ಮಹೇಂದ್ರ ಸಿಂಗ್ ಧೋನಿ… ಭಾರತೀಯ ಕ್ರಿಕೆಟ್ (Indian Cricket) ಲೋಕಕ್ಕೆ ಹೊಸ ಆಯಾಮ ನೀಡಿದ ಆಟಗಾರ. ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ಕೂಲ್ ಕ್ಯಾಪ್ಟನ್. ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕಪ್ತಾನ ಎಂಎಸ್ ಧೋನಿ (MS Dhoni) ಗುರುವಾರ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೆಂಡತಿ ಸಾಕ್ಷಿ (Sakshi Dhoni) ಅವರೊಟ್ಟಿಗೆ ಬ್ರಿಟನ್ ಪ್ರವಾಸದಲ್ಲಿ ಇರುವ ಕ್ಯಾಪ್ಟನ್ ಕೂಲ್, ಅಲ್ಲಿಯೇ ಕೇಕ್ ಕತ್ತರಿಸುವ ಮೂಲಕ ತಮ್ಮ ಜನ್ಮದಿನವನ್ನು ಸಂಭ್ರಮಿಸಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಸಣ್ಣ ಕೆಲಸ ಮಾಡಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಬೆಳೆದ ಕತೆಯೇ ಒಂದು ರೋಚಕ ಅಧ್ಯಾಯ. ಅದರಲ್ಲಿ ಹಲವಾರು ಏಳು ಬೀಳುಗಳಿವೆ.
ಕಳೆದ ಕೆಲ ದಿನಗಳ ಹಿಂದೆ ಧೋನಿ ಪತ್ನಿ ಸಾಕ್ಷಿ ಜೊತೆ 12ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಲಂಡನ್ಗೆ ತೆರಳಿದ್ದರು. ಸದ್ಯ ಅಲ್ಲೇ ಇರುವ ಮಾಹಿ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಧೋನಿ ಕೇಕ್ ಕತ್ತರಿಸಿ ಸಂಭ್ರಮಿಸಿದ ವಿಡಿಯೋವನ್ನು ಪತ್ನಿ ಸಾಕ್ಷಿ ಧೋನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಈ ಸಂಭ್ರಮಾಚರಣೆಯಲ್ಲಿ ಭಾರತ ತಂಡದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೂಡ ಹಾಜರಿದ್ದರು.
IND vs ENG: ಇಂದು ಭಾರತ- ಇಂಗ್ಲೆಂಡ್ ಮೊದಲ ಟಿ20: ರೋಹಿತ್ ಮೇಲೆ ಎಲ್ಲರ ಕಣ್ಣು
ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ 2004ರಲ್ಲಿ ಬಾಂಗ್ಲಾದೇಶ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 350 ಏಕದಿನ ಪಂದ್ಯಗಳಿಂದ 10,773 ರನ್ ಹಾಗೂ 90 ಟೆಸ್ಟ್ ಪಂದ್ಯಗಳು 4,876 ಹಾಗೂ 98 ಟಿ-20 ಪಂದ್ಯಗಳಿಂದ 1,617 ರನ್‌ಗಳನ್ನು ಗಳಿಸಿದ್ದಾರೆ.
41 ಅಡಿ ಎತ್ತರದ ಕಟೌಟ್:
ಆಂಧ್ರಪ್ರದೇಶದ ವಿಜಯವಾಡದಲ್ಲಿ ಮಾಹಿ ಅಭಿಮಾನಿಗಳು ಬರೋಬ್ಬರಿ 41 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿಯ ಈ ಕಟೌಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕೈಯಲ್ಲಿ ಬ್ಯಾಟ್ ಹಿಡಿದು, ಹೆಲಿಕಾಪ್ಟರ್ ಶಾಟ್ ಹೊಡೆಯುತ್ತಿರುವ ಭಂಗಿಯ ಫೋಟೋ ಇದಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಕಳೆದ ಕೆಲ ದಿನಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಜೊತೆ 12ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಸದ್ಯ ಲಂಡನ್ನಲ್ಲಿರುವ ಮಾಹಿ ಅಲ್ಲೇ 41ನೇ ಹುಟ್ಟುಹಬ್ಬ ಆಚರಿಸಿದ್ದಾರೆ.
MS Dhoni Birthday: ಸವ್ಯಸಾಚಿ ಧೋನಿಗೆ 41ನೇ ಜನ್ಮದಿನ; ನಾಯಕನಾಗಿ ಮಹೀ ಸೃಷ್ಟಿಸಿದ ಐದು ಶ್ರೇಷ್ಠ ದಾಖಲೆಗಳಿವು
Published On - 9:16 am, Thu, 7 July 22