IND vs PAK: ಪಾಕ್ ತ್ರಿಮೂರ್ತಿಗಳೇ ಟೀಮ್ ಇಂಡಿಯಾ ಪಾಲಿಗೆ ದುಃಸ್ವಪ್ನ

India vs Pakistan: ಈ ಹಿಂದಿನಂತೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವನ್ನು ಬ್ಯಾಟರ್ಸ್​ ಮತ್ತು ಬೌಲರ್ಸ್​ ನಡುವಣ ಹಣಾಹಣಿಯನ್ನಾಗಿಸುವಲ್ಲಿ ಪಾಕ್ ತಂಡದ ವೇಗಿಗಳು ಯಶಸ್ವಿಯಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರರು ವೇಗಿಗಳಿಗೆ ವಿಕೆಟ್ ಒಪ್ಪಿಸಿರುವುದು.

IND vs PAK: ಪಾಕ್ ತ್ರಿಮೂರ್ತಿಗಳೇ ಟೀಮ್ ಇಂಡಿಯಾ ಪಾಲಿಗೆ ದುಃಸ್ವಪ್ನ
Pakistan Pace Trio
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 07, 2023 | 5:03 PM

3 ಪಂದ್ಯಗಳು…ಮೂರು ತಂಡಗಳು ಆಲೌಟ್. ಇದು ಏಷ್ಯಾಕಪ್​ನಲ್ಲಿನ ಪಾಕಿಸ್ತಾನ್ ಬೌಲರ್​ಗಳ ಪರಾಕ್ರಮ. ಅಂದರೆ ಈ ಬಾರಿಯ ಏಷ್ಯಾಕಪ್​ನಲ್ಲಿ ಪಾಕ್ ವಿರುದ್ಧ ಕಣಕ್ಕಿಳಿದ ಯಾವುದೇ ತಂಡ 50 ಓವರ್​ಗಳನ್ನು ಪೂರ್ಣಗೊಳಿಸಿಲ್ಲ. ಮೊದಲ ಪಂದ್ಯದಲ್ಲಿ ನೇಪಾಳ ತಂಡವು 23.4 ಓವರ್​ಗಳಲ್ಲಿ ಕೇವಲ 103 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 48.5 ಓವರ್​ಗಳಲ್ಲಿ 266 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಪಾಕ್ ವೇಗಿಗಳು ಯಶಸ್ವಿಯಾಗಿದ್ದರು. ಹಾಗೆಯೇ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು 38.4 ಓವರ್​ಗಳಲ್ಲಿ 193 ರನ್​ಗಳಿಗೆ ಆಲೌಟ್ ಮಾಡಿದೆ.

ಈ ಮೂರು ಪಂದ್ಯಗಳಲ್ಲೂ ಪಾಕ್ ಪರ ಕರಾರುವಾಕ್ ದಾಳಿ ನಡೆಸಿದ್ದು ವೇಗಿಗಳು ಎಂಬುದು ಉಲ್ಲೇಖಾರ್ಹ. ಹೀಗಾಗಿಯೇ ಮುಂಬರುವ ಪಂದ್ಯಗಳಲ್ಲೂ ಪಾಕ್ ತಂಡದ ಪ್ರಮುಖ ಅಸ್ತ್ರ ವೇಗಿಗಳು. ಇಲ್ಲಿ ಪಾಕಿಸ್ತಾನ್ ತಂಡದ ಮುಂದಿನ ಪಂದ್ಯ ಟೀಮ್ ಇಂಡಿಯಾ ವಿರುದ್ಧ ಎಂಬುದು ವಿಶೇಷ.

ತ್ರಿಮೂರ್ತಿಗಳ ಪರಾಕ್ರಮ:

ನೇಪಾಳ ವಿರುದ್ಧದ ಪಂದ್ಯದಲ್ಲಿ ಶಾಹೀನ್ ಅಫ್ರಿದಿ, ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ಜೊತೆಗೂಡಿ 5 ವಿಕೆಟ್ ಉರುಳಿಸಿದ್ದರು. ಇನ್ನು ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಈ ಮೂವರು ಸೇರಿ ಒಟ್ಟು 10 ವಿಕೆಟ್ ಕಬಳಿಸಿ ಏಷ್ಯಾಕಪ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು. ಹಾಗೆಯೇ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಒಟ್ಟು 9 ವಿಕೆಟ್​ಗಳನ್ನು ವೇಗಿಗಳೇ ಕಬಳಿಸಿದ್ದಾರೆ.

ಅಂದರೆ ಮೂರು ಪಂದ್ಯಗಳಲ್ಲೂ ಎದುರಾಳಿಗಳನ್ನು ಆಲೌಟ್ ಮಾಡುವಲ್ಲಿ ವೇಗಿಗಳೇ ಪ್ರಮುಖ ಪಾತ್ರವಹಿಸಿರುವುದು ಸ್ಪಷ್ಟ. ಇದಕ್ಕೆ ಸಾಕ್ಷಿಯಾಗಿ ಈ ಬಾರಿಯ ಏಷ್ಯಾಕಪ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್​ಗಳ ಪಟ್ಟಿಯಲ್ಲೂ ಶಾಹೀನ್, ನಸೀಮ್ ಹಾಗೂ ಹ್ಯಾರಿಸ್ ರೌಫ್ ಟಾಪ್​ನಲ್ಲಿದ್ದಾರೆ.

3 ಪಂದ್ಯಗಳಿಂದ ಒಟ್ಟು 9 ವಿಕೆಟ್ ಕಬಳಿಸಿರುವ ಹ್ಯಾರಿಸ್ ರೌಫ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ನಸೀಮ್ ಶಾ ಹಾಗೂ ಶಾಹೀನ್ ಶಾ ಅಫ್ರಿದಿ ತಲಾ 7 ವಿಕೆಟ್​ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇದೀಗ ಈ ಮೂವರು ವೇಗಿಗಳ ಮುಂದಿನ ಟಾರ್ಗೆಟ್ ಟೀಮ್ ಇಂಡಿಯಾ.

ಬ್ಯಾಟರ್ಸ್​ vs ಬೌಲರ್ಸ್​:

ಈ ಹಿಂದಿನಂತೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವನ್ನು ಬ್ಯಾಟರ್ಸ್​ ಮತ್ತು ಬೌಲರ್ಸ್​ ನಡುವಣ ಹಣಾಹಣಿಯನ್ನಾಗಿಸುವಲ್ಲಿ ಪಾಕ್ ತಂಡದ ವೇಗಿಗಳು ಯಶಸ್ವಿಯಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರರು ವೇಗಿಗಳಿಗೆ ವಿಕೆಟ್ ಒಪ್ಪಿಸಿರುವುದು.

ಅಂದರೆ ಏಷ್ಯಾಕಪ್ ಇತಿಹಾಸದಲ್ಲೇ ಯಾವುದೇ ತಂಡ ವೇಗಿಗಳಿಗೆ ಮಾತ್ರ ವಿಕೆಟ್ ಒಪ್ಪಿಸಿ ಆಲೌಟ್ ಆಗಿರಲಿಲ್ಲ. ಆದರೆ ಟೀಮ್ ಇಂಡಿಯಾವನ್ನು ಆಲೌಟ್ ಮಾಡುವ ಮೂಲಕ ಶಾಹೀನ್ ಅಫ್ರಿದಿ, ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದೇ ಕಾರಣದಿಂದಾಗಿ ಇದೀಗ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಬೌಲರ್ಸ್​ ಮತ್ತು ಬ್ಯಾಟರ್ಸ್​ ನಡುವಣ ಫೈಟ್ ಆಗಿ ಮಾರ್ಪಟ್ಟಿದೆ. ಇಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟರ್​ಗಳನ್ನು ಒಳಗೊಂಡ ಟೀಮ್ ಇಂಡಿಯಾ ಒಂದೆಡೆಯಾದರೆ, ವೇಗದ ಅಸ್ತ್ರಗಳೊಂದಿಗೆ ಪರಾಕ್ರಮ ಮರೆಯುವ ಪಾಕಿಸ್ತಾನ್ ಮತ್ತೊಂದೆಡೆ.

ಅತ್ತ ಎಡಗೈ ವೇಗಿ ಶಾಹೀನ್ ಅಫ್ರಿದಿ ಇದ್ದರೆ ಇತ್ತ ರನ್ ಮೆಷಿನ್ ವಿರಾಟ್ ಕೊಹ್ಲಿ ಇದ್ದಾರೆ. ಇನ್ನು ಹ್ಯಾರಿಸ್ ರೌಫ್ ವೇಗಕ್ಕೆ ಪ್ರತಿ ವೇಗದಲ್ಲಿ ಶಾಟ್ ಬಾರಿಸಬಲ್ಲ ರೋಹಿತ್ ಶರ್ಮಾ ಇದ್ದರೆ, ನಸೀಮ್ ಶಾ ಎಸೆತಗಳಿಗೆ ಮರುತ್ತರ ನೀಡಬಲ್ಲ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಟೀಮ್ ಇಂಡಿಯಾದಲ್ಲಿದ್ದಾರೆ.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಇದಾಗ್ಯೂ ಮೊದಲ ಮುಖಾಮುಖಿಯಲ್ಲಿ ಟೀಮ್ ಇಂಡಿಯಾವನ್ನು ಆಲೌಟ್ ಮಾಡುವ ಮೂಲಕ ಪರಾಕ್ರಮ ಮೆರೆದಿರುವ ಪಾಕ್ ತ್ರಿಮೂರ್ತಿಗಳು ಇದೀಗ ಮತ್ತದೇ ಉತ್ಸಾಹದಲ್ಲಿದ್ದಾರೆ. ಹೀಗಾಗಿಯೇ ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಇಂಡೊ-ಪಾಕ್ ಮುಖಾಮುಖಿಯಲ್ಲಿ ರಣರೋಚಕ ಪೈಪೋಟಿಯನ್ನಂತು ನಿರೀಕ್ಷಿಸಬಹುದು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ