IPL 2025: ಮುಂಬೈಗೆ ಮೊದಲ ಗೆಲುವು ತಂದ ಅಶ್ವನಿ- ರಿಕಲ್ಟನ್; ಕೆಕೆಆರ್​ಗೆ ಹೀನಾಯ ಸೋಲು

|

Updated on: Mar 31, 2025 | 10:55 PM

Mumbai Indians Defeat KKR: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2025 ರಲ್ಲಿ ತನ್ನ ಮೊದಲ ಗೆಲುವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ದಾಖಲಿಸಿತು. ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಕೆಕೆಆರ್ ತಂಡವನ್ನು ಕೇವಲ 116 ರನ್‌ಗಳಿಗೆ ಸೀಮಿತಗೊಳಿಸಿದ ಮುಂಬೈ, ರಿಕಲ್ಟನ್ ಮತ್ತು ಸೂರ್ಯಕುಮಾರ್ ಅವರ ಬ್ಯಾಟಿಂಗ್​ ನೆರವಿನಿಂದ ಸುಲಭವಾಗಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಮುಂಬೈ ಹಲವು ಹೊಸ ದಾಖಲೆಗಳನ್ನು ಸೃಷ್ಟಿಸಿದೆ.

IPL 2025: ಮುಂಬೈಗೆ ಮೊದಲ ಗೆಲುವು ತಂದ ಅಶ್ವನಿ- ರಿಕಲ್ಟನ್; ಕೆಕೆಆರ್​ಗೆ ಹೀನಾಯ ಸೋಲು
Mumbai Indians
Follow us on

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಅಂತಿಮವಾಗಿ ಐಪಿಎಲ್ 2025 (IPL 2025) ರಲ್ಲಿ ಮೊದಲು ಗೆಲುವು ದಾಖಲಿಸಿತು. ಸತತ ಎರಡು ಪಂದ್ಯಗಳನ್ನು ಸೋತು ಹಿನ್ನಡೆ ಅನುಭವಿಸಿದ್ದ ಮುಂಬೈ ತಂಡವು ತನ್ನ ತವರು ಮೈದಾನದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಮುಂಬೈ ತಂಡದ ಈ ಗೆಲುವಿನಲ್ಲಿ ಬೌಲರ್​ಗಳ ಪಾತ್ರ ಅಪಾರವಾಗಿತ್ತು. ಅದರಲ್ಲೂ ಚೊಚ್ಚಲ ಪಂದ್ಯ ಆಡುತ್ತಿದ್ದ ಅಶ್ವನಿ ಕುಮಾರ್ 24 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ದೀಪಕ್ ಚಾಹರ್ ಮತ್ತು ಟ್ರೆಂಟ್ ಬೌಲ್ಟ್ ಕೂಡ ಅದ್ಭುತ ಬೌಲಿಂಗ್ ಮಾಡಿ ಕೋಲ್ಕತ್ತಾ ತಂಡವನ್ನು ಕೇವಲ 16.2 ಓವರ್‌ಗಳಲ್ಲಿ 116 ರನ್‌ಗಳಿಗೆ ಸೀಮಿತಗೊಳಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಕೇವಲ 12.5 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ತಂಡದ ಪರ ರಿಕಲ್ಟನ್ 41 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯರಾಗುಳಿದರೆ, ಸೂರ್ಯಕುಮಾರ್ ಯಾದವ್ 9 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗುಳಿದರು.

ಕೋಲ್ಕತ್ತಾಗೆ ಹೀನಾಯ ಸೋಲು

ಕೋಲ್ಕತ್ತಾ ತಂಡದ ಈ ಹೀನಾಯ ಸೋಲಿಗೆ ತಂಡದ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಪ್ರಮುಖ ಕಾರಣವಾಯಿತು. ತಂಡದ ಪರ ಯುವ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ 26 ರನ್‌ ಬಾರಿಸಿದನ್ನು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬರಲಿಲ್ಲ. ಆರಂಭಿಕ ಸುನಿಲ್ ನರೈನ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ಆರಂಭಿಕ ಡಿ ಕಾಕ್ ಕೇವಲ 1 ರನ್ ಗಳಿಸಲು ಶಕ್ತರಾದರೆ, ವೆಂಕಟೇಶ್ ಅಯ್ಯರ್ ಕೇವಲ 3 ರನ್ ಗಳಿಸಿದರು. ರಿಂಕು ಸಿಂಗ್ 17 ರನ್‌ಗಳಿಗೆ ಕೆಟ್ಟ ಹೊಡೆತವನ್ನು ಆಡುವ ಮೂಲಕ ವಿಕೆಟ್ ಕಳೆದುಕೊಂಡರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಮನೀಶ್ ಪಾಂಡೆ 19 ರನ್ ಗಳಿಸಿ ಔಟಾದರೆ, ರಸೆಲ್ ಐದು ರನ್ ಗಳಿಸಿ ಔಟಾದರು. ಕೊನೆಯಲ್ಲಿ, ರಮಣದೀಪ್ ಸಿಂಗ್ 12 ಎಸೆತಗಳಲ್ಲಿ 22 ರನ್ ಗಳಿಸುವ ಮೂಲಕ ಕೆಕೆಆರ್ ಸ್ಕೋರ್ ಅನ್ನು 100 ದಾಟಿಸಿದರು.

ಕೆಕೆಆರ್​ಗೆ ಕೊನೆಯ ಸ್ಥಾನ

ಈ ಸೋಲಿನೊಂದಿಗೆ ಕೋಲ್ಕತ್ತಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದೆ. ಈ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದಿದ್ದು, ಎರಡರಲ್ಲಿ ಸೋತಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ 10 ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡವು ತನ್ನ ಮೊದಲ ಗೆಲುವಿನೊಂದಿಗೆ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿರುವ ಮುಂಬೈನ ನೆಟ್ ರನ್​ರೇಟ್ +0.309 ಆಗಿದೆ.

ಇದನ್ನೂ ಓದಿ
ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್; ಅಶ್ವನಿ ವೇಗಕ್ಕೆ ತತ್ತರಿಸಿದ ಕೆಕೆಆರ್
ಅರ್ಧದಷ್ಟು ಐಪಿಎಲ್​ಗೆ ಬುಮ್ರಾ ಅಲಭ್ಯ..! ಮುಂದಿನ ಕಥೆ ಏನು?
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಮುಂಬೈ ಆಡುವ ಹನ್ನೊಂದರ ಬಳಗದಿಂದ ರೋಹಿತ್ ಔಟ್

IPL 2025: ಚೊಚ್ಚಲ ಪಂದ್ಯದಲ್ಲೇ ಕೆಕೆಆರ್ ತಂಡವನ್ನು ದುಃಸ್ವಪ್ನವಾಗಿ ಕಾಡಿದ ಅಶ್ವನಿ ಕುಮಾರ್ ಯಾರು?

ದಾಖಲೆ ನಿರ್ಮಿಸಿದ ಮುಂಬೈ

ಕೋಲ್ಕತ್ತಾವನ್ನು ಸೋಲಿಸುವುದರ ಜೊತೆಗೆ, ಮುಂಬೈ ಇಂಡಿಯನ್ಸ್ ಕೂಡ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದೆ. ಕೆಕೆಆರ್ ವಿರುದ್ಧ 8 ವಿಕೆಟ್ ಜಯ ಸಾಧಿಸಿದ ಮುಂಬೈ ತಂಡ ಒಂದೇ ತಂಡದ ವಿರುದ್ಧ ಒಂದೇ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ದಾಖಲೆ ಬರೆದಿದೆ. ವಾಂಖೆಡೆಯಲ್ಲಿ ಮುಂಬೈ ತಂಡವು ಕೋಲ್ಕತ್ತಾ ತಂಡವನ್ನು 10 ಪಂದ್ಯಗಳಲ್ಲಿ ಸೋಲಿಸಿದೆ. ಇಷ್ಟೇ ಅಲ್ಲ, ಮುಂಬೈ ತಂಡ ಕೆಕೆಆರ್ ತಂಡವನ್ನು ಗರಿಷ್ಠ ಬಾರಿ ಅಂದರೆ 24 ಬಾರಿ ಸೋಲಿಸಿದ್ದು, ಇದು ಐಪಿಎಲ್ ದಾಖಲೆಯೂ ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 pm, Mon, 31 March 25