T20 World Cup: ಅಶ್ವಿನ್ vs ಚಾಹಲ್; ಪಾಕ್ ವಿರುದ್ಧದ ಪಂದ್ಯಕ್ಕೆ ಈ ಇಬ್ಬರಲ್ಲಿ ಯಾರಿಗೆ ತಂಡದಲ್ಲಿ ಅವಕಾಶ?

T20 World Cup 2022: ನಾವು ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ದಾಖಲೆಗಳನ್ನು ನೋಡಿದರೆ, ಅವರು ಲೆಗ್ ಸ್ಪಿನ್‌ಗಿಂತ ಆಫ್ ಸ್ಪಿನ್ ವಿರುದ್ಧ ರನ್​ಗಳಿಸಲು ಹೆಚ್ಚು ಪರದಾಡಿದ್ದಾರೆ.

T20 World Cup: ಅಶ್ವಿನ್ vs ಚಾಹಲ್; ಪಾಕ್ ವಿರುದ್ಧದ ಪಂದ್ಯಕ್ಕೆ ಈ ಇಬ್ಬರಲ್ಲಿ ಯಾರಿಗೆ ತಂಡದಲ್ಲಿ ಅವಕಾಶ?
Ashwin- Chahal
Follow us
TV9 Web
| Updated By: ಪೃಥ್ವಿಶಂಕರ

Updated on:Oct 16, 2022 | 11:23 AM

ಟಿ20 ವಿಶ್ವಕಪ್ 2022 (T20 World Cup 2022)ರ ಅರ್ಹತಾ ಸುತ್ತಿನ ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ಟೀಂ ಇಂಡಿಯಾ ಕೂಡ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳನ್ನು ಆಡಬೇಕಿದೆ. ಆ ಬಳಿಕ ಅ. 23 ರಂದು ಬದ್ಧವೈರಿ ಪಾಕ್ ತಂಡವನ್ನು ಮೆಲ್ಬೋರ್ನ್ ಮೈದಾನದಲ್ಲಿ (Melbourne ground) ಎದುರಿಸಲದೆ.ಆದರೆ ಅದಕ್ಕೂ ಮುನ್ನ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಿಂದಾಗಿ ಪಂದ್ಯ ನಡೆಯುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದೆಲ್ಲವುದರ ನಡುವೆ ಕ್ರಿಕೆಟ್ ಜಗತ್ತು ಅಕ್ಟೋಬರ್ 23 ರಂದು ಮೆಲ್ಬೋರ್ನ್ ಮೈದಾನದಲ್ಲಿ ನಡೆಯುವ ಪಂದ್ಯಕ್ಕಾಗಿ ಕಾಯುತ್ತಿದ್ದು, ಈ ಪಂದ್ಯದಲ್ಲಿ ಉಭಯ ತಂಡಗಳ ಆಡುವ ಇಲೆವೆನ್ ಹೇಗಿರಲಿದೆ ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಅದರಲ್ಲೂ ಟೀಂ ಇಂಡಿಯಾ ಸ್ಪಿನ್ ವಿಭಾಗದಲ್ಲಿ ಅಶ್ವಿನ್ (Ashwin) ಮತ್ತು ಚಾಹಲ್ (Yuzvendra Chahal) ನಡುವೆ ಯಾರಿಗೆ ಅವಕಾಶ ಸಿಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಅದೇನೇ ಇರಲಿ, ಭಾರತ ತಂಡದ ಪ್ಲೇಯಿಂಗ್ XI ಪಾಕಿಸ್ತಾನದ ವಿರುದ್ಧ ಹೇಗಿರಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದ್ದು, ಒಂದೋ ಅಥವಾ ಎರಡೋ ಬದಲಾವಣೆಗಳನ್ನು ಹೊರತುಪಡಿಸಿದರೆ ಬಹುತೇಕ ಈಗ ನಿರೀಕ್ಷಿಸಿರುವ ತಂಡವೇ ಕಣಕ್ಕಿಳಿಯಲಿದೆ. ಆ ಒಂದೋ ಅಥವಾ ಎರಡೋ ಬದಲಾವಣೆಯಲ್ಲಿ ಅಶ್ವಿನ್ ಮತ್ತು ಚಾಹಲ್ ಈ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಒಂದಾಗಿದೆ.

ಚಾಹಲ್ ಅಥವಾ ಅಶ್ವಿನ್ ಯಾರಿಗೆ ಚಾನ್ಸ್?

ಮೊದಲಿಗೆ ಯುಜುವೇಂದ್ರ ಚಾಹಲ್ ಟೀಂ ಇಂಡಿಯಾದ ಮೊದಲ ಆಯ್ಕೆಯಾಗಿದ್ದರು. ಆದರೆ, ನೀಡಿದ ಅವಕಾಶಗಳನ್ನು ಅಶ್ವಿನ್ ಸದುಪಯೋಗಪಡಿಸಿಕೊಂಡ ರೀತಿಯನ್ನು ನೋಡಿದರೆ ಅವರು ಸಹ ತಂಡದ ಭಾಗವಾಗುವ ಸಾಧ್ಯತೆ ಇದೆ. ಇತ್ತೀಚಿಗೆ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರಬಹುದು. ಆದರೆ ಈ ಪಂದ್ಯದಲ್ಲಿ ಅಶ್ವಿನ್ ನೀಡಿದ ಪ್ರದರ್ಶನ ಅದ್ಭುತವಾಗಿತ್ತು.

ಇದನ್ನೂ ಓದಿ:T20 World Cup: ಭಾರತ- ಪಾಕ್ ಪಂದ್ಯ ನಡೆಯುವುದು ಅನುಮಾನ..! ಇದು ಹವಾಮಾನ ಇಲಾಖೆ ನೀಡಿದ ಮಾಹಿತಿ

ಆದರೆ, ಅಭ್ಯಾಸ ಪಂದ್ಯದಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಅಶ್ವಿನ್​ ತಂಡದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿ ಈ ವರ್ಷ ಇವರಿಬ್ಬರು ತೋರಿರುವ ಪ್ರದರ್ಶನವನ್ನು ಸಹ ಪರಿಗಣಿಸಬೇಕಾಗುತ್ತದೆ.ಟಿ20 ಕ್ರಿಕೆಟ್​ನಲ್ಲಿ ಹೇಗೆ ಬ್ಯಾಟರ್​ಗಳನ್ನು ಅವರ ಸ್ಟ್ರೈಕ್​ ರೇಟ್​ ಮೇಲೆ ಅಳೆಯಲಾಗುತ್ತದೆಯೋ ಹಾಗೆಯೇ ಬೌಲರ್​ಗಳನ್ನು ಅವರು ಎಸೆದಿರುವ ಡಾಟ್​ ಬಾಲ್​ಗಳ ಮೇಲೆ ನಿರ್ಧರಿಸಲಾಗುತ್ತದೆ.

2022 ರಲ್ಲಿ ಚಾಹಲ್- ಅಶ್ವಿನ್ ಪ್ರದರ್ಶನ

ಈ ವರ್ಷದಲ್ಲಿ ಇಲ್ಲಿಯವರೆ ನಡೆದಿರುವ ಟಿ20 ಪಂದ್ಯಗಳಲ್ಲಿ ಚಾಹಲ್ 18 ಇನ್ನಿಂಗ್ಸ್‌ಗಳನ್ನು ಆಡಿದ್ದು, ಇದರಲ್ಲಿ 21 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಅವರು ವಿಕೆಟ್ ಪಡೆಯುವ ಸರಾಸರಿ 22.62 ( 23 ರನ್​ಗಳಿಗೆ ಒಂದು ವಿಕೆಟ್ ಪಡೆಯುತ್ತಾರೆ) ರಷ್ಟಿದ್ದು, ಎಕಾನಮಿ 7.60ರಷ್ಟಿದೆ. ಹಾಗೆಯೇ ಡಾಟ್ ಬಾಲ್ ಶೇಕಡಾವಾರು 34.93 ಆಗಿದೆ.

ಹಾಗೆಯೇ ಈ ವರ್ಷ 8 ಟಿ20 ಪಂದ್ಯಗಳನ್ನು ಆಡಿರುವ ಅಶ್ವಿನ್, 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 43.80 ( 44 ರನ್​ಗಳಿಗೆ ಒಂದು ವಿಕೆಟ್ ಪಡೆಯುತ್ತಾರೆ) ಸರಾಸರಿಯಲ್ಲಿ ಅಶ್ವಿನ್ ವಿಕೆಟ್ ಪಡೆದಿದ್ದರೆ, ಅವರ ಎಕಾನಮಿ 6.84ರಷ್ಟಿದೆ. ಅವರ ಡಾಟ್ ಬಾಲ್ ಶೇಕಡಾವಾರು 42.19 ಆಗಿದೆ.

ಟೀಮ್ ಇಂಡಿಯಾದಲ್ಲಿ ಯಾರಿಗೆ ಅವಕಾಶ?

ವಿಕೆಟ್ ಟೇಕಿಂಗ್ ಪ್ರಕಾರ, ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರಲ್ಲಿ ಒಬ್ಬರನ್ನು ಆಡಿಸಲು ಬಯಸಿದರೆ, ಆ ಹೆಸರು ಚಾಹಲ್ ಆಗಿರಬಹುದು ಎಂಬುದು ಸ್ಪಷ್ಟವಾಗಿದೆ. ಆದರೆ, ರನ್​ಗಳಿಗೆ ಕಡಿವಾಣ ಹಾಕುವ ಬೌಲರ್​ ಮೇಲೆ ಟೀಂ ಇಂಡಿಯಾ ಹೆಚ್ಚು ಒತ್ತು ನೀಡಿದರೆ, ಆಗ ಅಶ್ವಿನ್ ಮುನ್ನಲೆಗೆ ಬರುತ್ತಾರೆ. ಇದಲ್ಲದೇ ಚಾಹಲ್ ಲೆಗ್ ಸ್ಪಿನ್ನರ್ ಆಗಿದ್ದು, ಅಶ್ವಿನ್ ಆಫ್ ಸ್ಪಿನ್ನರ್ ಆಗಿದ್ದಾರೆ. ಹೀಗಾಗಿ ನಾವು ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ದಾಖಲೆಗಳನ್ನು ನೋಡಿದರೆ, ಅವರು ಲೆಗ್ ಸ್ಪಿನ್‌ಗಿಂತ ಆಫ್ ಸ್ಪಿನ್ ವಿರುದ್ಧ ರನ್​ಗಳಿಸಲು ಹೆಚ್ಚು ಪರದಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 am, Sun, 16 October 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ