ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯ ಹದಿನಾರನೇ ಆವೃತ್ತಿ ಸಲುವಾಗಿ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆಯನ್ನು ಕೇರಳದ ಕೊಚ್ಚಿಯಲ್ಲಿ ಶುರುವಾಗಿದೆ. ಬರೋಬ್ಬರಿ 405 ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಾರೆ 10 ತಂಡಗಳು ತಮ್ಮ ಆಟಗಾರರ ಖರೀದಿ ಸಲುವಾಗಿ ಹಣದ ಹೊಳೆ ಹರಿಸಲು ಶುರು ಮಾಡಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ 119 ಕ್ಯಾಪ್ಡ್ ಪ್ಲೇಯರ್ಸ್ ಸದ್ಯ ಹರಾಜಿನ ಕೇಂದ್ರಬಿಂದುವಾಗಿದ್ದಾರೆ. ಹರಾಜಿನಲ್ಲಿ ಮೊದಲ ಆಟಗಾರ ಕೇನ್ ವಿಲಿಯಮ್ಸನ್ (Kane Williamson) ಅವರನ್ನು ಮೂಲಬೆಲೆಗೆ ಗುಜರಾತ್ ಟೈಟಾನ್ಸ್ ಖರೀದಿಸಿತು. ಬಳಿಕ ಇಂಗ್ಲೆಂಡ್ನ ಹ್ಯಾರಿ ಬ್ಯೂಕ್ (Harry Brook) ಭರ್ಜರಿ ಮೊತ್ತಕ್ಕೆ ಸೇಲ್ ಆದರು.
1 ಕೋಟಿ ಮೂಲಬೆಲೆ ಹೊಂದಿರುವ ಮಯಾಂಕ್ ಅಗರ್ವಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಲು ಮುಂದಾಯಿತು. ಆದರೆ, ತನ್ನ ಪರ್ಸ್ನಲ್ಲಿ ಅಷ್ಟು ಮೊತ್ತ ಇಲ್ಲದ ಕಾರಣ ಮಯಾಂಕ್ ಅಂತಿಮವಾಗಿ ಸನ್ರೈಸರ್ಸ್ ಪಾಲಾದರು. ಆರಂಭದಲ್ಲಿ ಮಯಾಂಕ್ ಖರೀದಿಗೆ ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಂದೆ ಬಂತು. ಆದರೆ, ನಂತರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ಕಠಿಣ ಪೈಪೋಟಿ ನಡೆಯಿತು.
IPL 2023 Auction: ಬರೋಬ್ಬರಿ 13.25 ಕೋಟಿಗೆ ಹರಾಜಾದ ಇಂಗ್ಲೆಂಡ್ನ ಸ್ಪೋಟಕ ಯುವ ಬ್ಯಾಟ್ಸ್ಮನ್
ಅಂತಿಮವಾಗಿ ಮಯಾಂಕ್ 8.25 ಕೋಟಿಗೆ ಹೈದರಬಾದ್ ಖರೀದಿಸಿತು. ಈ ಹಿಂದೆ ಪಂಜಾಬ್ ತಂಡದಲ್ಲಿದ್ದ ಮಯಾಂಕ್ರನ್ನು ಹರಾಜಿಗೂ ಮುನ್ನ ಫ್ರಾಂಚೈಸಿ ಕೈಬಿಟ್ಟಿತ್ತು. ಇತ್ತ ಆರ್ಸಿಬಿ ಖಾತೆಯಲ್ಲಿ ದೊಡ್ಡ ಮಟ್ಟದ ಹಣವಿಲ್ಲ. ಬೆಂಗಳೂರು ಬಳಿ ಕೇವಲ 8.75 ಕೋಟಿ ರೂ. ಇದೆಯಷ್ಟೆ. ಇದರಲ್ಲೇ ತಂಡಕ್ಕೆ ಅಗತ್ಯವಿರುವ ಪ್ರಮುಖ ಆಟಗಾರರನ್ನು ಖರೀದಿಸಬೇಕಾಗಿದೆ. ಆರ್ಸಿಬಿಗೆ ಒಟ್ಟು ಏಳು ಆಟಗಾರರನ್ನು ಖರೀದಿಸುವ ಅವಕಾಶವಿದೆ. ಆದರೆ, ವಿದೇಶಿ ಪ್ಲೇಯರ್ಸ್ ಪೈಕಿ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
ಐಪಿಎಲ್ ಸೀಸನ್ 16 ಹರಾಜಿನ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. 1.50 ಕೋಟಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ 23 ವರ್ಷದ ಯುವ ಸ್ಪೋಟಕ ದಾಂಡಿಗನನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಬರೋಬ್ಬರಿ 13.25 ಕೋಟಿ ರೂ. ನೀಡಿ ಖರೀದಿಸಿದೆ. ಇಂಗ್ಲೆಂಡ್ ಪರ ಕೇವಲ 17 ಟಿ20 ಇನಿಂಗ್ಸ್ ಆಡಿರುವ ಬ್ರೂಕ್ ಒಂದು ಅರ್ಧಶತಕದೊಂದಿಗೆ ಒಟ್ಟು 372 ರನ್ ಕಲೆಹಾಕಿದ್ದಾರೆ. ಈ ವೇಳೆ 15 ಸಿಕ್ಸ್ ಹಾಗೂ 30 ಫೋರ್ಗಳನ್ನೂ ಕೂಡ ಬಾರಿಸಿದ್ದಾರೆ. ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಬ್ರೂಕ್ ಇತ್ತೀಚೆಗೆ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದರು. ಇಂಗ್ಲೆಂಡ್ ಪರ ಕೇವಲ 4 ಟೆಸ್ಟ್ ಪಂದ್ಯಗಳಲ್ಲಿ 6 ಇನಿಂಗ್ಸ್ ಆಡಿರುವ 23 ರ ಹರೆಯದ ಬಲಗೈ ಬ್ಯಾಟರ್ ಕೇವಲ 521 ಎಸೆತಗಳನ್ನು ಎದುರಿಸಿ 480 ರನ್ ಬಾರಿಸಿದ್ದಾರೆ. ಈ ವೇಳೆ 12 ಸಿಕ್ಸ್ ಹಾಗೂ 55 ಫೋರ್ ಬಾರಿಸಿದ್ದಾರೆ.
ಐಪಿಎಲ್ ಮಿನಿಹರಾಜು ಪ್ರಕ್ರಿಯೆ ಲೈವ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Fri, 23 December 22