Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶ್​ ವಿರುದ್ಧ ಗೆದ್ದು ಬೀಗಿದ ನೆದರ್​ಲೆಂಡ್ಸ್​

Netherlands vs Bangladesh: 230 ರನ್​ಗಳ ಸುಲಭ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ನೆದರ್​ಲೆಂಡ್ಸ್ ಬೌಲರ್​ಗಳು ಯಶಸ್ವಿಯಾದರು. ಅನುಭವಿ ಆರಂಭಿಕ ಆಟಗಾರ ಲಿಟ್ಟನ್ ದಾಸ್ 3 ರನ್​ಗಳಿಸಿ ಔಟಾದರೆ, ತಂಝಿದ್ ಹಸನ್ 15 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.

ಬಾಂಗ್ಲಾದೇಶ್​ ವಿರುದ್ಧ ಗೆದ್ದು ಬೀಗಿದ ನೆದರ್​ಲೆಂಡ್ಸ್​
Netherlands vs Bangladesh
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 28, 2023 | 9:51 PM

ಏಕದಿನ ವಿಶ್ವಕಪ್​ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ನೆದರ್​ಲೆಂಡ್ಸ್ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನೆದರ್​ಲೆಂಡ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 4 ರನ್ ಆಗುವಷ್ಟರಲ್ಲಿ ವಿಕ್ರಮಜಿತ್ ಸಿಂಗ್ (3) ಹಾಗೂ ಮ್ಯಾಕ್ಸ್​​ ಒಡೌಡ್ (0) ವಿಕೆಟ್ ಒಪ್ಪಿಸಿದರು.

ಆ ಬಳಿಕ ಕಣಕ್ಕಿಳಿದ ವೆಸ್ಲಿ ಬ್ಯಾರೆಸಿ 41 ರನ್​ಗಳ ಕೊಡುಗೆ ನೀಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇನ್ನು ನಾಯಕ ಸ್ಕಾಟ್ ಎಡ್ವರ್ಡ್ಸ್ 89 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 68 ರನ್​​ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ನೆದರ್​ಲೆಂಡ್ಸ್ ತಂಡವು ನಿಗದಿತ 50 ಓವರ್​ಗಳಲ್ಲಿ 229 ರನ್​ ಕಲೆಹಾಕಿತು.

230 ರನ್​ಗಳ ಸುಲಭ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ನೆದರ್​ಲೆಂಡ್ಸ್ ಬೌಲರ್​ಗಳು ಯಶಸ್ವಿಯಾದರು. ಅನುಭವಿ ಆರಂಭಿಕ ಆಟಗಾರ ಲಿಟ್ಟನ್ ದಾಸ್ 3 ರನ್​ಗಳಿಸಿ ಔಟಾದರೆ, ತಂಝಿದ್ ಹಸನ್ 15 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.

ಆ ಬಳಿಕ ಬಂದ ನಜ್ಮುಲ್ ಹೊಸೈನ್ ಶಾಂಟೊ (9), ನಾಯಕ ಶಕೀಬ್ ಅಲ್ ಹಸನ್ (5) ಹಾಗೂ ಮುಶ್ಫಿಕುರ್ ರಹೀಮ್ (1) ಒಂದಂಕಿ ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಕೇವಲ 69 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ಮೆಹದಿ ಹಸನ್ ಮಿರಾಝ್ ಆಸರೆಯಾಗಿ ನಿಂತರು.

ಆದರೆ 40 ಎಸೆತಗಳಲ್ಲಿ 35 ರನ್ ಬಾರಿಸಿದ್ದ ಮೆಹಿದಿ ಹಸನ್ ಮಿರಾಝ್ ಅವರನ್ನು ಔಟ್ ಮಾಡುವಲ್ಲಿ ಕೊನೆಗೂ ಬಾಸ್ ಡಿ ಲೀಡೆ ಯಶಸ್ವಿಯಾದರು. ಇದರ ಬೆನ್ನಲ್ಲೇ ಮಹಮದುಲ್ಲಾ (20) ಕ್ಯಾಚ್ ನೀಡಿದರೆ, ಮೆಹದಿ ಹಸನ್ (17) ರನೌಟ್ ಆದರು. ಅಂತಿಮವಾಗಿ 42.2 ಓವರ್​ಗಳಲ್ಲಿ 142 ರನ್​ಗಳಿಗೆ ಬಾಂಗ್ಲಾದೇಶ್ ತಂಡವು ಆಲೌಟ್ ಆಯಿತು.

ಈ ಮೂಲಕ ನೆದರ್​ಲೆಂಡ್ಸ್ ತಂಡವು 87 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ 7.2 ಓವರ್​ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದ ಪೌಲ್ ವ್ಯಾನ್ ಮೀಕೆರೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ನೆದರ್​ಲೆಂಡ್ಸ್​ ತಂಡಕ್ಕೆ 2ನೇ ಜಯ:

ಈ ಬಾರಿಯ ವಿಶ್ವಕಪ್​ನಲ್ಲಿ ಇದು ನೆದರ್​ಲೆಂಡ್ಸ್ ತಂಡದ 2ನೇ ಜಯ. ಇದಕ್ಕೂ ಮುನ್ನ ಸೌತ್ ಆಫ್ರಿಕಾ ವಿರುದ್ಧ 38 ರನ್​ಗಳ ಜಯ ಸಾಧಿಸಿತ್ತು. ಇದೀಗ ಬಾಂಗ್ಲಾದೇಶ್ ತಂಡವನ್ನು 87 ರನ್​ಗಳಿಂದ ಬಗ್ಗು ಬಡಿಯುವ ಮೂಲಕ 2ನೇ ಬಾರಿ ಗೆಲುವಿನ ನಗೆ ಬೀರಿದೆ.

ಬಾಂಗ್ಲಾದೇಶ (ಪ್ಲೇಯಿಂಗ್ XI): ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಝ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.

ಇದನ್ನು ಓದಿ: ಸ್ಪೋಟಕ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಕನ್ನಡಿಗ ರಚಿನ್ ರವೀಂದ್ರ

ನೆದರ್​ಲೆಂಡ್ಸ್​ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.

700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್