್ಲಿ ನಮ್ಮ ತಾಯಿ ಯಾರನ್ನು ಬೆಂಬಲಿಸಬೇಕು ಎಂದು ನಮಗಿಂತ ಹೆಚ್ಚು ಚಿಂತಿತರಾಗಿದ್ದಾರೆ ಮೋರ್ನೆ ಮೊರ್ಕೆಲ್ ತಿಳಿಸಿದ್ದಾರೆ.
ಇತ್ತ ಟೀಮ್ ಇಂಡಿಯಾ ಗೆದ್ದರೆ ಮೋರ್ನೆ ಮೊರ್ಕೆಲ್ ಖುಷಿಯಾದರೆ, ಅತ್ತ ಸೌತ್ ಆಫ್ರಿಕಾ ಸೋತರೆ ಅಲ್ಬಿ ಮೊರ್ಕೆಲ್ ದುಃಖಕ್ಕೀಡಾಗಲಿದ್ದಾರೆ. ಹೀಗಾಗಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯವು ಇದೀಗ ಸಹೋದರರ ಸವಾಲ್ ಆಗಿ ಮಾರ್ಪಟ್ಟಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
ಇದನ್ನೂ ಓದಿ: ನಾವು ಭಾರತವನ್ನು ಸೋಲಿಸಿದ್ದೇವೆ: ಪಾಕ್ ಆಟಗಾರನ ತಿರುಗೇಟು!
ಸೌತ್ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್, ಟೋನಿ ಡಿ ಝೋರ್ಝಿ, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೇರಾ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಕ್ವೆನಾ ಮಫಕಾ, ಲುಂಗಿ ಎನ್‌ಗಿಡಿ, ಜೇಸನ್ ಸ್ಮಿತ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಅನ್ರಿಕ್ ನೋಕಿಯ.
Published On - 5:08 pm, Thu, 19 February 26