AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Devdutt Padikkal: ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ

HBD Devdutt Padikkal: ಧೋನಿ (MS Dhoni) ಇಂದು ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ದಿನದಂದು ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಥಾನದ ಆಕಾಂಕ್ಷಿಯಾಗಿರುವ ಕರ್ನಾಟಕದ ದೇವದತ್‌ ಪಡಿಕ್ಕಲ್‌ ಹುಟ್ಟುಹಬ್ಬ ಕೂಡ.

Happy Birthday Devdutt Padikkal: ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ
Devdutt Padikkal
Follow us
TV9 Web
| Updated By: Vinay Bhat

Updated on: Jul 07, 2022 | 10:08 AM

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಇಂದು ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ದಿನದಂದು ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಥಾನದ ಆಕಾಂಕ್ಷಿಯಾಗಿರುವ ಯುವ ಆಟಗಾರ ಕರ್ನಾಟಕದ ದೇವದತ್‌ ಪಡಿಕ್ಕಲ್‌ (Devdutt Padikkal) ಅವರ ಹುಟ್ಟುಹಬ್ಬ ಕೂಡ. ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಗೆ 2020ರಲ್ಲಿ ತಮ್ಮ 19ನೇ ವಯಸ್ಸಿಗೆ ಪದಾರ್ಪಣೆ ಮಾಡಿದ ಎಡಗೈ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಇಂದು 22ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕ ಅಭಿಮಾನಿಗಳು ಇವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಆರ್​​ಸಿಬಿ (RCB) ಕೂಡ ತನ್ನ ಟ್ವಿಟರ್ ಖಾತೆಯಲ್ಲಿ ಶುಭಕೋರಿದೆ.

ಕರ್ನಾಟಕದ ಪ್ರತಿಭಾನ್ವಿತ ಬ್ಯಾಟಿಂಗ್ ಪ್ರತಿಭೆ ದೇವದತ್ ಪಡಿಕ್ಕಲ್ ಮೂಲತಃ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಾಲ್ ಪಟ್ಟಣದವರು. ಇವರು ಅಲ್ಲಿ ಹುಟ್ಟಿದರೂ ದೇವದತ್ ಅಪ್ಪಟ ಕರ್ನಾಟಕದ ಹುಡುಗ. ಭಾರತದ ಅಂಡರ್-19 ತಂಡದಲ್ಲಿ ಆಡಿದ ಪಡಿಕ್ಕಲ್ 2018 ನವೆಂಬರ್​ನಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದರು. ಪಡಿಕ್ಕಲ್ ಅಂಡರ್ 14ನಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ಅಂಡರ್​ 19ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಡಿಕ್ಕಲ್​ಗೆ ಅಂಡರ್​ 19 ಟೀಮ್​ ಇಂಡಿಯಾದಲ್ಲಿ ಸ್ಥಾನ ಲಭಿಸಿತು.

ಇದನ್ನೂ ಓದಿ
Image
MS Dhoni Birthday: ಸವ್ಯಸಾಚಿ ಧೋನಿಗೆ 41ನೇ ಜನ್ಮದಿನ; ನಾಯಕನಾಗಿ ಮಹೀ ಸೃಷ್ಟಿಸಿದ ಐದು ಶ್ರೇಷ್ಠ ದಾಖಲೆಗಳಿವು
Image
Malayisa Matsers: ಕಠಿಣ ಪಂದ್ಯದಲ್ಲಿ ಗೆದ್ದ ಪಿವಿ ಸಿಂಧು; ಮತ್ತೆ ಮೊದಲ ಸುತ್ತಿನಲ್ಲೇ ಸೋತ ಸೈನಾ ನೆಹ್ವಾಲ್ ಔಟ್
Image
IND vs WI: ಕೇವಲ 6 ಪಂದ್ಯಗಳನ್ನಾಡಿರುವ ರೋಹಿತ್​ಗೆ ಸುಸ್ತಾಗುತ್ತಾ? ಇದು ಫ್ಯಾನ್ಸ್ ಎತ್ತಿರುವ ಪ್ರಶ್ನೆ
Image
IND VS WI: ಕೊಹ್ಲಿಗೆ ವಿಶ್ರಾಂತಿ ನೀಡುವ ಅವಶ್ಯಕತೆ ಏನಿತ್ತು? ಅಸಮಾಧಾನ ಹೊರಹಾಕಿದ ಕೋಚ್

Happy Birthday MS Dhoni: ಬ್ರಿಟನ್​​ನಲ್ಲಿ ಪತ್ನಿ ಸಾಕ್ಷಿ ಜೊತೆ ಹುಟ್ಟುಹಬ್ಬ ಆಚರಿಸಿದ ಧೋನಿ: ಸ್ಪೆಷಲ್ ಗೆಸ್ಟ್ ಕೂಡ ಭಾಗಿ

ದ್ರಾವಿಡ್ ಗರಡಿಯಲ್ಲಿ ಪಳಗಿದ ಪಡಿಕ್ಕಲ್ ಬ್ಯಾಟಿಂಗ್​ನಲ್ಲಿ ಮತ್ತಷ್ಟು ಪಕ್ವವಾದರು. ಲಿಸ್ಟ್ ಎ ಕ್ರಿಕೆಟ್​ನಲ್ಲಿ ಇವರ ಸರಾಸರಿ ಬರೋಬ್ಬರಿ 86 ರನ್​ನಷ್ಟಿದೆ. ಇನ್ನು, ಐಪಿಎಲ್ ಸೇರಿದಂತೆ ಟಿ20 ಕ್ರಿಕೆಟ್​ನಲ್ಲಿ ಸಾಕಷ್ಟು ಪಂದ್ಯ ಆಡಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಮಿಂಚಿದ್ದ ಎಡಗೈ ಬ್ಯಾಟ್ಸ್​ಮನ್​ಗೆ ಐಪಿಎಲ್​ನಲ್ಲೂ ಅವಕಾಶ ಲಭಿಸಿತು. ಅದರಂತೆ 2019 ರಲ್ಲಿ ಆರ್​ಸಿಬಿ ತಂಡದಲ್ಲಿ ಸ್ಥಾನ ಪಡೆದರೂ ಆಡುವ ಅವಕಾಶ ದೊರೆತಿರಲಿಲ್ಲ. 2020 ರ ಐಪಿಎಲ್ ಮೂಲಕ ಪದಾರ್ಪಣೆ ಮಾಡಿದ್ದ ಪಡಿಕ್ಕಲ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 56 ರನ್​ ಬಾರಿಸಿ ಮೊದಲ ಐಪಿಎಲ್ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ ಕೆಲವೇ ಆಟಗಾರರ ಪಟ್ಟಿಯಲ್ಲಿ ಗುರುತಿಸಿಕೊಂಡರು.

ಐಪಿಎಲ್​ನಲ್ಲಿ ಅವರು ಮೂರು ಋತು ಆಡಿರುವ ಪಂದ್ಯಗಳಲ್ಲಿ ಕೆಲವು ಅವಿಸ್ಮರಣೀಯ ಇನ್ನಿಂಗ್ಸ್ ಕೊಟ್ಟಿದ್ದಾರೆ. ಎರಡು ಸೀಸನ್​ನಲ್ಲಿ ಆರ್​ಸಿಬಿ ಪರ ಹಾಗೂ ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದಿದ್ದರು. ದೇವದತ್ ಪಡಿಕ್ಕಲ್ ಅವರ ನೆಚ್ಚಿನ ಆಟಗಾರ ಗೌತಮ್ ಗಂಭೀರ್ ಎಂಬುದು ವಿಶೇಷ. ಅಷ್ಟೇ ಅಲ್ಲದೆ ರಾಹುಲ್ ದ್ರಾವಿಡ್ ಹಾಗೂ ಗಂಭೀರ್ ಅವರ ಕ್ರಿಕೆಟ್​ ಐಕಾನ್​ಗಳು. ಹಾಗೆಯೇ ಅವರ ನೆಚ್ಚಿನ ಬೌಲರ್ ಇಂಗ್ಲೆಂಡ್​ನ ಜೇಮ್ಸ್ ಅಂಡರ್ಸನ್.

ಒಟ್ಟಾರೆ ಬ್ಯಾಟಿಂಗ್​ಗೆ ತನ್ನದೇ ಆದ ವಿಶೇಷ ಟೆಕ್ನಿಕ್ ಹೊಂದಿರುವ ದೇವದತ್ ಪಡಿಕ್ಕಲ್​ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿ ಎಂಬುದು ಎಲ್ಲರ ಆಶಯ. ಹ್ಯಾಪಿ ಬರ್ತ್ ಡೇ ಡಿಡಿಪಿ.

IND vs ENG: ಇಂದು ಭಾರತ- ಇಂಗ್ಲೆಂಡ್ ಮೊದಲ ಟಿ20: ರೋಹಿತ್ ಮೇಲೆ ಎಲ್ಲರ ಕಣ್ಣು

ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ