ODI Records: ಏಕದಿನ ಕ್ರಿಕೆಟ್‌ನಲ್ಲಿ ರನ್ ಲೂಟಿ ಮಾಡಿದ್ದರೂ ಒಂದೇ ಒಂದು ಶತಕ ಗಳಿಸದ ಸ್ಟಾರ್ ಕ್ರಿಕೆಟಿಗರಿವರು!
ODI Records: ಈ ಪಟ್ಟಿಯಲ್ಲಿ ಮೂವರು ಪಾಕಿಸ್ತಾನಿ ಕ್ರಿಕೆಟಿಗರು ಸೇರಿದ್ದಾರೆ. ಅವರಲ್ಲಿ ಮಿಸ್ಬಾ, ವಾಸಿಂ ಅಕ್ರಮ್ ಮತ್ತು ಮೊಯಿನ್ ಖಾನ್ ಸೇರಿದ್ದಾರೆ. ಮಿಸ್ಬಾ ಅವರು ತಮ್ಮ ವೃತ್ತಿಜೀವನದಲ್ಲಿ 162 ODIಗಳಲ್ಲಿ 5122 ರನ್ ಗಳಿಸಿದ್ದಾರೆ. ಆದರೆ, ಸೆಂಚುರಿ ಸವಿಯಲೇ ಇಲ್ಲ.
ಕ್ರಿಕೆಟ್ ಹಲವು ದಾಖಲೆಗಳಿಗೆ ಕೇಂದ್ರ ಬಿಂದುವಾಗುತ್ತಿದೆ. ಹಲವು ರೂಪಗಳು ಬದಲಾದರೂ.. ಈ ದಾಖಲೆಗಳ ಅಲೆ ಆಡುತ್ತಿಲ್ಲ. ಆದಾಗ್ಯೂ, ಕೆಲವರು ಕೆಲವು ವಿಶೇಷ ದಾಖಲೆಗಳೊಂದಿಗೆ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಅಂತಹದರಲ್ಲಿ ಈ ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಶತಕವಿಲ್ಲದೆ ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಯಾರಿದ್ದಾರೆ ಎಂಬುದನ್ನು ನಾವೀಗ ನಿಮಗೆ ಹೇಳಲಿದ್ದೇವೆ. ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಮಿಸ್ಬಾ-ಉಲ್-ಹಕ್ ಏಕದಿನದಲ್ಲಿ ಶತಕವಿಲ್ಲದೆ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ದಿಗ್ಗಜ ಬ್ಯಾಟ್ಸ್‌ಮನ್ ತಮ್ಮ ವೃತ್ತಿಜೀವನದಲ್ಲಿ 5,000 ರನ್ ಗಳಿಸಿದ್ದಾರೆ. ಆದರೆ, ಮಿಸ್ಬಾ ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಶತಕ ಗಳಿಸದೆ ಆಟದಿಂದ ನಿವೃತ್ತಿ ಘೋಷಿಸಿದರು. ಟಾಪ್-10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja)ಕೂಡ ಇದ್ದಾರೆ.
ಅಗ್ರ-3ರಲ್ಲಿ ಮೂವರು ಪಾಕಿಸ್ತಾನಿ ಆಟಗಾರರು ಈ ಪಟ್ಟಿಯಲ್ಲಿ ಮೂವರು ಪಾಕಿಸ್ತಾನಿ ಕ್ರಿಕೆಟಿಗರು ಸೇರಿದ್ದಾರೆ. ಅವರಲ್ಲಿ ಮಿಸ್ಬಾ, ವಾಸಿಂ ಅಕ್ರಮ್ ಮತ್ತು ಮೊಯಿನ್ ಖಾನ್ ಸೇರಿದ್ದಾರೆ. ಮಿಸ್ಬಾ ಅವರು ತಮ್ಮ ವೃತ್ತಿಜೀವನದಲ್ಲಿ 162 ODIಗಳಲ್ಲಿ 5122 ರನ್ ಗಳಿಸಿದ್ದಾರೆ. ಆದರೆ, ಸೆಂಚುರಿ ಸವಿಯಲೇ ಇಲ್ಲ. ಮಿಸ್ಬಾ ಅವರ ಗರಿಷ್ಠ ಸ್ಕೋರ್ ಔಟಾಗದೆ 96 ರನ್ ಆಗಿದೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ (3717) ಮತ್ತು ವಿಕೆಟ್‌ಕೀಪರ್ – ಬ್ಯಾಟ್ಸ್‌ಮನ್ ಮೊಯಿನ್ ಖಾನ್ (3266) ಮಿಸ್ಬಾ ನಂತರ ಶತಕ ಗಳಿಸದೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇತರ ಇಬ್ಬರು ಪಾಕಿಸ್ತಾನಿ ಆಟಗಾರರಾಗಿದ್ದಾರೆ.
ಟಾಪ್-10ರಲ್ಲಿ ಭಾರತದಿಂದ ಒಬ್ಬರು ಮಾತ್ರ ಟಾಪ್-10 ಪಟ್ಟಿಯಲ್ಲಿ ಜಿಂಬಾಬ್ವೆ ಆಲ್‌ರೌಂಡರ್ ಹೀತ್ ಸ್ಟ್ರಿಕ್ ಮತ್ತು ನ್ಯೂಜಿಲೆಂಡ್‌ನ ಆಂಡ್ರ್ಯೂ ಜೋನ್ಸ್ ಅವರಂತಹ ದೈತ್ಯರೂ ಇದ್ದಾರೆ. ಈ ಪೈಕಿ ರವೀಂದ್ರ ಜಡೇಜಾ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ 168 ಏಕದಿನ ಪಂದ್ಯಗಳಲ್ಲಿ 2411 ರನ್ ಗಳಿಸಿದ್ದಾರೆ. ಆದರೆ, ಇದುವರೆಗೂ ಅವರ ಖಾತೆಯಲ್ಲಿ ಸೆಂಚುರಿ ಬಂದಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ಸರಾಸರಿ 32.58. ಏಕದಿನದಲ್ಲಿ ಜಡೇಜಾ ಅವರ ಗರಿಷ್ಠ ಸ್ಕೋರ್ 87 ಆಗಿದೆ.
ಇದನ್ನೂ ಓದಿ:U19 World Cup 2022: ಸೆಮಿ ಫೈನಲ್ನಲ್ಲಿ ಭಾರತಕ್ಕೆ ಬಲಿಷ್ಠ ಎದುರಾಳಿ! ಸೆಮಿ ಹೋರಾಟ ಯಾರ್ಯಾರ ನಡುವೆ ಗೊತ್ತಾ?
IND vs WI: ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿಶ್ವದ ಯಾವ ತಂಡವೂ ಮಾಡದ ವಿಶಿಷ್ಟ ದಾಖಲೆ ಮಾಡಲಿದೆ ಭಾರತ!