Viral Video: ಬೌಲಿಂಗ್ ಮಾಡುವ ಮೊದಲೇ ಬೌಲರ್​ಗಿಂತ ವೇಗವಾಗಿ ಓಡಿದ ಬ್ಯಾಟರ್..!

ಕ್ರಿಕೆಟ್​ನಲ್ಲಿ ಮನ್​ಕಡ್ ರನೌಟ್ ಅಥವಾ ಮನ್​ಕಡಿಂಗ್ ರನೌಟ್​ ಎಂಬ ಹೆಸರು ಬರಲು ಮುಖ್ಯ ಕಾರಣ ಭಾರತದ ಮಾಜಿ ಆಟಗಾರ ವಿನೂ ಮನ್​ಕಡ್.

Viral Video: ಬೌಲಿಂಗ್ ಮಾಡುವ ಮೊದಲೇ ಬೌಲರ್​ಗಿಂತ ವೇಗವಾಗಿ ಓಡಿದ ಬ್ಯಾಟರ್..!
Non-Striker
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 14, 2022 | 4:27 PM

ಕ್ರಿಕೆಟ್ ಅಂಗಳದಲ್ಲಿ ಇತ್ತೀಚಿನ ಚರ್ಚಾ ವಿಷಯವಾಗಿ ಮನ್​ಕಡ್ ರನೌಟ್ ಏಕೆ ಬೇಕು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹಣೆ ನೀಡಲು ಸಾಧ್ಯವಿಲ್ಲ. ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟರ್​ ಕ್ರೀಸ್ ಬಿಟ್ಟರೆ, ಆಗ ಆತನನ್ನು ರನೌಟ್ ಮೂಲಕ ಔಟ್ ಮಾಡುವುದನ್ನು ಮನ್​ಕಡ್ ರನೌಟ್ ಎನ್ನಲಾಗುತ್ತದೆ. ಆದರೆ ಕ್ರಿಕೆಟ್ ಅಂಗಳದಲ್ಲಿ ಇಂತಹದೊಂದು ರನೌಟ್​ಗೆ ಅವಕಾಶವಿದ್ದರೂ ಇದಕ್ಕೆ ಕ್ರೀಡಾಸ್ಪೂರ್ತಿ ಅಡ್ಡಿಯಾಗುತ್ತಿರುವುದು ವಿಪಯಾರ್ಸ. ಇದಾಗ್ಯೂ ಇತ್ತೀಚೆಗೆ ಮೆರಿಲ್ಬೋರ್ನ್​​ ಕ್ರಿಕೆಟ್ ಕ್ಲಬ್ (MCC) ಕಾನೂನುಗಳ ಉಪ ಸಮಿತಿಯು ಮನ್​ಕಡ್ ರನೌಟ್​ಗೆ ನೇರ ಅವಕಾಶ ನೀಡುವ ನಿಯಮವನ್ನು ಎತ್ತಿ ಹಿಡಿದಿದೆ. ಇನ್ನು ಐಸಿಸಿ ಕಡೆಯಿಂದ ಮುದ್ರೆ ಬಿದ್ದರೆ ನೇರವಾಗಿ ಮನ್​ಕಡ್​ ರನೌಟ್ ಕಾರ್ಯರೂಪಕ್ಕೆ ಬರಲಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಯುರೋಪಿಯನ್ ಕ್ರಿಕೆಟ್ ಪಂದ್ಯವೊಂದರಲ್ಲಿ ಮನ್​ಕಡ್ ರನೌಟ್​ ಏಕೆ ಅವಶ್ಯಕ ಎಂಬುದನ್ನು ನಿರ್ಣಯಿಸಲು ಪ್ರಮುಖ ಸಾಕ್ಷಿ ಸಿಕ್ಕಿದೆ ಎಂದೇ ಹೇಳಬಹುದು. ಏಕೆಂದರೆ ಈ ಪಂದ್ಯದಲ್ಲಿ ನಾನ್-ಸ್ಟ್ರೈಕರ್‌ನ ತುದಿಯಲ್ಲಿರುವ ಬ್ಯಾಟರ್ ರನ್‌ಗಾಗಿ ಓಡಲು ಮುಂದಾಗಿದ್ದಾನೆ. ವಿಶೇಷ ಎಂದರೆ ಬೌಲರ್ ಚೆಂಡೆಸೆಯುವ ಮುನ್ನವೇ ಬ್ಯಾಟರ್ ಅರ್ಧ ಪಿಚ್​ ದಾಟಿದ್ದರೂ ಎಂಬುದು ವಿಶೇಷ.

ಇತ್ತ ತನಗಿಂತ ವೇಗವಾಗಿ ಓಡುತ್ತಿರುವ ಬ್ಯಾಟರ್​ನ ನೋಡಿ ಬೌಲರ್ ಚೆಂಡೆಸೆದಿರಲಿಲ್ಲ. ಅಷ್ಟೇ ಅಲ್ಲದೆ ಅಂಪೈರ್​ಗೆ ಮೊದಲ ವಾರ್ನಿಂಗ್ ಕೊಡುವಂತೆ ಸೂಚಿಸಿದ್ದರು. ಈ ಎಚ್ಚರಿಕೆಯೇ ಬ್ಯಾಟರ್​ಗಳ ಪಾಲಿಗೆ ವರದಾನವಾಗಿರುವುದು. ಸಾಮಾನ್ಯವಾಗಿ ಕ್ರಿಕೆಟ್​ನಲ್ಲಿ ಮನ್​ಕಡ್​ ರನೌಟ್​ಗೆ ಅವಕಾಶವಿದ್ದರೂ ಮೊದಲ ಎಚ್ಚರಿಕೆ ನೀಡಿದ ಬಳಿಕ, 2ನೇ ಬಾರಿಗೆ ಅದೇ ತಪ್ಪನ್ನು ಮುಂದುವರೆಸಿದರೆ ಮನ್​ಕಡ್ ರನೌಟ್ ಅನ್ನು ಪುಷ್ಠೀಕರಿಸಲಾಗುತ್ತದೆ. ನೇರವಾಗಿ ಮೊದಲೇ ರನೌಟ್ ಮಾಡಿದರೆ ಅದು ಕ್ರೀಡಾ ಸ್ಪೂರ್ತಿಗೆ ವಿರುದ್ದ ಎನ್ನಲಾಗುತ್ತದೆ.

ಇದನ್ನೇ ಬಂಡವಾಳ ಮಾಡಿಕೊಳ್ಳುವ ಬ್ಯಾಟರ್​ಗಳು ಬೌಲರ್ ಚೆಂಡೆಸೆಯುವ ಮುನ್ನವೇ ಕ್ರೀಸ್ ಬಿಟ್ಟು ರನ್​ಗಳಿಸುತ್ತಿದ್ದಾರೆ. ಯುರೋಪಿಯನ್ ಕ್ರಿಕೆಟ್ ಪಂದ್ಯದಲ್ಲಿ ಇದರ ಅತ್ಯುತ್ತಮ ಉದಾಹರಣೆ ಕಂಡು ಬಂದಿದೆ. ಎಂಸಿಸಿ ಕಾನೂನುಗಳ ಉಪ ಸಮಿತಿಯು ‘ಮನ್​ಕಡಿಂಗ್’ ನಿಯಮದಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಈ ಮೂಲಕ ಅದನ್ನು ‘ರನ್-ಔಟ್’ ವರ್ಗಕ್ಕೆ ಸೇರಿಸಿದೆ. ಈ ನಿಯಮವನ್ನು ಐಸಿಸಿ ಒಪ್ಪಿಕೊಂಡರೆ ಮಾತ್ರ ಮನ್​ಕಡಿಂಗ್ ರನೌಟ್​ಗೆ ಅವಕಾಶ ದೊರೆಯಲಿದೆ. ಸದ್ಯ ಯುರೋಪಿಯನ್ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ನ ಓಟ ನೋಡಿದ್ರೆ ಐಸಿಸಿ ಖಂಡಿತವಾಗಿಯೂ ಈ ನಿಯಮಕ್ಕೆ ಮುದ್ರೆ ಒತ್ತುವ ಸಾಧ್ಯತೆಯಿದೆ.

ಮನ್​ಕಡ್​ಗೂ ಭಾರತಕ್ಕೂ ಇದೆ ನಂಟು: ಕ್ರಿಕೆಟ್​ನಲ್ಲಿ ಮನ್​ಕಡ್ ರನೌಟ್ ಅಥವಾ ಮನ್​ಕಡಿಂಗ್ ರನೌಟ್​ ಎಂಬ ಹೆಸರು ಬರಲು ಮುಖ್ಯ ಕಾರಣ ಭಾರತದ ಮಾಜಿ ಆಟಗಾರ ವಿನೂ ಮನ್​ಕಡ್. 1947 ರಲ್ಲಿ ಆಸ್ಟ್ರೇಲಿಯನ್ ಬ್ಯಾಟ್ಸ್​ಮನ್ ಬಿಲ್​ ಬ್ರೌನ್ ಅನ್ನು ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಟ್ಟ ಕಾರಣ ವಿನೂ ಮನ್​ಕಡ್ ನಾನ್​ ಸ್ಟ್ರೈಕ್​ನಲ್ಲಿ ರನೌಟ್ ಮಾಡಿದ್ದರು. ಮನ್​ಕಡ್​ ಮಾಡಿದ ಹೊಸ ರೀತಿಯ ರನೌಟ್ ಹೊಸ ಚರ್ಚೆ ಹುಟ್ಟು ಹಾಕಿತು. ಅಂದು ವಿನೂ ಮನ್​ಕಡ್ ಮಾಡಿದ ರನೌಟ್ ನಂತರ ಮನ್​ಕಡ್ ರನೌಟ್ ಎಂದೇ ಪ್ರಸಿದ್ಧಿ ಪಡೆಯಿತು. ಇದನ್ನೇ ಮುಂದೆ ಕ್ರಿಕೆಟ್ ನಿಯಮದಲ್ಲಿ ಮನ್​ಕಡಿಂಗ್ ರನೌಟ್​ ಎಂದು ಕರೆಯಲಾಯಿತು.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(Commentators In Splits As Non-Striker Sets Off For A Run Even Before Ball Is Bowled)

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?