ಇದು ದೇಶದ ಗೌರವದ ಪ್ರಶ್ನೆ; ನ್ಯೂಜಿಲೆಂಡ್ ಪ್ರಧಾನಿಗೆ ಕರೆ ಮಾಡಿ ಅಂಗಲಾಚಿದ ಇಮ್ರಾನ್ ಖಾನ್! ಆದರೂ ಒಪ್ಪದ ಕಿವಿ ತಂಡ

TV9 Digital Desk

| Edited By: ಪೃಥ್ವಿಶಂಕರ

Updated on: Sep 17, 2021 | 6:05 PM

ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿಗೆ ಕರೆ ಮಾಡಿದ್ದ ಇಮ್ರಾನ್ ಖಾನ್, ನಿಮ್ಮ ನಿರ್ಧಾರ ದೇಶದ ಗೌರವವನ್ನು ಕುಂಠಿತಗೊಳಿಸಿದೆ. ವಾಪಸ್ ಹೋಗುಬೇಡಿ ಎಂದು ಕೇಳಿಕೊಂಡಿದ್ದಾರೆ.

ಇದು ದೇಶದ ಗೌರವದ ಪ್ರಶ್ನೆ; ನ್ಯೂಜಿಲೆಂಡ್ ಪ್ರಧಾನಿಗೆ ಕರೆ ಮಾಡಿ ಅಂಗಲಾಚಿದ ಇಮ್ರಾನ್ ಖಾನ್! ಆದರೂ ಒಪ್ಪದ ಕಿವಿ ತಂಡ
ಇಮ್ರಾನ್ ಖಾನ್, ನ್ಯೂಜಿಲೆಂಡ್ ತಂಡ

Follow us on

ನ್ಯೂಜಿಲೆಂಡ್ ಕ್ರಿಕೆಟ್ ತಂಡ ತನ್ನ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದೆ. ನ್ಯೂಜಿಲ್ಯಾಂಡ್ ಕ್ರಿಕೆಟ್ (NZC) ಹೇಳಿಕೆಯನ್ನು ನೀಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ರಾವಲ್ಪಿಂಡಿಯಲ್ಲಿ ನಡೆದ ಗಲಾಟೆಯಿಂದಾಗಿ ಪಂದ್ಯದ ಆರಂಭವು ವಿಳಂಬವಾಯಿತು. ಜೊತೆಗೆ ಇದರಿಂದ ಆಟಗಾರರನ್ನು ತಮ್ಮ ಕೋಣೆಗಳಲ್ಲಿ ಉಳಿಯುವಂತೆ ಹೇಳಲಾಯಿತು. ಈ ಅಪಾಯಕಾರಿ ಸನ್ನಿವೇಶ ಮನಗಂಡ ನ್ಯೂಜಿಲೆಂಡ್ ಈ ಪ್ರವಾಸವನ್ನು ರದ್ದು ಮಾಡಿದೆ. ಭದ್ರತಾ ಕಾರಣಗಳಿಂದಾಗಿ ಈ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ನ್ಯೂಜಿಲೆಂಡ್ ಹೇಳಿದೆ. ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ದೇಶದ ಪ್ರಧಾನಿ, ಇಮ್ರಾನ್ ಖಾನ್ ಕೂಡ ಅವರನ್ನು ತಡೆಯಲು ಪ್ರಯತ್ನಿಸಿದರು. ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿಗೆ ಕರೆ ಮಾಡಿದ್ದ ಇಮ್ರಾನ್ ಖಾನ್, ನಿಮ್ಮ ನಿರ್ಧಾರ ದೇಶದ ಗೌರವವನ್ನು ಕುಂಠಿತಗೊಳಿಸಿದೆ. ವಾಪಸ್ ಹೋಗುಬೇಡಿ ಎಂದು ಕೇಳಿಕೊಂಡಿದ್ದಾರೆ.

ಪಾಕಿಸ್ತಾನಕ್ಕೆ ಬಂದ ನ್ಯೂಜಿಲ್ಯಾಂಡ್ ತಂಡವನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಕಿವಿ ತಂಡದ ಆಟಗಾರರು ಕೂಡ ಪಾಕ್ ತಂಡವನ್ನು ಸಾಕಷ್ಟು ಹೊಗಳಿದರು. ಆದರೆ, ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನದೊಳಗಿನ ನೈಜ ಮುಖ ಮುನ್ನೆಲೆಗೆ ಬಂದಿತು. ಇದನ್ನು ನೋಡಿದ ನ್ಯೂಜಿಲ್ಯಾಂಡ್ ತಂಡವು ಗಾಬರಿಗೊಂಡು ಕೂಡಲೇ ಪಾಕ್​ ನೆಲದಿಂದ ಕಾಲ್ಕಿಳಲು ಆರಂಭಿಸಿದೆ.

ನ್ಯೂಜಿಲ್ಯಾಂಡ್ ಪ್ರಧಾನಿಗೆ ಕರೆ ಮಾಡಿದ ಪಾಕ್ ಪ್ರಧಾನಿ ಅಂದಹಾಗೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನ್ಯೂಜಿಲ್ಯಾಂಡ್ ಪ್ರಧಾನಿಯೊಂದಿಗೆ ಫೋನಿನಲ್ಲಿ ಮಾತನಾಡಿ ತನ್ನ ಭದ್ರತಾ ವ್ಯವಸ್ಥೆಯನ್ನು ವಿಶ್ವದ ಅತ್ಯುತ್ತಮ ಎಂದು ಹೇಳಿದರು. ಜೊತೆಗೆ ಕಿವಿ ತಂಡಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಆದರೆ, ಪಾಕ್​ ಪ್ರಧಾನಿಯ ಮಾತಿಗೆ ಸೊಪ್ಪು ಹಾಕದ ನ್ಯೂಜಿಲೆಂಡ್ ಕೂಡಲೇ ಆಟಗಾರರನ್ನು ಪಾಕಿಸ್ತಾನದಿಂದ ಹೊರಟು ಬರುವಂತೆ ಆದೇಶ ಹೊರಡಿಸಿದೆ.

ಪಾಕ್ ಕ್ರಿಕೆಟ್ ಕೊಂದ ನ್ಯೂಜಿಲ್ಯಾಂಡ್- ಶೋಯಿಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್‌ಗೆ ನ್ಯೂಜಿಲೆಂಡ್ ನೀಡಿದ ಆಘಾತದಿಂದ ಅನುಭವಿ ಕ್ರಿಕೆಟಿಗರಿಗೂ ನೋವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಶೋಯೆಬ್ ಅಖ್ತರ್, ನ್ಯೂಜಿಲೆಂಡ್​ನ ಈ ನಿರ್ಧಾರ ಪಾಕಿಸ್ತಾನದಲ್ಲಿ ಕ್ರಿಕೆಟ್ ಭವಿಷ್ಯದ ಬಗ್ಗೆ ದುಃಖದ ಸುದ್ದಿ ಎಂದರು. ನಂತರ ಅವರ ಎರಡನೇ ಟ್ವೀಟ್ ಮೂಲಕ ನ್ಯೂಜಿಲ್ಯಾಂಡ್ ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಅನ್ನು ಕೊಂದಿದೆ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada