AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs ENG: ‘ಪಾಕ್ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುತ್ತೇವೆ’; ವಿಶ್ವದ ಹೃದಯ ಗೆದ್ದ ಇಂಗ್ಲೆಂಡ್ ನಾಯಕನ ಹೇಳಿಕೆ

PAK vs ENG: ಪಾಕಿಸ್ತಾನದ ಪ್ರವಾಹ ಸಂತ್ರಸ್ತರಿಗೆ ಸಹಾಯವನ್ನು ಘೋಷಿಸಿದ ಬಟ್ಲರ್, ಪಾಕಿಸ್ತಾನದ ಜನರು ಪ್ರವಾಹವನ್ನು ಎದುರಿಸುತ್ತಿರುವ ಕಷ್ಟದ ಸಮಯ ಇದು. ತಂಡವಾಗಿ, ನಾವು ಪ್ರವಾಹ ಸಂತ್ರಸ್ತರಿಗೆ  ಧನ ಸಹಾಯ ಮಾಡುತ್ತೇವೆ ಎಂದಿದ್ದಾರೆ.

PAK vs ENG: ‘ಪಾಕ್ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುತ್ತೇವೆ’; ವಿಶ್ವದ ಹೃದಯ ಗೆದ್ದ ಇಂಗ್ಲೆಂಡ್ ನಾಯಕನ ಹೇಳಿಕೆ
ಇಂಗ್ಲೆಂಡ್ ನಾಯಕ ಹಾಗೂ ನೆರೆ ಸಂತ್ರಸ್ತರು
TV9 Web
| Updated By: ಪೃಥ್ವಿಶಂಕರ|

Updated on: Sep 16, 2022 | 12:16 PM

Share

17 ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. 2005ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ (England cricket team) ಪಾಕಿಸ್ತಾನದ ನೆಲಕ್ಕೆ ಕಾಲಿಟ್ಟಿದೆ. T20 ವಿಶ್ವಕಪ್‌ (T20 World Cup) ಆರಂಭಕ್ಕೂ ಸ್ವಲ್ಪ ಮೊದಲು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಲು, ಇಂಗ್ಲೆಂಡ್ ಕ್ರಿಕೆಟ್ ತಂಡವು 7 T20 ಪಂದ್ಯಗಳ ಸರಣಿಗಾಗಿ ಸೆಪ್ಟೆಂಬರ್ 15 ರಂದು ಗುರುವಾರ ಕರಾಚಿಯನ್ನು ತಲುಪಿತು. ಈ ಇಂಗ್ಲೆಂಡ್ ಪ್ರವಾಸಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದು, ಇದೀಗ ಅದು ನನಸಾಗಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಆಂಗ್ಲರ ನಾಯಕ ಜೋಸ್ ಬಟ್ಲರ್ (Jos Buttler) ಮಾಡಿದ ಕೆಲಸಕ್ಕೆ ಪಾಕಿಸ್ತಾನದ ಅಭಿಮಾನಿಗಳು ಸೇರಿದಂತೆ ಇಡೀ ಪಾಕಿಸ್ತಾನ ತಲೆಬಾಗಿ ನಮಿಸಿದೆ.

ಪಾಕಿಗಳ ಹೃದಯ ಗೆದ್ದ ಬಟ್ಲರ್

ಕರಾಚಿ ತಲುಪಿದ ನಂತರ, ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋಸ್ ಬಟ್ಲರ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಈ ಸರಣಿಯ ಬಗ್ಗೆ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದರು. ಇದರೊಂದಿಗೆ, ಅವರು ಸರಣಿಗಾಗಿ ತಮ್ಮ ತಂಡ ನಡೆಸಿರುವ ತಯಾರಿ ಬಗ್ಗೆಯೂ ಮಾತನಾಡಿದ್ದರು. ಅಷ್ಟೇ ಅಲ್ಲ, ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ನೆರವು ನೀಡುವುದಾಗಿಯೂ ಬಟ್ಲರ್ ಹೇಳಿಕೊಂಡಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಬಟ್ಲರ್ ಹೇಳಿದ ಪ್ರಮುಖ ವಿಷಯಗಳು ಹೀಗಿವೆ.

  1. ಸುದೀರ್ಘ ಸಮಯದ ನಂತರ ಇಂಗ್ಲೆಂಡ್ ತಂಡದ ಪಾಕ್ ಪ್ರವಾಸದ ಬಗ್ಗೆ ಮಾತನಾಡಿದ ಬಟ್ಲರ್, “ನಾವೆಲ್ಲರೂ ಇಲ್ಲಿಗೆ ಬರಲು ತುಂಬಾ ಉತ್ಸುಕರಾಗಿದ್ದೇವೆ. ಸುದೀರ್ಘ ಸಮಯದ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡವಾಗಿ ಇಲ್ಲಿಗೆ ಬಂದಿರುವುದು ಅದ್ಭುತವಾಗಿದೆ.
  2. ಪಾಕಿಸ್ತಾನದ ಪ್ರವಾಹ ಸಂತ್ರಸ್ತರಿಗೆ ಸಹಾಯವನ್ನು ಘೋಷಿಸಿದ ಬಟ್ಲರ್, ಪಾಕಿಸ್ತಾನದ ಜನರು ಪ್ರವಾಹವನ್ನು ಎದುರಿಸುತ್ತಿರುವ ಕಷ್ಟದ ಸಮಯ ಇದು. ತಂಡವಾಗಿ, ನಾವು ಪ್ರವಾಹ ಸಂತ್ರಸ್ತರಿಗೆ  ಧನ ಸಹಾಯ ಮಾಡುತ್ತೇವೆ. ಮಂಡಳಿಯು (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಕೂಡ ಅದೇ ಮೊತ್ತವನ್ನು ನೀಡುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಣ್ಣ ಪ್ರಯತ್ನವಿದು.
  3. ಏಳು ಪಂದ್ಯಗಳ ಸರಣಿಯಲ್ಲಿ ಯಾವ ತಂಡ ಬಲಿಷ್ಠವಾಗಿದೆ? ಈ ಪ್ರಶ್ನೆಗೆ ಉತ್ತರಿಸಿದ ಬಟ್ಲರ್, ಈ ಸರಣಿಯಲ್ಲಿ ಪಾಕಿಸ್ತಾನದ ಮುಂದೆ ತಮ್ಮ ತಂಡ ಹೆಚ್ಚು ಬಲಿಷ್ಠವಾಗಿಲ್ಲ ಎಂದಿದ್ದಾರೆ. ಆದರೆ ಎರಡೂ ತಂಡಗಳು ಹಲವು ಮ್ಯಾಚ್ ವಿನ್ನರ್‌ಗಳನ್ನು ಹೊಂದಿವೆ ಎಂದು ಬಟ್ಲರ್ ಹೇಳಿದ್ದಾರೆ.
  4. ಪಾಕಿಸ್ತಾನದ ಘಾತುಕ ವೇಗದ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡಿದ ಬಟ್ಲರ್, ನಾನು ಪಾಕಿಸ್ತಾನದ ವೇಗದ ಬೌಲರ್‌ಗಳನ್ನು ತುಂಬಾ ಎತ್ತರಕ್ಕೆ ರೇಟ್ ಮಾಡುತ್ತೇನೆ. ಪಾಕಿಸ್ತಾನವು ತನ್ನ ಇತಿಹಾಸದುದ್ದಕ್ಕೂ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಸತತವಾಗಿ ನಿರ್ಮಿಸಿದ ದೇಶವಾಗಿದೆ.
  5. ಪಾಕಿಸ್ತಾನದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಅನೇಕ ಆಟಗಾರರು ಈ ಹಿಂದೆ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಡಿದ್ದಾರೆ. ಅಲ್ಲದೆ ನಾವು ಇಲ್ಲಿಗೆ ಹೊರಡುವ ಮುನ್ನ ಪಾಕ್ ದೇಶದ ಬಗ್ಗೆ ಕೆಲವು ಪಾಸಿಟಿವ ವಿಚಾರಗಳನ್ನು ಹೇಳಿದ್ದಾರೆ ಎಂದು ಬಟ್ಲರ್ ಹೇಳಿದರು.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ