
ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ತಂಡವನ್ನು ಪಂಜಾಬ್ ಕಿಂಗ್ಸ್ ಸೋಲಿಸಿತ್ತು. ಇದೀಗ ಹಳೆಯ ಸೋಲಿಗೆ ಗುಜರಾತ್ ಸೇಡು ತೀರಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಗೆಲುವಿಗೆ 143 ರನ್‌ಗಳ ಸವಾಲೊಡ್ಡಿತು. ಈ ಸವಾಲನ್ನು ಗುಜರಾತ್ 7 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಈ ಗೆಲುವಿನಿಂದ ಗುಜರಾತ್ ಟೈಟಾನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಲಾಭ ಗಳಿಸಿದ್ದು, ಏಳನೇ ಸ್ಥಾನಕ್ಕೆ ಜಿಗಿದಿದೆ. ವಾಸ್ತವವಾಗಿ ಪಂಜಾಬ್ ನೀಡಿದ ಸವಾಲನ್ನು ಗುಜರಾತ್ ಕಡಿಮೆ ಓವರ್ ಗಳಲ್ಲಿ ಪೂರ್ಣಗೊಳಿಸಿದ್ದರೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿಯಬಹುದಿತ್ತು. ಆದರೆ ಅಂಥದ್ದೇನೂ ನಡೆಯದ ಕಾರಣ ನೆಟ್ ರನ್ ರೇಟ್ ಆಧಾರದ ಮೇಲೆ ಗುಜರಾತ್ 7ನೇ ಸ್ಥಾನದಲ್ಲಿದೆ.
ಈ ಪಂದ್ಯವನ್ನು ಗುಜರಾತ್ ಟೈಟಾನ್ಸ್ 3 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಕೊನೆಯ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ತೆವಾಟಿಯಾ ತಂಡಕ್ಕೆ ಗೆಲುವು ತಂದುಕೊಟ್ಟರು.
ಅಜ್ಮತುಲ್ಲಾ ಉಮರ್ಜಾಯ್ ವಿಕೆಟ್ ಪತನವಾಗಿದೆ. ಇದರೊಂದಿಗೆ ಗುಜರಾತ್ 5ನೇ ವಿಕೆಟ್ ಕಳೆದುಕೊಂಡಿದೆ. ಶಾರುಖ್ ಖಾನ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ತಂಡದ ಗೆಲುವಿಗೆ 27 ಎಸೆತಗಳಲ್ಲಿ 39 ರನ್‌ಗಳ ಅಗತ್ಯವಿದೆ.
31 ರನ್ ಬಾರಿಸಿ ಸಾಯಿ ಸುದರ್ಶನ್ ವಿಕೆಟ್ ಒಪ್ಪಿಸಿದ್ದಾರೆ. ಅವರನ್ನು ಸ್ಯಾಮ್ ಕರನ್ ಬೌಲ್ಡ್ ಮಾಡಿದರು
ಕೇವಲ ಮೂರು ರನ್ ಬಾರಿಸಿ ಡೇವಿಡ್ ಮಿಲ್ಲರ್ ವಿಕೆಟ್ ಒಪ್ಪಿಸಿದ್ದಾರೆ. ಗುಜರಾತ್ ಗೆಲುವಿಗೆ 47 ಎಸೆತಗಳಲ್ಲಿ 65 ರನ್ ಅಗತ್ಯವಿದೆ.
66 ರನ್‌ಗಳಾಗುವಷ್ಟರಲ್ಲಿ ಗುಜರಾತ್‌ನ ಎರಡನೇ ವಿಕೆಟ್ ಪತನವಾಗಿದೆ. ಲಿವಿಂಗ್‌ಸ್ಟೋನ್, ಕ್ಯಾಪ್ಟನ್ ಗಿಲ್ ಅವರ ವಿಕೆಟ್ ಉರುಳಿಸಿದ್ದಾರೆ. ಐದು ಬೌಂಡರಿಗಳ ನೆರವಿನಿಂದ 35 ರನ್ ಗಳಿಸಿ ಗಿಲ್ ಔಟಾದರು. 10 ಓವರ್‌ಗಳ ನಂತರ ತಂಡದ ಸ್ಕೋರ್ 68/2.
ಕೇವಲ 13 ರನ್ ಗಳಿಸಿ ವೃದ್ಧಿಮಾನ್ ಸಹಾ ವಿಕೆಟ್ ಒಪ್ಪಿಸಿದ್ದಾರೆ. ನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅರ್ಷದೀಪ್ ಸಿಂಗ್, ಸಹಾರನ್ನು ಔಟ್ ಮಾಡಿದರು. ನಾಲ್ಕು ಓವರ್‌ಗಳ ನಂತರ ತಂಡದ ಸ್ಕೋರ್ 29/1.
ಗುಜರಾತ್ ಟೈಟಾನ್ಸ್ ತಂಡ 2 ಓವರ್‌ಗಳಲ್ಲಿ 12 ರನ್ ಗಳಿಸಿದೆ. ತಂಡದ ಪರವಾಗಿ ಶುಭ್‌ಮನ್ ಗಿಲ್ 3 ರನ್, ವೃದ್ಧಿಮಾನ್ ಸಹಾ 9 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಗುಜರಾತ್ ಟೈಟಾನ್ಸ್ಗೆ ಪಂಜಾಬ್ ಕಿಂಗ್ಸ್ 143 ರನ್ ಗಳ ಗುರಿ ನೀಡಿದೆ. ಈ ಪಂದ್ಯದಲ್ಲಿ ಪಂಜಾಬ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ವಿಶೇಷತೆ ತೋರಲು ಸಾಧ್ಯವಾಗಲಿಲ್ಲ. ಪ್ರಭಾಸಿಮ್ರಾನ್ ಸಿಂಗ್ (35) ಮತ್ತು ಹರ್‌ಪ್ರೀತ್ ಬ್ರಾರ್ (29) ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಉತ್ತಮ ಪ್ರದರ್ಶನ ನೀಡಲಿಲ್ಲ.
ಕೇವಲ ಎಂಟು ರನ್ ಗಳಿಸಿ ಶಶಾಂಕ್ ಸಿಂಗ್ ವಿಕೆಟ್ ಒಪ್ಪಿಸಿದ್ದಾರೆ. ಹರ್‌ಪ್ರೀತ್ ಬ್ರಾರ್ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 16 ಓವರ್‌ಗಳ ನಂತರ ತಂಡದ ಸ್ಕೋರ್ 107/7.
ಪಂಜಾಬ್ ಕಿಂಗ್ಸ್ 6ನೇ ವಿಕೆಟ್ ಕಳೆದುಕೊಂಡಿದೆ. ಅಭಿಷೇಕ್ ಶರ್ಮಾ ಕೇವಲ ಮೂರು ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡದ ಬ್ಯಾಟಿಂಗ್ ಕ್ರಮಾಂಕ ಸಂಪೂರ್ಣ ವಿಫಲವಾಗಿದೆ. 14 ಓವರ್‌ಗಳ ನಂತರ ತಂಡದ ಸ್ಕೋರ್ 93/6.
ನೂರ್ ಅಹ್ಮದ್ ಬೌಲಿಂಗ್ನಲ್ಲಿ ಪಂಜಾಬ್ ಕಿಂಗ್ಸ್ ಗೆ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ ಆರು ರನ್ ಗಳಿಸಿ ಔಟಾದರು. ಶಶಾಂಕ್ ಸಿಂಗ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಪಂಜಾಬ್ ತಂಡದ ಮೂರನೇ ವಿಕೆಟ್ ಪತನವಾಗಿದೆ. ಇನಿಂಗ್ಸ್‌ನ ಎಂಟನೇ ಓವರ್ ಬೌಲಿಂಗ್ ಮಾಡಿದ ರಶೀದ್ ಖಾನ್, ನಾಯಕ ಸ್ಯಾಮ್ ಕರನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಎಂಟು ಓವರ್‌ಗಳ ನಂತರ ತಂಡದ ಸ್ಕೋರ್ 67/3.
ಪಂಜಾಬ್ ಪರ ಬ್ಯಾಟಿಂಗ್ ಆರಂಭಿಸಿರುವ ಸ್ಯಾಮ್ ಕರನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅಮೋಘವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಮೂರು ಓವರ್‌ಗಳ ನಂತರ ತಂಡದ ಸ್ಕೋರ್ 34/0.
ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 7:10 pm, Sun, 21 April 24