ಶ್ರೇಯಸ್ ಬದಲಿಗೆ ಸೂರ್ಯಕುಮಾರ್ ಎಂಟ್ರಿ; ತಂಡದಲ್ಲಿ ಹಠಾತ್ ಬದಲಾವಣೆ

Ranji Trophy Quarterfinals: ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ಗೆ ಮುಂಬೈ ತನ್ನ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಬೇಕಾಗಿರುವುದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಶ್ರೇಯಸ್ ಬದಲಿಗೆ ಸೂರ್ಯಕುಮಾರ್ ಎಂಟ್ರಿ; ತಂಡದಲ್ಲಿ ಹಠಾತ್ ಬದಲಾವಣೆ
ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್
Follow us
ಪೃಥ್ವಿಶಂಕರ
|

Updated on: Feb 03, 2025 | 8:46 PM

ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ ಸುತ್ತು ಫೆಬ್ರವರಿ 8 ರಿಂದ ಆರಂಭವಾಗಲಿದೆ. ಈ ಸುತ್ತಿಗೆ 8 ತಂಡಗಳು ಎಂಟ್ರಿಕೊಟ್ಟಿದ್ದು, ಇವುಗಳಲ್ಲಿ ಮುಂಬೈ ತಂಡ ಕೂಡ ಸೇರಿದೆ. ಇದೀಗ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ಗೆ ಮುಂಬೈ ತನ್ನ ತಂಡವನ್ನು ಪ್ರಕಟಿಸಿದ್ದು, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಶ್ರೇಯಸ್ ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್​ರನ್ನು ಆಯ್ಕೆ ಮಾಡಲಾಗಿದೆ ಎಂಬುದು ದೊಡ್ಡ ಸುದ್ದಿಯಾಗಿದೆ.

ಮುಂಬೈ ತಂಡ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಹರಿಯಾಣ ವಿರುದ್ಧ ಆಡಲಿದೆ. ಈ ಪಂದ್ಯ ಲಾಹ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮುಂಬೈ 18 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಅನೇಕ ಸ್ಟಾರ್ ಆಟಗಾರರ ಹೆಸರುಗಳಿವೆ. ವಾಸ್ತವವಾಗಿ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಆಡಲಿರುವ ಕಾರಣದಿಂದ ಅವರನ್ನು ಮುಂಬೈ ತಂಡದಿಂದ ಕೈಬಿಡಲಾಗಿದೆ.

ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಆಯುಷ್ ಮ್ಹಾತ್ರೆ, ಅಂಗ್ಕ್ರಿಶ್ ರಘುವಂಶಿ, ಅಮೋಘ್ ಭಟ್ಕಳ್, ಸೂರ್ಯಕುಮಾರ್ ಯಾದವ್, ಸಿದ್ಧೇಶ್ ಲಾಡ್, ಶಿವಂ ದುಬೆ, ಆಕಾಶ್ ಆನಂದ್, ಹಾರ್ದಿಕ್ ತಮೋರ್, ಸೂರ್ಯಾಂಶ್ ಶೆಡ್ಗೆ, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ, ಸಿಲ್ವೆಸ್ಟರ್ ಡಿಸೋಜಾ, ರಾಯ್ಸ್ಟನ್ ಡಯಾಸ್, ಅಥರ್ವ ಅಂಕೋಲೆಕರ್, ಹರ್ಷ ತನ್ನಾ

ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಸಾಧನೆ

ಈ ಬಾರಿಯ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪ್ರದರ್ಶನ ಉತ್ತಮವಾಗಿದ್ದು, ಒಂದೇ ಒಂದು ಪಂದ್ಯದಲ್ಲಿ ಸೋತಿದೆ. ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಸೋತಿದ್ದ ಮುಂಬೈ, ಬರೋಡಾವನ್ನು 84 ರನ್‌ಗಳಿಂದ ಸೋಲಿಸಿತು. ಮಹಾರಾಷ್ಟ್ರ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿದ ಮುಂಬೈ, ತ್ರಿಪುರಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು ನಂತರ ಒಡಿಶಾವನ್ನು ಇನಿಂಗ್ಸ್ ಮತ್ತು 103 ರನ್‌ಗಳಿಂದ ಸೋಲಿಸಿದ್ದ ಮುಂಬೈ ತಂಡವು ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಹಾಗೂ ಮೇಘಾಲಯ ವಿರುದ್ಧ ಇನಿಂಗ್ಸ್ ಮತ್ತು 456 ರನ್‌ಗಳ ಜಯ ಸಾಧಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ
ಮಹಾಕುಂಭ ಮೇಳ: ಹರಿಹರಾನಂದ ಸ್ವಾಮೀಜಿ ಇದ್ದ ಟೆಂಟ್​ನಲ್ಲಿ ಅಗ್ನಿ ಅವಘಡ