PAK vs ENG: ಬಾಬರ್ ಪಡೆಗೆ 67 ರನ್​ಗಳ ಸೋಲು; ಸರಣಿ ಗೆಲುವಿನೊಂದಿಗೆ ಪಾಕ್ ತೊರೆದ ಇಂಗ್ಲೆಂಡ್

PAK vs ENG: ಇಂಗ್ಲೆಂಡ್ ಬ್ಯಾಟಿಂಗ್ ಜೊತೆಗೆ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಕೂಡ ಪಾಕ್ ತಂಡದ ಸೋಲಿಗೆ ಕಾರಣವಾಯಿತು. ನಾಯಕ ಬಾಬರ್ ಅಜಮ್ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟರು. ಈ ಮೂಲಕ ಮತ್ತೊಮ್ಮೆ ಮಹತ್ವದ ಪಂದ್ಯದಲ್ಲಿ ಪಾಕ್ ಫೀಲ್ಡಿಂಗ್ ವೈಫಲ್ಯ ಕಂಡಿತು.

PAK vs ENG: ಬಾಬರ್ ಪಡೆಗೆ 67 ರನ್​ಗಳ ಸೋಲು; ಸರಣಿ ಗೆಲುವಿನೊಂದಿಗೆ ಪಾಕ್ ತೊರೆದ ಇಂಗ್ಲೆಂಡ್
Pak Vs Eng
Follow us
TV9 Web
| Updated By: ಪೃಥ್ವಿಶಂಕರ

Updated on:Oct 03, 2022 | 2:36 PM

17 ವರ್ಷಗಳ ಕಾಲ ಇಂಗ್ಲೆಂಡ್ ಕ್ರಿಕೆಟ್ ತಂಡದ (England cricket team) ಆಗಮನಕ್ಕಾಗಿ ಕಾದು ಕುಳಿತಿದ್ದ ಪಾಕಿಸ್ತಾನಕ್ಕೆ ಆಂಗ್ಲರು ಸರಣಿ ಸೋಲಿನ ಶಾಕ್ ನೀಡಿ ತವರಿಗೆ ಮರಳಿದ್ದಾರೆ. ಏಳು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಪಾಕಿಸ್ತಾನವನ್ನು 67 ರನ್‌ಗಳಿಂದ ಸೋಲಿಸಿ ಚುಟುಕು ಸರಣಿಯನ್ನು ತಮ್ಮದಾಗಿಸಿಕೊಂಡಿದೆ. ಟಿ20 ವಿಶ್ವಕಪ್‌ಗೂ ಮುನ್ನ ಈ ಉಭಯ ತಂಡಗಳಿಗೂ ಪೂರ್ವತಯಾರಿಯಂತ್ತಾಗಿದ್ದ ಈ ಸರಣಿಯನ್ನು ಇಂಗ್ಲೆಂಡ್ ತಂಡ ಪ್ರಮುಖರ ಅಲಭ್ಯತೆಯ ನಡುವೆಯೂ ಗೆದ್ದು ಬೀಗಿದೆ. ಕರಾಚಿಯಲ್ಲಿ ನಾಲ್ಕು ಪಂದ್ಯಗಳು ಮತ್ತು ಲಾಹೋರ್‌ನಲ್ಲಿ ಮೊದಲ ಎರಡು ಪಂದ್ಯಗಳೊಂದಿಗೆ ಸರಣಿಯು ತುಂಬಾ ಸ್ಪರ್ಧಾತ್ಮಕವಾಗಿತ್ತು. ಕೊನೆಯ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆದರೆ ಕೊನೆಯ ಪಂದ್ಯನ್ನು ಏಕಪಕ್ಷೀಯವಾಗಿ ಗೆಲ್ಲುವ ಮೂಲಕ ಆಂಗ್ಲ ತಂಡ ಸರಣಿ ಕೈವಶ ಮಾಡಿಕೊಂಡಿದೆ.

ಮಲನ್-ಬ್ರೂಕ್ ದಾಳಿಗೆ ತತ್ತರಿಸಿದ ಪಾಕಿಸ್ತಾನ

ಅಕ್ಟೋಬರ್ 2 ಭಾನುವಾರದಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಡೇವಿಡ್ ಮಲಾನ್ (ಔಟಾಗದೆ 78, 47 ಎಸೆತ) ಮತ್ತು ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ (ಔಟಾಗದೆ 46, 29 ಎಸೆತ) ಪಾಕಿಸ್ತಾನದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಕೇವಲ 61 ಎಸೆತಗಳಲ್ಲಿ 108 ರನ್‌ಗಳ ಅಜೇಯ ಜೊತೆಯಾಟ ಹಂಚಿಕೊಂಡರು. ಇದರೊಂದಿಗೆ ಇಂಗ್ಲೆಂಡ್ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 209 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಇಂಗ್ಲೆಂಡ್ ಬ್ಯಾಟಿಂಗ್ ಜೊತೆಗೆ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಕೂಡ ಪಾಕ್ ತಂಡದ ಸೋಲಿಗೆ ಕಾರಣವಾಯಿತು. ನಾಯಕ ಬಾಬರ್ ಅಜಮ್ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟರು. ಈ ಮೂಲಕ ಮತ್ತೊಮ್ಮೆ ಮಹತ್ವದ ಪಂದ್ಯದಲ್ಲಿ ಪಾಕ್ ಫೀಲ್ಡಿಂಗ್ ವೈಫಲ್ಯ ಕಂಡಿತು.

ಬೇಗನೆ ಪೆವಿಲಿಯನ್ ಸೇರಿದ ಬಾಬರ್-ರಿಜ್ವಾನ್

ಕಳೆದ ಕೆಲವು ಪಂದ್ಯಗಳಲ್ಲಿ ಅಗ್ರ ಕ್ರಮಾಂಕದಲ್ಲಿ ನಾಯಕ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಜೋಡಿ ತಂಡಕ್ಕೆ ಉತ್ತಮ ಆರಂಭ ನೀಡಿತ್ತು. ಈ ಜೋಡಿಯ ಇನ್ನಿಂಗ್ಸ್‌ನ ಆಧಾರದ ಮೇಲೆ ಪಾಕಿಸ್ತಾನ ತಂಡ ಸುಲಭವಾಗಿ ಗುರಿ ಸಾಧಿಸುತ್ತಿತ್ತು. ಈ ಮೂಲಕ ಮಧ್ಯಮ ಕ್ರಮಾಂಕದ ಆಟಗಾರರು ಹೇಳಿಕೊಳ್ಳದ ಪ್ರದರ್ಶನ ನೀಡದಿದ್ದರೂ ಪಾಕ್ ತಂಡ ಗೆಲುವು ಸಾಧಿಸುತ್ತಿತ್ತು. ಆದರೆ ಈ ಪಂದ್ಯದಲ್ಲಿ ಬಾಬರ್-ರಿಜ್ವಾನ್ ಜೋಡಿ ಬೇಗನೇ ಪೆವಿಲಿಯನ್ ಸೇರಿಕೊಂಡಿತು. ಈ ಇಬ್ಬರ ವಿಕೆಟ್ ಬಳಿಕ ಕಣಕ್ಕಿಳಿದ ಪಾಕ್ ತಂಡದ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಯಿತು.

ಮಧ್ಯಮ ಕ್ರಮಾಂಕದ ಫ್ಲಾಪ್ ಶೋ

ಇನಿಂಗ್ಸ್ ಆರಂಭಿಸಿದ ಬಾಬರ್ (4) ಮತ್ತು ರಿಜ್ವಾನ್ (1) ಕೇವಲ 5 ರನ್ ಅಂತರದಲ್ಲಿ ಪೆವಿಲಿಯನ್ ಸೇರಿದರು. ಅಂತಹ ಪರಿಸ್ಥಿತಿಗಳಲ್ಲಿ, ಮಧ್ಯಮ ಕ್ರಮಾಂಕವು ಉತ್ತಮ ಪ್ರದರ್ಶನ ನೀಡುವ ಅವಕಾಶವನ್ನು ಹೊಂದಿತ್ತು. ಆದರೆ ಶಾನ್ ಮಸೂದ್ (56 ರನ್, 43 ಎಸೆತಗಳಲ್ಲಿ) ಹೊರತುಪಡಿಸಿ ಯಾರೂ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಖುಶ್ದಿಲ್ ಶಾ ಮತ್ತು ಇಫ್ತಿಕರ್ ಅಹ್ಮದ್‌ಗೆ ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಹತ್ತರ ಗಡಿಯನ್ನೂ ತಲುಪಲು ಸಾಧ್ಯವಾಗಲಿಲ್ಲ.

ಅಲ್ಲದೆ ಇಂಗ್ಲೆಂಡ್ ತಂಡದ ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್ ಅಮೋಘ ಬೌಲಿಂಗ್‌ ಪಾಕ್ ತಂಡಕ್ಕೆ ಮುಳುವಾದರೆ, ಆಂಗ್ಲ ಪಡೆ ಮಾಡಿದ ಅದ್ಭುತ ಫೀಲ್ಡಿಂಗ್ ಕೂಡ 67 ರನ್‌ಗಳ ಜಯಕ್ಕೆ ಕಾರಣವಾಯಿತು. ಅಂತಿಮವಾಗಿ ಪಾಕಿಸ್ತಾನ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 142 ರನ್​ಗಳಿಸಿ ಭಾರಿ ಅಂತರದಿಂದ ಸೋಲೊಪ್ಪಿಕೊಂಡಿತು. ಇದರೊಂದಿಗೆ ಇಂಗ್ಲೆಂಡ್ ತಂಡ 4-3 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.

Published On - 2:36 pm, Mon, 3 October 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ