Moeen Ali: ಟೆಸ್ಟ್ ಕ್ರಿಕೆಟ್ಗೆ ಮತ್ತೊಮ್ಮೆ ವಿದಾಯ ಹೇಳಿದ ಮೊಯೀನ್ ಅಲಿ
Moeen Ali: ಇಂಗ್ಲೆಂಡ್ ಪರ 68 ಟೆಸ್ಟ್ ಪಂದ್ಯಗಳನ್ನಾಡಿರುವ ಮೊಯೀನ್ ಅಲಿ 5 ಶತಕ ಹಾಗೂ 15 ಅರ್ಧಶತಕದೊಂದಿಗೆ 3094 ರನ್ ಕಲೆಹಾಕಿದ್ದಾರೆ. ಅಲ್ಲದೆ 204 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿ (Moeen Ali) ಟೆಸ್ಟ್ ಕ್ರಿಕೆಟ್ಗೆ ಮತ್ತೊಮ್ಮೆ ನಿವೃತ್ತಿ ಘೋಷಿಸಿದ್ದಾರೆ. ಈ ಹಿಂದೆ 2021 ರಲ್ಲಿ ಇಂಗ್ಲೆಂಡ್ ಆಟಗಾರ ಟೆಸ್ಟ್ ಕೆರಿಯರ್ಗೆ ವಿದಾಯ ಹೇಳಿದ್ದರು. ಆದರೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹಾಗೂ ಕೋಚ್ ಬ್ರೆಂಡನ್ ಮೆಕಲಂ ಅವರ ಒತ್ತಾಯದ ಮೇರೆಗೆ ಅವರು ಈ ಬಾರಿ ಆ್ಯಶಸ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯು 2-2 ಅಂತರದಿಂದ ಡ್ರಾಗೊಂಡಿದೆ. ಇದರ ಬೆನ್ನಲ್ಲೇ ಮೊಯೀನ್ ಅಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಸ್ಟುವರ್ಟ್ ಬ್ರಾಡ್ ಜೊತೆ ಹೆಜ್ಜೆ ಹಾಕಿದ ಮೊಯೀನ್ ಅಲಿ:
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ ಅಂತಿಮ ಪಂದ್ಯದಲ್ಲಿ ಮೊಯೀನ್ ಅಲಿ 3 ವಿಕೆಟ್ ಕಬಳಿಸಿದ್ದರು. ಈ ಮೂಲಕ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಗೆಲುವಿನೊಂದಿಗೆ ವಿದಾಯ ಹೇಳಲು ಮೊಯೀನ್ ಅಲಿ ನಿರ್ಧರಿಸಿದ್ದಾರೆ. ಅದರಂತೆ ಅಂತಿಮ ಟೆಸ್ಟ್ ಪಂದ್ಯವಾಡಿದ ಸ್ಟುವರ್ಟ್ ಬ್ರಾಡ್ ಜೊತೆ ಮೊಯೀನ್ ಅಲಿ ಕೂಡ ಪೆವಿಲಿಯನ್ ಕಡೆ ಜೊತೆಯಾಗಿ ಹೆಜ್ಜೆ ಹಾಕಿದರು. ಇದರೊಂದಿಗೆ ಇಂಗ್ಲೆಂಡ್ ತಂಡದ ಇಬ್ಬರು ಆಟಗಾರರ ಟೆಸ್ಟ್ ಕೆರಿಯರ್ ಮುಗಿದಂತಾಗಿದೆ.
Stuart Broad and Moeen Ali strolling off into the sunset together ?
The Oval waves goodbye to two England greats ? pic.twitter.com/7SlGMCADOB
— Mail Sport (@MailSport) July 31, 2023
ಬೆನ್ ಸ್ಟೋಕ್ಸ್ ಮೆಸೇಜ್ ಡಿಲೀಟ್ ಮಾಡ್ತೀನಿ:
2021 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ಮೊಯೀನ್ ಅಲಿಯನ್ನು ಮತ್ತೆ ಕರೆತರುವಲ್ಲಿ ಬೆನ್ ಸ್ಟೋಕ್ಸ್ ಪ್ರಮುಖ ಪಾತ್ರವಹಿಸಿದ್ದರು. ಸಹ ಆಟಗಾರರನಿಗೆ ಸತತ ಮೆಸೇಜ್ ಮಾಡುವ ಮೂಲಕ ಮನವೊಲಿಸುವಲ್ಲಿ ಸ್ಟೋಕ್ಸ್ ಯಶಸ್ವಿಯಾಗಿದ್ದರು.
ಇದೀಗ ಮತ್ತೆ ನಿವೃತ್ತಿ ಘೋಷಿಸಿರುವ ಮೊಯೀನ್ ಅಲಿ, ಇನ್ಮುಂದೆ ಬೆನ್ ಸ್ಟೋಕ್ಸ್ ಮೆಸೇಜ್ ಮಾಡಿದರೆ ಅದನ್ನು ಡಿಲೀಟ್ ಮಾಡುವೆ. ಇನ್ಯಾವತ್ತೂ ಟೆಸ್ಟ್ ಕ್ರಿಕೆಟ್ಗೆ ಮರಳುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಅಲ್ಲದೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ
ಮೊಯೀನ್ ಅಲಿ ಟೆಸ್ಟ್ ವೃತ್ತಜೀವನ:
ರೆಡ್ ಬಾಲ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ 68 ಟೆಸ್ಟ್ ಪಂದ್ಯಗಳನ್ನಾಡಿರುವ ಮೊಯೀನ್ ಅಲಿ 5 ಶತಕ ಹಾಗೂ 15 ಅರ್ಧಶತಕದೊಂದಿಗೆ 3094 ರನ್ ಕಲೆಹಾಕಿದ್ದಾರೆ. ಅಲ್ಲದೆ 204 ವಿಕೆಟ್ ಕಬಳಿಸಿ ಮಿಂಚಿದ್ದಾರೆ.