SMAT T20: ಪಂಜಾಬ್ ಸ್ಪಿನ್ನರ್ ಮೋಡಿ: ಕೇವಲ 40 ರನ್ಗೆ ಆಲೌಟ್
Syed Mushtaq Ali Trophy 2022: ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಯಶಸ್ಸು ತಂದುಕೊಟ್ಟರು. ಪರಿಣಾಮ ಮಣಿಪುರದ ಐವರು ಬ್ಯಾಟರ್ಗಳು ಶೂನ್ಯಕ್ಕೆ ಔಟಾಗಿದ್ದರು.
Syed Mushtaq Ali Trophy 2022: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಪಂಜಾಬ್ ತಂಡವು ಭರ್ಜರಿ ಜಯ ಸಾಧಿಸಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ ಹಾಗೂ ಮಣಿಪುರ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪುರ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಪಂಜಾಬ್ ಬೌಲರ್ಗಳ ಪರಾಕ್ರಮದ ಮುಂದೆ ಮಣಿಪುರ ಬ್ಯಾಟರ್ಗಳು ರನ್ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಕೂಡ ಪರದಾಡಿದರು. ಮೊದಲ ಓವರ್ನ 4ನೇ ಎಸೆತದಲ್ಲೇ ನಿತೇಶ್ರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಅಭಿಷೇಕ್ ಶರ್ಮಾ ಪಂಜಾಬ್ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅಹ್ಮದ್ ಶಾ (0) ಸಿದ್ಧಾರ್ಥ್ ಕೌಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಯುಮ್ನಂ (2) ಬಲ್ತೇಜ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಯಶಸ್ಸು ತಂದುಕೊಟ್ಟರು. ಪರಿಣಾಮ ಮಣಿಪುರದ ಐವರು ಬ್ಯಾಟರ್ಗಳು ಶೂನ್ಯಕ್ಕೆ ಔಟಾಗಿದ್ದರು. ಇದರ ನಡುವೆ ರೆಕ್ಸ್ ಸಿಂಗ್ 23 ಎಸೆತಗಳಲ್ಲಿ 4 ಫೋರ್ನೊಂದಿಗೆ 25 ರನ್ ಬಾರಿಸಿದ್ದು ಮಣಿಪುರ ಪರ ಗರಿಷ್ಠ ಸ್ಕೋರ್. ಅಂತಿಮವಾಗಿ ಮಣಿಪುರ ತಂಡವು 14.1 ಓವರ್ಗಳಲ್ಲಿ 40 ರನ್ಗಳಿಗೆ ಸರ್ವಪತನ ಕಂಡಿತು.
ಪಂಜಾಬ್ ಪರ 3.1 ಓವರ್ ಎಸೆದ ಮಯಾಂಕ್ ಮಾರ್ಕಂಡೆ ಕೇವಲ 4 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಇನ್ನು ರಮಣ್ದೀಪ್ ಸಿಂಗ್ 2 ವಿಕೆಟ್ ಪಡೆದು ಮಿಂಚಿದರು.
ಕೇವಲ 41 ರನ್ಗಳ ಟಾರ್ಗೆಟ್ ಪಡೆದ ಪಂಜಾಬ್ ತಂಡಕ್ಕೆ ಅಭಿಷೇಕ್ ಶರ್ಮಾ (28) ಸ್ಪೋಟಕ ಆರಂಭ ಒದಗಿಸಿದ್ದರು. ಅದರಂತೆ 5.3 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 43 ರನ್ ಬಾರಿಸುವ ಮೂಲಕ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಮಣಿಪುರ ಪ್ಲೇಯಿಂಗ್ 11: ನಿತೇಶ್ ಸೆಡೈ , ಕರ್ಣಜಿತ್ ಯುಮ್ನಂ , ಅಹ್ಮದ್ ಶಾ , ಲ್ಯಾಂಗ್ಲೋನ್ಯಾಂಬಾ ಕೇಶಾಂಗ್ಬಮ್ (ನಾಯಕ) , ಕಂಗಬಮ್ ಪ್ರಿಯೋಜಿತ್ ಸಿಂಗ್ , ರೆಕ್ಸ್ ಸಿಂಗ್ , ಜಾನ್ಸನ್ ಸಿಂಗ್ , ಕಿಶನ್ ಸಿಂಘಾ , ಸುಲ್ತಾನ್ ಕರೀಮ್ , ಚಿಂಗಖಮ್ ಬಿದಾಶ್ , ಬಿಕಾಶ್ ಸಿಂಗ್ , ಬಿಶ್ವೋರ್ಜತ್
ಪಂಜಾಬ್ ಪ್ಲೇಯಿಂಗ್ 11: ಶುಭಮನ್ ಗಿಲ್ , ಅಭಿಷೇಕ್ ಶರ್ಮಾ , ಪ್ರಭ್ಸಿಮ್ರಾನ್ ಸಿಂಗ್ , ರಮಣದೀಪ್ ಸಿಂಗ್ , ಅನ್ಮೋಲ್ಪ್ರೀತ್ ಸಿಂಗ್ , ಮನ್ದೀಪ್ ಸಿಂಗ್ (ನಾಯಕ) , ಸನ್ವಿರ್ ಸಿಂಗ್ , ಹರ್ಪ್ರೀತ್ ಬ್ರಾರ್ , ಸಿದ್ದಾರ್ಥ್ ಕೌಲ್ , ಮಯಾಂಕ್ ಮಾರ್ಕಂಡೆ , ಬಲ್ತೇಜ್ ಸಿಂಗ್.