ಆಸ್ಟ್ರೇಲಿಯಾ ತಲುಪಿದ ಪಾಕ್ ಆಟಗಾರರಿಗೆ ಭಾರೀ ಮುಖಭಂಗ: ಟ್ರಕ್ಗೆ ಲಗೇಜ್ ತುಂಬಿಸುವ ಸ್ಥಿತಿ
Pakistani cricketers load luggage onto truck at Australia airport: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಲಾಹೋರ್ ವಿಮಾನ ನಿಲ್ದಾಣದಿಂದ ಹೊರಟು ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾಕಿಸ್ತಾನ ಆಟಗಾರರನ್ನು ಸ್ವಾಗತಿಸಲು ಅಥವಾ ಇವರನ್ನು ಕರೆದೊಯ್ಯಲು ಪಾಕಿಸ್ತಾನ ರಾಯಭಾರ ಕಚೇರಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳ ಪೈಕಿ ಯಾರೂ ಬಂದಿರಲಿಲ್ಲ.
ಪಾಕಿಸ್ತಾನ ಕ್ರಿಕೆಟ್ನಲ್ಲಿ (Pakistan Cricket) ಎಲ್ಲವೂ ಸರಿ ಇಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಭೀತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಕಾಂಗರೂಗಳ ನಾಡಿಗೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರೀ ಮುಖಭಂಗವಾಗಿದೆ. ಇಲ್ಲಿ ಪಾಕ್ ಆಟಗಾರರನ್ನು ವೆಲ್ಕಂ ಮಾಡಲು ಯಾರೂ ಬಂದಿರಲಿಲ್ಲ. ಸ್ವತಃ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡ ಹಾಜರಿರಲಿಲ್ಲ. ಪಾಕಿಸ್ತಾನ ಪ್ಲೇಯರ್ಸ್ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ನಲ್ಲಿ ತುಂಬಿಸಿ ಹೋಟೆಲ್ಗೆ ತೆರಳಬೇಕಾದ ಪರಿಸ್ಥಿತಿ ಒದಗಿಬಂತು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನ ಪ್ಲೇಯರ್ಸ್ ಲಾಹೋರ್ ವಿಮಾನ ನಿಲ್ದಾಣದಿಂದ ಹೊರಟು ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇಲ್ಲಿ ಪಾಕ್ ಆಟಗಾರರನ್ನು ಸ್ವಾಗತಿಸಲು ಅಥವಾ ಇವರನ್ನು ಕರೆದೊಯ್ಯಲು ಪಾಕಿಸ್ತಾನ ರಾಯಭಾರ ಕಚೇರಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳ ಪೈಕಿ ಯಾರೂ ಬಂದಿರಲಿಲ್ಲ. ಇದರಿಂದಾಗಿ ತಂಡದ ಸದಸ್ಯರು ತಮ್ಮ ಲಗೇಜ್ ಅನ್ನು ತಾವೇ ತೆಗೆದುಕೊಂಡು ಹೋಗಬೇಕಾಯಿತು.
ಟ್ರಿಕ್ನಲ್ಲಿ ಲಗೇಜ್ ತುಂಬಿಸುತ್ತಿರುವ ಪಾಕಿಸ್ತಾನ ಆಟಗಾರರ ವಿಡಿಯೋ:
Pakistan team has reached Australia to play 3 match Test series starting December 14.
Pakistani players loaded their luggage on the truck as no official was present. pic.twitter.com/H65ofZnhlF
— Cricketopia (@CricketopiaCom) December 1, 2023
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರ ಮೊಹಮ್ಮದ್ ರಿಜ್ವಾನ್ ತನ್ನ ಸಹ ಆಟಗಾರರ ಕಿಟ್ ಬ್ಯಾಗ್‌ಗಳನ್ನು ಲೋಡ್ ಮಾಡಲು ಟ್ರಕ್ ಒಳಗಡೆ ನಿಂತಿರುವುದು ಕಾಣಬಹುದು. ಬಾಬರ್ ಅಜಂ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಆಟಗಾರರು ಲಗೇಜ್‌ಗಳನ್ನು ಟ್ರಿಕ್ನಲ್ಲಿ ತುಂಬಿಸುತ್ತಿದ್ದಾರೆ. ಇದೀಗ ಪಾಕ್ ಆಟಗಾರರ ವಾಸ್ತವ್ಯ ಮತ್ತು ಮುಂಬರುವ ಸರಣಿಯ ಒಟ್ಟಾರೆ ವ್ಯವಸ್ಥೆಗಳ ಬಗ್ಗೆ ಊಹಾಪೋಹಗಳೆದ್ದಿವೆ.
IND vs AUS: ಟಿ20 ಸರಣಿ ಗೆದ್ದು ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ
ಪಾಕಿಸ್ತಾನ -ಆಸ್ಟ್ರೇಲಿಯಾ ಟೆಸ್ಟ್ ಸರಣಿಯು ಡಿಸೆಂಬರ್ 14 ರಿಂದ ಪರ್ತ್‌ನಲ್ಲಿ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ನಂತರ ಡಿಸೆಂಬರ್ 26 ರಿಂದ 30 ವರೆಗೆ ಮೆಲ್ಬೋರ್ನ್, ಜನವರಿ 3 ರಿಂದ 7 ವರೆಗೆ ಸಿಡ್ನಿಯಲ್ಲಿ ತೃತೀಯ ಟೆಸ್ಟ್ ಆಯೋಜಿಸಲಾಗಿದೆ. ಪಾಕಿಸ್ತಾನವು ಆಸ್ಟ್ರೇಲಿಯಾದಲ್ಲಿ ಈವರೆಗೆ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆದರೆ ಇದೀಗ ಹೊಸ ನಾಯಕ ಶಾನ್ ಮಸೂದ್ ನೇತೃತ್ವದಲ್ಲಿ ಇತಿಹಾಸ ನಿರ್ಮಿಸುತ್ತಾ ನೋಡಬೇಕಿದೆ.
ಪಾಕಿಸ್ತಾನ ಕ್ರಿಕೆಟ್ ಬೋಡರ್ಡ್ 34 ವರ್ಷದ ಮಸೂದ್ ಅವರನ್ನು ಇತ್ತೀಚೆಗಷ್ಟೆ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಿತು. ಬಾಬರ್ ಅಜಂ ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಪಾಯಿಂಟ್ ಟೇಬಲ್ನಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಎರಡೂ ಟೆಸ್ಟ್‌ಗಳಲ್ಲಿ ಜಯಗಳಿಸಿ ಅಗ್ರಸ್ಥಾನದಲ್ಲಿದೆ. ಒಂಬತ್ತು ತಂಡಗಳ ಪಟ್ಟಿಯಲ್ಲಿ ಭಾರತ ಎರಡನೇ ಮತ್ತು ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:32 am, Sat, 2 December 23