ಪಾಕ್ ಕ್ರಿಕೆಟಿಗನಿಗೆ ಮನಸೋತ ನ್ಯೂಜಿಲೆಂಡ್ ಸುಂದರಿ; ಮದುವೆಯಾಗುವಂತೆ ಒತ್ತಾಯ..! ವಿಡಿಯೋ ನೋಡಿ
Viral video: ಶಾದಾಬ್ನಿಂದ ಪ್ಯಾಂಟನ್ನು ಉಡುಗೊರೆಯಾಗಿ ಪಡೆದಕೊಂಡ ಈ ಅಭಿಮಾನಿ ತಾನು ಶಾದಾಬ್‌ನನ್ನು ತುಂಬಾ ಪ್ರೀತಿಸುತ್ತಿದ್ದು, ಅವರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.
ಟಿ20 ವಿಶ್ವಕಪ್ (T20 World Cup 2022) ಆರಂಭಕ್ಕೂ ಮುನ್ನ ತ್ರಿಕೋನ ಸರಣಿಗಾಗಿ (tri-series) ನ್ಯೂಜಿಲೆಂಡ್ ಪ್ರವಾಸ ಮಾಡಿದ್ದ ಪಾಕಿಸ್ತಾನ ತಂಡ ಫೈನಲ್ ಪಂದ್ಯದಲ್ಲಿ ಕಿವೀಸ್ ತಂಡವನ್ನು ಮಣಿಸುವುದರೊಂದಿಗೆ ತ್ರಿಕೋನ ಸರಣಿಯನ್ನು ಎತ್ತಿಹಿಡಿದಿತ್ತು. ಈ ಮೂಲಕ ಟಿ20 ವಿಶ್ವಕಪ್ಗೆ ಗೆಲುವಿನ ಆತ್ಮವಿಶ್ವಾಸದೊಂದಿಗೆ ಎಂಟ್ರಿಕೊಟ್ಟಿತ್ತು. ಈ ವೇಳೆ ಪ್ರವಾಸವನ್ನು ಸುಖಾಂತ್ಯಗೊಳಿಸಿ, ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲು ಸಿದ್ದವಾಗಿದ್ದ ಪಾಕ್ ತಂಡವನ್ನು ಅಲ್ಲಿನ ನೂರಾರು ಅಭಿಮಾನಿಗಳು ಬೇಟಿ ಮಾಡಿದ್ದರು. ಇಲ್ಲಿ ಕೆಲವರು ಆಟಗಾರರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರೆ, ಇನ್ನು ಕೆಲವರು ಆಟೋಗ್ರಾಫ್ ಪಡೆದುಕೊಂಡು ಸಂತಸಪಟ್ಟರು. ಆದರೆ ನ್ಯೂಜಿಲೆಂಡ್‌ನ ಯುವತಿಯೊಬ್ಬಳು, ಪಾಕ್ ಕ್ರಿಕೆಟಿಗನಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಲ್ಲದೆ, ತನ್ನನ್ನು ಮದುವೆಯಾಗುವಂತೆ ಈ ಕ್ರಿಕೆಟಿಗನನ್ನು ಒತ್ತಾಯಿಸಿದ್ದಾಳೆ. ಯುವತಿಯ ಈ ನಡೆಯಿಂದ ಮುಜುಗರಕ್ಕೀಡಾದ ಪಾಕ್ ಕ್ರಿಕೆಟಿಗೆ ನಾಚಿಕೆಪಟ್ಟುಕೊಂಡು ಏನನ್ನು ಮಾತನಾಡದೆ ಅಲ್ಲಿಂದ ತೆರಳಿದ್ದಾನೆ.
ಶಾದಾಬ್‌ನನ್ನು ಮದುವೆಯಾಗಬೇಕು
ವಾಸ್ತವವಾಗಿ ಪಾಕಿಸ್ತಾನ ಕ್ರಿಕೆಟ್‌ನ ಯೂಟ್ಯೂಬ್ ಚಾನೆಲ್, ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವೀಡಿಯೊದಲ್ಲಿ ಪಾಕ್ ಕ್ರಿಕೆಟಿಗರು ಅಭಿಮಾನಿಗಳನ್ನು ಭೇಟಿಯಾಗುತ್ತಿರುವುದು ಕಾಣಬಹುದಾಗಿದೆ. ಈ ಕ್ರಿಕೆಟಿಗರಲ್ಲಿ ಪಾಕಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್-ಆಲ್ ರೌಂಡರ್ ಶಾದಾಬ್ ಖಾನ್ ಕೂಡ ಇದ್ದಾರೆ. ತನ್ನ ಲೆಗ್ ಸ್ಪಿನ್‌ನೊಂದಿಗೆ ತ್ರಿಕೋನ ಸರಣಿಯಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಬಲಿಪಶು ಮಾಡಿದ್ದ ಶಾದಾಬ್, ನ್ಯೂಜಿಲೆಂಡ್‌ನ ಅಭಿಮಾನಿಯನ್ನು ಸಹ ಕ್ಲೀನ್ ಬೌಲ್ಡ್ ಮಾಡಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗನನ್ನು ಕಾಣಲುಬಂದ ನ್ಯೂಜಿಲೆಂಡ್‌ನ ಯುವತಿಯೊಬ್ಬಳು ಶಾದಾಬ್ ಖಾನ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಅವರನ್ನು ನೋಡಲೆಂದೆ ನಾನು ಕ್ರೀಡಾಂಗಣಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಅಭಿಮಾನಿಯ ಈ ಹೇಳಿಕೆಗೆ ಮನಸೋತ ಶಾದಾಬ್ ಕೂಡ ಈ ಅಭಿಮಾನಿಯನ್ನು ನಿರಾಸೆಗೊಳಿಸದೆ ತಮ್ಮ ಪ್ಯಾಂಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ:T20 World Cup: ಅಶ್ವಿನ್ vs ಚಾಹಲ್; ಪಾಕ್ ವಿರುದ್ಧದ ಪಂದ್ಯಕ್ಕೆ ಈ ಇಬ್ಬರಲ್ಲಿ ಯಾರಿಗೆ ತಂಡದಲ್ಲಿ ಅವಕಾಶ?
ಆದರೆ ಈ ವಿಚಾರ ಅಷ್ಟಕ್ಕೆ ನಿಂತಿಲ್ಲ. ಶಾದಾಬ್ನಿಂದ ಪ್ಯಾಂಟನ್ನು ಉಡುಗೊರೆಯಾಗಿ ಪಡೆದುಕೊಂಡ ಈ ಅಭಿಮಾನಿ ತಾನು ಶಾದಾಬ್‌ನನ್ನು ತುಂಬಾ ಪ್ರೀತಿಸುತ್ತಿದ್ದು, ಅವರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ ಈ ಅಭಿಮಾನಿ ಶಾದಾಬ್ ಮುಂದೆ ಮದುವೆ ಪ್ರಸ್ತಾಪವನ್ನು ಸಹ ಮಾಡಿದ್ದಾಳೆ. ಅಭಿಮಾನಿಯ ಈ ಪ್ರಸ್ತಾಪವನ್ನು ಕಂಡು ನಾಚಿ ನೀರಾದ ಶಾದಾಬ್, ಈ ಬಗ್ಗೆ ಏನನ್ನೂ ಹೇಳದೆ ಅಲ್ಲಿಂದ ತೆರಳಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಸೆಣಸಾಟ
ಈಗ ಈ ಮದುವೆ ಪ್ರಸ್ತಾಪವನ್ನು ಬದಿಗಿಟ್ಟಿರುವ ಶಾದಾಬ್, ಅಕ್ಟೋಬರ್ 23 ರಂದು ಭಾರತವನ್ನು ಎದುರಿಸುವ ತಯಾರಿಯಲ್ಲಿದ್ದಾರೆ. ಕಳೆದ ವರ್ಷ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿ ದಾಖಲೆ ಬರೆದಿತ್ತು. ಆ ಪಂದ್ಯದಲ್ಲಿ ಶಾದಾಬ್ ತಮ್ಮ ಸ್ಪಿನ್‌ನೊಂದಿಗೆ ಪ್ರಮುಖ ಪಾತ್ರ ವಹಿಸಿದರು. ಇದೀಗ ಶಾದಾಬ್, ಅದ್ಭುತ ಫಾರ್ಮ್ನಲ್ಲಿದ್ದು, ಟೀಂ ಇಂಡಿಯಾಕ್ಕೆ ತೊಂದರೆ ನೀಡಲು ಸಜ್ಜಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:57 am, Sun, 16 October 22