
T20 World Cup 2026: ಟಿ20 ವಿಶ್ವಕಪ್ನ 50ನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ. ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಪಾಕ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನ್ ತಂಡ ಸೆಮಿಫೈನಲ್ಗೇರಬಹುದು. ಆದರೆ ಈ ಗೆಲುವಿನೊಂದಿಗೆ ಪಾಕ್ ಪಡೆ ನೆಟ್ ರನ್ ರೇಟ್ ಲೆಕ್ಕಾಚಾರವನ್ನು ಸಹ ಮಾಡಬೇಕಿದೆ.
ಅಂದರೆ ಗ್ರೂಪ್-2 ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಇಂಗ್ಲೆಂಡ್ ತಂಡವು ಸೆಮಿಫೈನಲ್ಗೇರಿದೆ. ಇತ್ತ ದ್ವಿತೀಯ ಸ್ಥಾನದಲ್ಲಿರುವ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್ಗೇರಬೇಕಿದ್ದರೆ ಪಾಕಿಸ್ತಾನ್ ತಂಡವು ಶ್ರೀಲಂಕಾ ವಿರುದ್ಧ ಭಾರೀ ಅಂತರದಿಂದ ಗೆಲ್ಲಬೇಕು.
ಪಾಕಿಸ್ತಾನ್ ತಂಡವು ಭರ್ಜರಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಿದರೆ ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ಇದಕ್ಕಾಗಿ ಪಾಕಿಸ್ತಾನ್ ತಂಡ ಇಂದಿನ ಮ್ಯಾಚ್ನಲ್ಲಿ ಕೆಳಗೆ ನೀಡಲಾದ ಅಂತರದಲ್ಲಿ ಗೆಲ್ಲಲೇಬೇಕು.
ಪಾಕಿಸ್ತಾನ್ ತಂಡವು ಟಾಸ್ ಗೆದ್ದು ಅಥವಾ ಸೋತು ಮೊದಲು ಬ್ಯಾಟ್ ಮಾಡಿದರೆ ಈ ಲೆಕ್ಕಾಚಾರದಲ್ಲಿ ರನ್ಗಳಿಸಬೇಕು. ಹಾಗೆಯೇ ಶ್ರೀಲಂಕಾ ತಂಡವನ್ನು ಈ ಅಂತರದಿಂದ ಸೋಲಿಸಬೇಕು.
ಅಂದರೆ ಇಲ್ಲಿ ಪಾಕಿಸ್ತಾನ್ ತಂಡದ ಗೆಲುವಿನ ಅಂತರ ಕನಿಷ್ಠ 64 ರನ್ಗಿಂತ ಹೆಚ್ಚಿರಬೇಕು. 65 ರನ್ಗಿಂತ ಕಡಿಮೆ ರನ್ಗಳ ಅಂತರದಿಂದ ಪಾಕ್ ತಂಡ ಗೆದ್ದರೆ ಸೆಮಿಫೈನಲ್ಗೇರಲು ಸಾಧ್ಯವಾಗುವುದಿಲ್ಲ.
ಪಾಕಿಸ್ತಾನ್ ತಂಡವು ಮೊದಲು ಬೌಲಿಂಗ್ ಮಾಡಿ ಆ ಬಳಿಕ ಶ್ರೀಲಂಕಾ ತಂಡ ನೀಡುವ ಗುರಿಯನ್ನು ಚೇಸಿಂಗ್ ಮಾಡಿದರೆ ನಿರ್ದಿಷ್ಟ ಓವರ್ಗಳಲ್ಲಿ ಪಂದ್ಯ ಮುಗಿಸಬೇಕು. ಅದರಂತೆ ಪಾಕ್ ತಂಡ ಚೇಸಿಂಗ್ ಲೆಕ್ಕಾಚಾರ ಈ ಕೆಳಗಿನಂತಿದೆ…
ಅಂದರೆ ಶ್ರೀಲಂಕಾ ತಂಡವ ಮೊದಲು ಬ್ಯಾಟಿಂಗ್ ಮಾಡಿ 160 ಕ್ಕಿಂತ ಅಧಿಕ ರನ್ಗಳ ಗುರಿ ನೀಡಿದರೆ ಪಾಕಿಸ್ತಾನ್ ತಂಡವು 38+ ಎಸೆತಗಳನ್ನು ಬಾಕಿಯಿರಿಸಿಯೇ ಚೇಸಿಂಗ್ ಮಾಡಬೇಕಾಗುತ್ತದೆ.
ಇನ್ನು ಪಾಕಿಸ್ತಾನ್ ತಂಡವು ಮೊದಲು ಬ್ಯಾಟ್ ಮಾಡಿ 160 ಕ್ಕಿಂತ ಅಧಿಕ ರನ್ ಕಲೆಹಾಕಿದರೆ, ಶ್ರೀಲಂಕಾ ತಂಡವನ್ನು 64+ ರನ್ಗಳ ಅಂತರದಿಂದ ಸೋಲಿಸುವುದು ಅನಿವಾರ್ಯ.
ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಟಾಸ್ ಗೆದ್ದರೆ ಚೇಸಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಶ್ರೀಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿ ನಿರ್ದಿಷ್ಟ ಓವರ್ಗಳಲ್ಲಿ ಲಂಕಾ ತಂಡ ನೀಡುವ ಗುರಿಯನ್ನು ಬೆನ್ನತ್ತಲು ಪ್ಲ್ಯಾನ್ ರೂಪಿಸಲಿದೆ.
ಒಂದು ವೇಳೆ ಪಾಕಿಸ್ತಾನ್ ತಂಡವು ಶ್ರೀಲಂಕಾ ನೀಡುವ ಗುರಿಯನ್ನು (ಸುಮಾರು 200 ರನ್ಸ್) ಬೆನ್ನತ್ತಲು 14 ಓವರ್ಗಳನ್ನು ತೆಗೆದುಕೊಂಡರೆ ನ್ಯೂಝಿಲೆಂಡ್ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ಹಾಗೆಯೇ 64 ಕ್ಕಿಂತ ಕಡಿಮೆ ರನ್ಗಳ ಅಂತರದಿಂದ ಗೆದ್ದರೂ ಸಹ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್ನಿಂದ ಹೊರಬೀಳಲಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ಆರಂಭಿಕರ ವಿಶ್ವ ದಾಖಲೆಯ ಚೇಸಿಂಗ್
ಹೀಗಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಪ್ರತಿ ಹಂತದಲ್ಲೂ ನೆಟ್ ರನ್ ರೇಟ್ ಅನ್ನು ಲೆಕ್ಕಾಚಾರ ಮಾಡಲಿದೆ. ಈ ಮೂಲಕ ಪಾಕ್ ಪಡೆ ಲಂಕಾ ತಂಡಕ್ಕೆ ಸೋಲುಣಿಸಿ ಸೆಮಿಫೈನಲ್ಗೇರಲಿದೆಯಾ ಕಾದು ನೋಡಬೇಕಿದೆ.
Published On - 8:31 am, Sat, 28 February 26