IND vs ENG: ಇಂದು ಭಾರತ- ಇಂಗ್ಲೆಂಡ್ ಮೊದಲ ಟಿ20: ರೋಹಿತ್ ಮೇಲೆ ಎಲ್ಲರ ಕಣ್ಣು
India vs England 1st T20I: ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಇಂದು ಸೌಥ್‌ಹ್ಯಾಮ್ಟನ್‌ನ ರೋಸ್ ಬೌಲ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ನಾಯಕ ರೋಹಿತ್ ಶರ್ಮಾ (Rohit Sharma) ತಂಡಕ್ಕೆ ಕಮ್ಬ್ಯಾಕ್ ಮಾಡಿತ್ತು ನಿರೀಕ್ಷೆ ಹೆಚ್ಚಿದೆ.
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಬಾಕಿ ಉಳಿದಿದ್ದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತ ಪರಿಣಾಮ ಸರಣಿ ಸಮಬಲಗೊಂಡಿತು. ಇದೀಗ ರೆಡ್ ಬಾಲ್ ಕ್ರಿಕೆಟ್ ಬಳಿಕ ಟಿ20 ಸರಣಿಗೆ ಉಭಯ ತಂಡಗಳು ಸಜ್ಜಾಗುತ್ತಿದೆ. ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಇಂದು ಸೌಥ್‌ಹ್ಯಾಮ್ಟನ್‌ನ ರೋಸ್ ಬೌಲ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಟೆಸ್ಟ್ ಪಂದ್ಯದಲ್ಲಿ ಆಡಿದ್ದ ವಿರಾಟ್ ಕೊಹ್ಲಿ (Virat Kohli), ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಅವರಿಗೆ ಮೊದಲ ಟಿ20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಆವೇಶ್ ಖಾನ್ ಸೇರಿದಂತೆ ಕೆಲ ಆಟಗಾರರಿಗೆ ವಿದೇಶಿ ಅಂಗಳದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸೂಕ್ತ ಸಮಯವಿದು. ಜೊತೆಗೆ ನಾಯಕ ರೋಹಿತ್ ಶರ್ಮಾ (Rohit Sharma) ತಂಡಕ್ಕೆ ಕಮ್ಬ್ಯಾಕ್ ಮಾಡಿತ್ತು ನಿರೀಕ್ಷೆ ಹೆಚ್ಚಿದೆ.
ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಖಚಿತ. ಐಪಿಎಲ್, ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ಎದುರಿನ ಸರಣಿಯಲ್ಲಿ ಸ್ಥಿರವಾದ ಆಟವಾಡಿರುವ ದಿನೇಶ್ ಕಾರ್ತಿಕ್ಗೆ ಕೂಡ ಸ್ಥಾನ ಭದ್ರವಾಗಿದೆ. ಆದರೆ, ಉಳಿದಂತೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಕೂಡ ಆಡುವ ಬಳಗದಲ್ಲಿ ಇರಲಿದ್ದಾರೆ. ಟೀಮ್ ಇಂಡಿಯಾಕ್ಕೆ ಬೌಲಿಂಗ್ ವಿಭಾಗದ್ದೇ ದೊಡ್ಡ ತಲೆನೋವಾಗಿದ್ದು ಈ ಬಾರಿಯಾದ್ರೂ ಅರ್ಶ್‌ದೀಪ್ ಸಿಂಗ್ಗೆ ಅವಕಾಶ ಇದೆಯೆ ಎಂಬುದು ನೋಡಬೇಕಿದೆ.
MS Dhoni Birthday: ಭಾರತಕ್ಕಾಗಿ ಎಲ್ಲಾ ಐಸಿಸಿ ಟ್ರೋಪಿಗಳನ್ನು ಗೆದ್ದ ಧೋನಿಗೆ ಇಂದು ಜನ್ಮದಿನ; ಫೋಟೋ ನೋಡಿ
ಇತ್ತ ಭಾರತ ವಿರುದ್ಧ ಟಿ20 ಸರಣಿಯ ಇಂಗ್ಲೆಂಡ್ ತಂಡ ಸಂಪೂರ್ಣ ವಿಭಿನ್ನವಾಗಿದೆ. ಟೆಸ್ಟ್ ಪಂದ್ಯ ಮುಗಿಸಿದ ಜಾನಿ ಬೈರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ನಾಯಕ ಜೋಸ್ ಬಟ್ಲರ್ ಬಳಗದಲ್ಲಿ ಬಹುತೇಕ ಹೊಸ ಆಟಗಾರರೇ ಕಾಣಿಸಿಕೊಳ್ಳಲಿದ್ದಾರೆ. ಆಲ್‌ರೌಂಡರ್ ಮೋಯಿನ್ ಅಲಿ, ಜೇಸನ್ ರಯ್ ಮತ್ತು ಡೇವಿಡ್ ಮಲಾನ್ ಅವರ ಮೇಲೆ ಹೆಚ್ಚಿನ ಭರವಸೆ ಇದೆ.
ಪಿಚ್ ರಿಪೋರ್ಟ್: ಸೌಥ್‌ಹ್ಯಾಮ್ಟನ್‌ನ ರೋಸ್ ಬೌಲ್ ಕ್ರಿಕೆಟ್ ಗ್ರೌಂಡ್‌ನ ಪಿಚ್ ಫ್ಲಾಟ್ ಆಗಿದೆ. ಈ ಹಿನ್ನೆಲೆಯಲ್ಲಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಈ ವಿಕೆಟ್ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಲಿದೆ. ಆದರೆ, ಸದ್ಯ ಸೌಥ್‌ಹ್ಯಾಮ್ಟನ್‌ನಲ್ಲಿ ಮೋಡ ಮುಸುಕಿದ ವಾತಾವರಣ ಇರುವ ಕಾರಣ, ವೇಗದ ಬೌಲರ್‌ಗಳಿಗೆ ಇದು ನೆರವಾಗುವ ಸಾಧ್ಯತೆ ಇದೆ. ಮೊದಲನೇ ಟಿ20 ಪಂದ್ಯ ದೊಡ್ಡ ಮೊತ್ತ ಕಾದಾಟವಾಗುವ ಸಾಧ್ಯತೆ ಇದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ರಾತ್ರಿ 10:30 ಕ್ಕೆ ಆರಂಭವಾಗಲಿದೆ. ನೇರ ಪ್ರಸಾರವನ್ನು ಸೋನಿ ನೆಟ್‌ವರ್ಕ್‌ನ ಚಾನೆಲ್‌ನಲ್ಲಿ ಇರಲಿದೆ. ಅದರಂತೆ ಸೋನಿ ಸಿಕ್ಸ್, ಸೋನಿ ಟೆನ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಲೈವ್ ಸ್ಟ್ರೀಮಿಂಗ್ ಅನ್ನು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ಇರಲಿದೆ.
ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್.
Indian Cricket: 6 ತಿಂಗಳಲ್ಲಿ 6 ನಾಯಕರು; ಕೊಹ್ಲಿ ಉತ್ತರಾಧಿಕಾರಿಯ ಹುಡುಕಾಟವನ್ನು ಬಿಸಿಸಿಐ ನಿಲ್ಲಿಸುವುದು ಯಾವಾಗ?
Published On - 8:02 am, Thu, 7 July 22