PAK vs ENG: ಬೌಲಿಂಗ್ ಬಿಟ್ಟರೆ ಮಿಕ್ಕಿದೆಲ್ಲ ಜೊಳ್ಳು; ಪಾಕ್ ತಂಡದ ಸೋಲಿಗೆ 5 ಪ್ರಮುಖ ಕಾರಣಗಳಿವು..!

T20 World Cup 2022: ಈ ಮೊದಲು 2010 ರಲ್ಲಿ ಇಂಗ್ಲೆಂಡ್ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. ಹಾಗೆಯೇ ಪಾಕಿಸ್ತಾನಕ್ಕೂ ಎರಡನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಅವಕಾಶವಿತ್ತು. ಆದರೆ 2009 ರ ಸಾಧನೆಯನ್ನು ಪುನರಾವರ್ತಿಸಲು ಬಾಬರ್ ಪಡೆಗೆ ಸಾಧ್ಯವಾಗಲಿಲ್ಲ.

PAK vs ENG: ಬೌಲಿಂಗ್ ಬಿಟ್ಟರೆ ಮಿಕ್ಕಿದೆಲ್ಲ ಜೊಳ್ಳು; ಪಾಕ್ ತಂಡದ ಸೋಲಿಗೆ 5 ಪ್ರಮುಖ ಕಾರಣಗಳಿವು..!
ಪಾಕ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Nov 13, 2022 | 5:56 PM

2022 ರ ಟಿ20 ವಿಶ್ವಕಪ್ (T20 World Cup 2022) ಚಾಂಪಿಯನ್ ಆಗುವ ಅವಕಾಶವನ್ನು ಬಾಬರ್ ಪಡೆ ಕೈಚೆಲ್ಲಿದೆ. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 8 ವಿಕೆಟ್ ನಷ್ಟಕ್ಕೆ 138 ರನ್​ಗಳ ಸಾಧಾರಣ ಟಾರ್ಗೆಟ್ ನೀಡಿತು. ಇದಕ್ಕೆ ಉತ್ತರವಾಗಿ ಆಂಗ್ಲ ತಂಡ 5 ವಿಕೆಟ್ ಕಳೆದುಕೊಂಡು 19ನೇ ಓವರ್​ನಲ್ಲಿ ಗುರಿ ಮುಟ್ಟಿತು. ಈ ಪಂದ್ಯದಲ್ಲು ಪಾಕ್ ತಂಡ (Pakistan cricket team) ಉತ್ತಮ ಬೌಲಿಂಗ್ ಮಾಡಿತ್ತಾದರೂ ಕಡಿಮೆ ಸ್ಕೋರ್‌ನಿಂದಾಗಿ ಇಂಗ್ಲೆಂಡ್‌ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಇಂಗ್ಲೆಂಡ್ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಅಂತಿಮ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ (Ben Stokes) 49 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರೆ, ಬೌಲಿಂಗ್​ನಲ್ಲಿ ಸ್ಯಾಮ್ ಕರನ್ 4 ಓವರ್​ಗಳಲ್ಲಿ 12 ರನ್ ನೀಡಿ 3 ವಿಕೆಟ್ ಪಡೆದರು.

ಈ ಮೊದಲು 2010 ರಲ್ಲಿ ಇಂಗ್ಲೆಂಡ್ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತು. ಹಾಗೆಯೇ ಪಾಕಿಸ್ತಾನಕ್ಕೂ ಎರಡನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಅವಕಾಶವಿತ್ತು. ಆದರೆ 2009 ರ ಸಾಧನೆಯನ್ನು ಪುನರಾವರ್ತಿಸಲು ಬಾಬರ್ ಪಡೆಗೆ ಸಾಧ್ಯವಾಗಲಿಲ್ಲ. ಈ ಮೂಲಕ 2022 ರ ಟಿ20 ವಿಶ್ವಕಪ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪಾಕ್ ತಂಡದ ಸೋಲಿಗೆ ಪ್ರಮುಖ ಕಾರಣಗಳು ಏನು ಎಂಬುದರ ಬಗ್ಗೆ ಇಲ್ಲಿದೆ ವಿವರ

ಕಳಪೆ ಓಪನಿಂಗ್

ಪಾಕಿಸ್ತಾನದ ಸೋಲಿಗೆ ಮೊದಲ ಮತ್ತು ದೊಡ್ಡ ಕಾರಣವೆಂದರೆ ಅದರ ಕಳಪೆ ಓಪನಿಂಗ್. ಸೆಮಿಫೈನಲ್ ಪಂದ್ಯವನ್ನು ಬಿಟ್ಟರೆ, ಪಾಕಿಸ್ತಾನದ ಆರಂಭಿಕ ಜೋಡಿ ಉಳಿದ 6 ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾಗಿದೆ. ಫೈನಲ್‌ನಲ್ಲೂ ಇದೇ ವೈಫಲ್ಯದ ಸರಣಿ ಮುಂದುವರೆಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ 26 ಎಸೆತಗಳಲ್ಲಿ 29 ರನ್ ಸೇರಿಸಲಷ್ಟೇ ಶಕ್ತರಾದರು. ಆ ಬಳಿಕ ಕೇವಲ 15 ರನ್ ಗಳಿಸಿ ರಿಜ್ವಾನ್ ಔಟಾಗುವ ಮೂಲಕ ಆರಂಭಿಕ ಜೊತೆಯಾಟಕ್ಕೆ ಕೊನೆ ಹಾಡಿದರು.

48 ಡಾಟ್ ಬಾಲ್

ಈ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಮೆಗತಿಯ ಬ್ಯಾಟಿಂಗ್ ಮಾಡಿದ್ದು ಒಂದೆಡೆಯಾದರೆ, ಮತ್ತೊಂದು ಕಡೆ ಇಡೀ ತಂಡ ಬರೋಬ್ಬರಿ 48 ಡಾಟ್ ಬಾಲ್​ಗಳನ್ನು ಆಡಿತ್ತು. ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ಹ್ಯಾರಿಸ್ ಸಾಕಷ್ಟು ಡಾಟ್ ಬಾಲ್ ಆಡಿದರು. ಪಾಕಿಸ್ತಾನವು ಒಟ್ಟು 8 ಓವರ್‌ಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಇದರಿಂದಾಗಿ ತಂಡದ ಸ್ಕೋರ್ ಕೂಡ ಕೇವಲ 138 ರನ್‌ಗಳಿಗೆ ಸೀಮಿತವಾಯಿತು.

ಶಾಹೀನ್ ಅಫ್ರಿದಿ ಇಂಜುರಿ

ಪಾಕಿಸ್ತಾನದ ಸೋಲಿಗೆ ಶಾಹೀನ್ ಅಫ್ರಿದಿ ಅವರ ಇಂಜುರಿಯೂ ಮೂರನೇ ಪ್ರಮುಖ ಕಾರಣವಾಗಿದೆ. ಫೈನಲ್ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಕ್ಯಾಚ್ ಹಿಡಿಯುವ ವೇಳೆ ಶಾಹೀನ್ ಶಾ ಆಫ್ರಿದಿ ಗಾಯಗೊಂಡರು. ಇದರಿಂದಾಗಿ ಅವರು ಪಂದ್ಯದಲ್ಲಿ 2.1 ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಯಿತು. ಇದರ ಲಾಭ ಪಡೆದ ಇಂಗ್ಲೆಂಡ್ ಇಫ್ತಿಕಾರ್ ಅವರ ಐದು ಎಸೆತಗಳಲ್ಲಿ 13 ರನ್ ಕಲೆಹಾಕಿದರು.

ವಾಸಿಮ್ ಪರಿಣಾಮಕಾರಿಯಾಗಲಿಲ್ಲ

ಶಾಹೀನ್ ಗಾಯದಿಂದ ಪಾಕಿಸ್ಥಾನ ನಲುಗಿದ್ದು ಮಾತ್ರವಲ್ಲ, ಅದರೊಂದಿಗೆ ಮೊಹಮ್ಮದ್ ವಾಸಿಮ್ ಬೌಲಿಂಗ್ ಕೂಡ ಇಲ್ಲಿ ಪರಿಣಾಮಕಾರಿಯಾಗಲಿಲ್ಲ. ಇದರ ಲಾಭ ಪಡೆದ ಇಂಗ್ಲೆಂಡ್, ವಾಸಿಮ್ ಅವರ 4 ಓವರ್ ಕೋಟಾದಲ್ಲಿ 9.5ರ ಸರಾಸರಿಯಲ್ಲಿ 38 ರನ್ ಕಲೆಹಾಕಿತು.

ಇಂಗ್ಲೆಂಡ್ ಮಾರಕ ಬೌಲಿಂಗ್

ಇವೆಲ್ಲವುಗಳ ಜೊತೆಗೆ ಇಂಗ್ಲೆಂಡಿನ ಇಬ್ಬರು ಬೌಲರ್‌ಗಳು ಪಾಕಿಸ್ತಾನ ತಂಡಕ್ಕೆ ಭಾರೀ ಹಾನಿಯನ್ನುಂಟು ಮಾಡಿದರು. ಇದರಲ್ಲಿ ತಂಡದ ಆಲ್​ರೌಂಡರ್ ಸ್ಯಾಮ್ ಕರನ್ 4 ಓವರ್​ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಪಡೆದರೆ, 15 ಬಾಲ್​ಗಳನ್ನು ಡಾಟ್ ಮಾಡಿದರು. ಹಾಗೆಯೇ ಆದಿಲ್ ರಶೀದ್ 4 ಓವರ್​ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರು.

Published On - 5:52 pm, Sun, 13 November 22

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?