
2026 ರ ಐಪಿಎಲ್‌ನಲ್ಲಿ (IPL 2026) ಮೊದಲ ಹಂತ ಮುಕ್ತಾಯಗೊಂಡಿದೆ. ಅಂದರೆ ಎಲ್ಲಾ 10 ತಂಡಗಳು ತಲಾ ಒಂದೊಂದು ಪಂದ್ಯಗಳನ್ನಾಡಿವೆ. ಮೊದಲ ಈ ಐದು ಪಂದ್ಯಗಳು ಕೆಲವು ಪ್ರಮುಖ ಆಟಗಾರರ ಇಂಜುರಿ ಹಾಗೂ ಅಲಭ್ಯತೆಯ ನಡುವೆ ಅದ್ಧೂರಿಯಾಗಿ ನಡೆದಿವೆ. ಇಂದಿನಿಂದ ಎರಡನೇ ಹಂತ ಆರಂಭವಾಗುತ್ತಿದ್ದು, ಈ ಸುತ್ತಿನಿಂದ ಕೆಲವು ಅಟಗಾರರು ಕಣಕ್ಕಿಳಿಯಲಿದ್ದಾರೆ. ಆದಾಗ್ಯೂ ಶ್ರೀಲಂಕಾ ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರಗೆ (Nuwan Thushara) ಮಾತ್ರ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಐಪಿಎಲ್‌ನಲ್ಲಿ ಆರ್‌ಸಿಬಿ (RCB) ತಂಡದ ಭಾಗವಾಗಿರುವ ತುಷಾರ, ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗದ ಕಾರಣ ಶ್ರೀಲಂಕಾ ಕ್ರಿಕೆಟ್ ಮಂಡಳಿ, ತುಷಾರಗೆ ಎನ್‌ಒಸಿ ನೀಡಲು ನಿರಾಕರಿಸಿದೆ. ಹೀಗಾಗಿ ಅವರು ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆರಳಿರುವ ತುಷಾರ, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.
ಶ್ರೀಲಂಕಾ ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್‌ನಲ್ಲಿ ಆಡಲು ಎನ್‌ಒಸಿ ನೀಡದ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧ ನುವಾನ್ ತುಷಾರ ಮೊಕದ್ದಮೆ ಹೂಡಿದ್ದಾರೆ. ಮೇಲೆ ಹೇಳಿದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ನಡೆಸಿದ ಫಿಟ್‌ನೆಸ್ ಪರೀಕ್ಷೆಯಲ್ಲಿ ನುವಾನ್ ತುಷಾರ ಪಾಸಾಗಿಲ್ಲ. ಹೀಗಾಗಿ ಅವರನ್ನು ಐಪಿಎಲ್‌ನಲ್ಲಿ ಆಡದಂತೆ ನಿಷೇಧಿಸಲಾಗಿದೆ. ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಟಗಾರರಿಗೆ ಮಾತ್ರ ವಿದೇಶಿ ಲೀಗ್‌ಗಳಲ್ಲಿ ಆಡಬಹುದು ಎಂಬ ಶ್ರೀಲಂಕಾ ಮಂಡಳಿಯ ನಿಯಮ ನುವಾನ್ ತುಷಾರಗೆ ಮುಳುವಾಗಿದೆ.
RCB vs SRH Highlights, IPL 2026: ಎಸ್ಆರ್ಹೆಚ್ ವಿರುದ್ಧ ಆರ್ಸಿಬಿಗೆ ಸುಲಭ ಜಯ
ನುವಾನ್ ತುಷಾರ ಅವರನ್ನು ಕಳೆದ ವರ್ಷ ಆರ್‌ಸಿಬಿ 1.6 ಕೋಟಿಗೆ ಖರೀದಿಸಿದೆ. ಆದಾಗ್ಯೂ ತುಷಾರ ಇದುವರೆಗೂ ಆರ್‌ಸಿಬಿ ತಂಡವನ್ನು ಸೇರದೆ ಇನ್ನೂ ಶ್ರೀಲಂಕಾದಲ್ಲಿದ್ದಾರೆ. ಐಪಿಎಲ್‌ನಲ್ಲಿ ಆಡಲು ನಾನಾ ಕಸರತ್ತುಗಳನ್ನು ಮಾಡುತ್ತಿರುವ ನುವಾನ್ ತುಷಾರ ಈಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಂಡಳಿಯೊಂದಿಗಿನ ನನ್ನ ಕೇಂದ್ರ ಒಪ್ಪಂದ ಮಾರ್ಚ್ 31 ರಂದೇ ಮುಕ್ತಾಯಗೊಂಡಿದೆ. ಅಲ್ಲದೆ ನೂತನ ಕೇಂದ್ರ ಒಪ್ಪಂದದಲ್ಲಿ ನನ್ನ ಹೆಸರನ್ನು ಪರಿಗಣಿಸದಂತೆ ನಾನು ಮಂಡಳಿಗೆ ಮನವಿ ಮಾಡಿದ್ದೇನೆ. ಹೀಗಿದ್ದರೂ ಫಿಟ್ನೆಸ್ ಸಮಸ್ಯೆಗಳನ್ನು ಉಲ್ಲೇಖಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ನನಗೆ NOC ನೀಡುತ್ತಿಲ್ಲ. ಈ ನಿರ್ಧಾರದಿಂದ ನನಗೆ 1.6 ಕೋಟಿ ನಷ್ಟವಾಗುತ್ತಿದೆ ಎಂದು ತುಷಾರ ಮಂಡಳಿ ವಿರುದ್ಧ ಆರೋಪ ಹೊರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Thu, 2 April 26