MI vs DC, WPL 2023: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ ಭರ್ಜರಿ ಜಯ
Mumbai Indians vs Delhi Capitals: ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.

MI vs DC Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ಗಳಿಸಲಷ್ಟೇ ಶಕ್ತರಾಗಿದ್ದರು. 110 ರನ್ಗಳ ಸುಲಭ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಪರ ಶಫಾಲಿ ವರ್ಮಾ (33) ಹಾಗೂ ಅಲೀಸ್ ಕ್ಯಾಪ್ಸಿ (38) ಹಾಗೂ ಮೆಗ್ ಲ್ಯಾನಿಂಗ್ (32) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 9 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಮುಂಬೈ ಇಂಡಿಯನ್ಸ್- 109/8 (20)
ಡೆಲ್ಲಿ ಕ್ಯಾಪಿಟಲ್ಸ್- 110/1 (9)
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೋನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಂ ಯಾದವ್.
ಮುಂಬೈ ಇಂಡಿಯನ್ಸ್ ತಂಡ: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್) , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಹೇಲಿ ಮ್ಯಾಥ್ಯೂಸ್ , ನ್ಯಾಟ್ ಸ್ಕಿವರ್-ಬ್ರಂಟ್ , ಅಮೆಲಿಯಾ ಕೆರ್ , ಇಸ್ಸಿ ವಾಂಗ್ , ಅಮನ್ಜೋತ್ ಕೌರ್ , ಹುಮೈರಾ ಕಾಜಿ , ಧಾರಾ ಗುಜ್ಜರ್ , ಜಿಂಟಿಮಣಿ ಕಲಿತಾ , ಸೈಕಾಥರ್ ಇಶಾಕ್ ಸೋನಮ್ ಯಾದವ್ , ನೀಲಂ ಬಿಷ್ಟ್ , ಪ್ರಿಯಾಂಕಾ ಬಾಲಾ
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ) , ತಾನಿಯಾ ಭಾಟಿಯಾ (ವಿಕೆಟ್ ಕೀಪರ್) , ಶಫಾಲಿ ವರ್ಮಾ , ಆಲಿಸ್ ಕ್ಯಾಪ್ಸಿ , ಜೆಮಿಮಾ ರೋಡ್ರಿಗಸ್ , ಮರಿಝನ್ನೆ ಕಪ್ , ಜೆಸ್ ಜೊನಾಸೆನ್ , ಅರುಂಧತಿ ರೆಡ್ಡಿ , ರಾಧಾ ಯಾದವ್ , ಶಿಖಾ ಪಾಂಡೆ , ಪೂನಮ್ ಯಾದವ್ , ತಾರಾ ಎನ್ ಹ್ಯಾರಿಸ್ , ತಾರಾ ಎನ್ ಮಣಿತಾರ್ , ಅಪರ್ಣಾ ಮೊಂಡಲ್ , ಟಿಟಾಸ್ ಸಾಧು , ಸ್ನೇಹ ದೀಪ್ತಿ.
LIVE NEWS & UPDATES
-
MI vs DC Live Score, WPL 2023: ಡೆಲ್ಲಿ ಕ್ಯಾಪಿಟಲ್ಸ್ಗೆ ಭರ್ಜರಿ ಜಯ
MIW 109/8 (20)
DCW 110/1 (9)
ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
-
MI vs DC Live Score, WPL 2023: ಭರ್ಜರಿ ಸಿಕ್ಸ್
ಸೈಕಾ ಇಶಾಕ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ಯಾಪ್ಸಿ
DCW 107/1 (8.4)
-
-
MI vs DC Live Score, WPL 2023: ಶತಕ ಪೂರೈಸಿದ ಡೆಲ್ಲಿ
MIW 109/8 (20)
DCW 101/1 (8.3)
-
MI vs DC Live Score, WPL 2023: ಪವರ್ಫುಲ್ ಸಿಕ್ಸ್
ಸೈಕಾ ಇಶಾಕ್ ಎಸೆತದಲ್ಲಿ ನೇರವಾಗಿ ಸಿಕ್ಸ್ ಬಾರಿಸಿದ ಅಲೀಸ್ ಕ್ಯಾಪ್ಸಿ
DCW 97/1 (8.2)
-
MI vs DC Live Score, WPL 2023: 7 ಓವರ್ ಮುಕ್ತಾಯ
DCW 89/1 (7)
ಕ್ರೀಸ್ನಲ್ಲಿ ಅಲೀಸ್ ಕ್ಯಾಪ್ಸಿ – ಮೆಗ್ ಲ್ಯಾನಿಂಗ್ ಬ್ಯಾಟಿಂಗ್
-
-
MI vs DC Live Score, WPL 2023: ಸಿಕ್ಸ್ಗಳ ಸುರಿಮಳೆ
ಹೇಲಿ ಮ್ಯಾಥ್ಯೂಸ್ ಓವರ್ನಲ್ಲಿ ಮೂರು ಭರ್ಜರಿ ಸಿಕ್ಸ್ ಸಿಡಿಸಿದ ಅಲೀಸ್ ಕ್ಯಾಪ್ಸಿ
DCW 85/1 (6.4)
-
MI vs DC Live Score, WPL 2023: ಮತ್ತೊಂದು ಸಿಕ್ಸ್
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಮತ್ತೊಂದು ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ಕ್ಯಾಪ್ಸಿ
DCW 79/1 (6.3)
-
MI vs DC Live Score, WPL 2023: ಕ್ಯಾಪ್ಸಿ ಹಿಟ್
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಅಲೀಸ್ ಕ್ಯಾಪ್ಸಿ
DCW 73/1 (6.2)
-
MI vs DC Live Score, WPL 2023: ಪವರ್ಪ್ಲೇ ಮುಕ್ತಾಯ
ಇಸ್ಸಿ ವೊಂಗ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಸಿಕ್ಸ್ ಬಾರಿಸಿ ಪವರ್ಪ್ಲೇ ಮುಕ್ತಾಯಗೊಳಿಸಿದ ಮೆಗ್ ಲ್ಯಾನಿಂಗ್
DCW 67/1 (6)
-
MI vs DC Live Score, WPL 2023: ಮೊದಲ ವಿಕೆಟ್ ಪತನ
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರನಡೆದ ಶಫಾಲಿ ವರ್ಮಾ (33 ರನ್, 15 ಎಸೆತ)
DCW 56/1 (4.3)
-
MI vs DC Live Score, WPL 2023: ಶಫಾಲಿ ಸಿಡಿಲಬ್ಬರ
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಫಾಲಿ ವರ್ಮಾ
DCW 56/0 (4.2)
14 ಎಸೆತಗಳಲ್ಲಿ 33 ರನ್ ಬಾರಿಸಿರುವ ಶಫಾಲಿ
-
MI vs DC Live Score, WPL 2023: 2 ಓವರ್ ಮುಕ್ತಾಯ
DCW 22/0 (2)
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್ – ಶಫಾಲಿ ವರ್ಮಾ ಬ್ಯಾಟಿಂಗ್
-
MI vs DC Live Score, WPL 2023: ಮುಂಬೈ ಇಂಡಿಯನ್ಸ್ ಇನಿಂಗ್ಸ್ ಅಂತ್ಯ
MIW 109/7 (20)
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 110 ರನ್ಗಳ ಸುಲಭ ಗುರಿ ನೀಡಿದ ಮುಂಬೈ ಇಂಡಿಯನ್ಸ್
-
MI vs DC Live Score, WPL 2023: ಮುಂಬೈ ಇಂಡಿಯನ್ಸ್ 7ನೇ ವಿಕೆಟ್ ಪತನ
ಜೆಸ್ ಜೊನಾಸನ್ ಎಸೆತದಲ್ಲಿ ಮೆಗ್ ಲ್ಯಾನಿಂಗ್ಗೆ ಕ್ಯಾಚ್ ನೀಡಿ ಹೊರನಡೆದ ಇಸ್ಸಿ ವೊಂಗ್ (23)
MIW 104/7 (19.2)
-
MI vs DC Live Score, WPL 2023: 19 ಓವರ್ ಮುಕ್ತಾಯ
MIW 103/6 (19)
ಕ್ರೀಸ್ನಲ್ಲಿ ಇಸ್ಸಿ ವೊಂಗ್-ಅಮನ್ಜೊತ್ ಕೌರ್ ಬ್ಯಾಟಿಂಗ್
-
MI vs DC Live Score, WPL 2023: ಶತಕ ಪೂರೈಸಿದ ಮುಂಬೈ
19ನೇ ಓವರ್ನಲ್ಲಿ ಶತಕ ಪೂರೈಸಿದ ಮುಂಬೈ ಇಂಡಿಯನ್ಸ್
MIW 101/6 (18.3)
-
MI vs DC Live Score, WPL 2023: ಆಕರ್ಷಕ ಸಿಕ್ಸ್
ಜೆಸ್ ಜೊನಾಸನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಬಾರಿಸಿದ ಇಸ್ಸಿ ವೊಂಗ್
MIW 94/6 (17.1)
-
MI vs DC Live Score, WPL 2023: 16 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಇಸ್ಸಿ ವೊಂಗ್ – ಅಮನ್ಜೊತ್ ಕೌರ್ ಬ್ಯಾಟಿಂಗ್
MIW 85/6 (16)
-
MI vs DC Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ
ರಾಧಾ ಯಾದವ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಅಮನ್ಜೊತ್ ಕೌರ್
MIW 83/6 (15.4)
-
MI vs DC Live Score, WPL 2023: 6ನೇ ವಿಕೆಟ್ ಪತನ
ಶಿಖಾ ಪಾಂಡೆ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹರ್ಮನ್‌ಪ್ರೀತ್ ಕೌರ್ (23)
MIW 74/6 (15)
-
MI vs DC Live Score, WPL 2023: 14 ಓವರ್ ಮುಕ್ತಾಯ
MIW 69/5 (14)
ಕ್ರೀಸ್ನಲ್ಲಿ ಹರ್ಮನ್‌ಪ್ರೀತ್ ಕೌರ್ – ಇಸ್ಸಿ ವೊಂಗ್ ಬ್ಯಾಟಿಂಗ್
-
MI vs DC Live Score, WPL 2023: 5ನೇ ವಿಕೆಟ್ ಪತನ
ಜೆಸ್ ಜೊನಾಸನ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಪೂಜಾ ವಸ್ತ್ರಾಕರ್ (26)
MIW 58/5 (11.4)
-
MI vs DC Live Score, WPL 2023: ಭರ್ಜರಿ ಸಿಕ್ಸ್
ಪೂನಂ ಯಾದವ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೂಜಾ ವಸ್ತ್ರಾಕರ್
MIW 46/4 (10)
-
MI vs DC Live Score, WPL 2023: 8 ಓವರ್ ಮುಕ್ತಾಯ
MIW 24/4 (8)
ಕ್ರೀಸ್ನಲ್ಲಿ ಹರ್ಮನ್‌ಪ್ರೀತ್ ಕೌರ್ ಹಾಗೂ ಪೂಜಾ ವಸ್ತ್ರಾಕರ್ ಬ್ಯಾಟಿಂಗ್
-
MI vs DC Live Score, WPL 2023: 4ನೇ ವಿಕೆಟ್ ಪತನ
ಅರುಂಧತಿಯ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಅಮೆಲಿಯಾ ಕೆರ್ (8)
MIW 22/4 (7)
-
MI vs DC Live Score, WPL 2023: ಪವರ್ಪ್ಲೇ ಮುಕ್ತಾಯ
MIW 19/3 (6)
ಮೊದಲ 6 ಓವರ್ಗಳಲ್ಲಿ ಕೇವಲ 19 ರನ್ ಕಲೆಹಾಕಿದ ಮುಂಬೈ ಇಂಡಿಯನ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉತ್ತಮ ಬೌಲಿಂಗ್ ಪ್ರದರ್ಶನ
-
MI vs DC Live Score, WPL 2023: ಆಕರ್ಷಕ ಫೋರ್
ಮರಿಝನ್ನೆ ಕಪ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಅಮೆಲಿಯಾ ಕೆರ್
MIW 17/3 (4.2)
-
MI vs DC Live Score, WPL 2023: ಮುಂಬೈ ಇಂಡಿಯನ್ಸ್ 3ನೇ ವಿಕೆಟ್ ಪತನ
ಶಿಖಾ ಪಾಂಡೆ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಶಾಟ್ ಬಾರಿಸಿದ ಹೇಲಿ ಮ್ಯಾಥ್ಯೂಸ್…ಜೆಮಿಮಾ ಅತ್ಯುತ್ತಮ ಡೈವಿಂಗ್ ಕ್ಯಾಚ್…ಹೇಲಿ ಮ್ಯಾಥ್ಯೂಸ್ (5) ಔಟ್
MIW 13/3 (4)
-
MI vs DC Live Score, WPL 2023: ಮುಂಬೈ ಇಂಡಿಯನ್ಸ್ 2 ವಿಕೆಟ್ ಪತನ
ಮರಿಝನ್ನೆ ಕಪ್ ಎಸೆತದಲ್ಲಿ ಯಾಸ್ತಿಕಾ ಭಾಟಿಯಾ (1) ಹಾಗೂ ಸೀವರ್ ಬ್ರಂಟ್ (0) ಔಟ್
MIW 6/2 (2.3)
-
MI vs DC Live Score, WPL 2023: ಮೊದಲ ಬೌಂಡರಿ
ಕಾಪ್ಸಿ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹೇಲಿ ಮ್ಯಾಥ್ಯೂಸ್
MIW 6/0 (1.4)
-
MI vs DC Live Score, WPL 2023: ಮೊದಲ ಓವರ್ ಮುಕ್ತಾಯ
MIW 2/0 (1)
ಕ್ರೀಸ್ನಲ್ಲಿ ಹೇಲಿ ಮ್ಯಾಥ್ಯೂಸ್ – ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್
-
MI vs DC Live Score, WPL 2023: ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೋನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಂ ಯಾದವ್.
-
MI vs DC Live Score, WPL 2023: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
MI vs DC Live Score, WPL 2023: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
Hello from the DY Patil Stadium ?️?@mipaltan will take on @DelhiCapitals for today’s second game in Match 1️⃣8️⃣ of the #TATAWPL!
Who will emerge victorious tonight❓#MIvDC pic.twitter.com/B2GNMUc3Vi
— Women’s Premier League (WPL) (@wplt20) March 20, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಆರಂಭ; 7.30 ಕ್ಕೆ
ಸ್ಥಳ: ಬ್ರಬೋರ್ನ್ ಸ್ಟೇಡಿಯಂ, ಮುಂಬೈ
Published On - Mar 20,2023 6:33 PM
