PBKS vs SRH, IPL 2021 Match 14 Result: ಮೊದಲ ಗೆಲುವು ಕಂಡ ಸನ್​ರೈಸರ್ಸ್ ಹೈದರಾಬಾದ್; ಪಂಜಾಬ್​ಗೆ ಮತ್ತೆ ಸೋಲು

PBKS vs SRH Scorecard: ಪಂಜಾಬ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2021 ಟೂರ್ನಿಯ 14ನೇ ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

 • TV9 Web Team
 • Published On - 18:55 PM, 21 Apr 2021
PBKS vs SRH, IPL 2021 Match 14 Result: ಮೊದಲ ಗೆಲುವು ಕಂಡ ಸನ್​ರೈಸರ್ಸ್ ಹೈದರಾಬಾದ್; ಪಂಜಾಬ್​ಗೆ ಮತ್ತೆ ಸೋಲು
ವಾರ್ನರ್- ಬೇರ್​​ಸ್ಟೋ ಜೊತೆಯಾಟ

ಚೆನ್ನೈ: ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 14ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಮಿಂಚಿದ ಎಸ್​ಆರ್​ಎಚ್ ಈ ಮೂಲಕ ಸರಣಿಯ ಮೊದಲ ಗೆಲುವು ಕಂಡಿದೆ. ಸನ್​ರೈಸರ್ಸ್ ಪರ ನಾಯಕ ಡೇವಿಡ್ ವಾರ್ನರ್ 37(37), ಬೇರ್​ಸ್ಟೋ 63 (56) ಹಾಗೂ ಕೇನ್ ವಿಲಿಯಮ್​ಸನ್ 16 (19) ರನ್ ದಾಖಲಿಸಿ ತಂಡ ಗೆಲ್ಲಿಸಿದ್ದಾರೆ. ಪಂಜಾಬ್ ನೀಡಿದ್ದ 121 ರನ್ ಟಾರ್ಗೆಟ್​ನ್ನು ಕೇವಲ 1 ವಿಕೆಟ್ ಕಳೆದುಕೊಂಡು ಪೂರೈಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಸನ್​ರೈಸರ್ಸ್ ಹೈದರಾಬಾದ್​ಗೆ 121 ರನ್​ಗಳ ಟಾರ್ಗೆಟ್ ನೀಡಿತ್ತು. 19.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 120 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಸನ್​ರೈಸರ್ಸ್ ಹೈದರಾಬಾದ್ ಬೌಲರ್ಸ್ ದಾಳಿಗೆ ಪಂಜಾಬ್ ಕಿಂಗ್ಸ್ ಬ್ಯಾಟ್ಸ್​ಮನ್​ಗಳು ರನ್ ಗಳಿಸಲು ಪರದಾಡಿ, ವಿಕೆಟ್ ಒಪ್ಪಿಸಿದ್ದರು.

ಹೈದರಾಬಾದ್ ಪರ ಖಲೀಲ್ ಅಹ್ಮದ್ 4 ಓವರ್​ಗೆ 21 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅಭಿಷೇಕ್ ಶರ್ಮಾ 4 ಓವರ್​ಗೆ 24 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದಿದ್ದರು. ಸನ್​ರೈಸರ್ಸ್ ಪರ ಮಯಾಂಕ್ ಅಗರ್​ವಾಲ್ ಹಾಗೂ ಶಾರುಖ್ ಖಾನ್ 22 ರನ್ ಗಳಿಸಿದ್ದು ಹೊರತಾಗಿ ಉಳಿದ ಆಟಗಾರರು 10-15 ರನ್ ದಾಟಲೂ ಪರದಾಡಿದ್ದರು.

LIVE Cricket Score & Updates

The liveblog has ended.
 • 21 Apr 2021 18:55 PM (IST)

  ಸನ್​ರೈಸರ್ಸ್ ಹೈದರಾಬಾದ್​ಗೆ ಸುಲಭ ಜಯ

  ಸನ್​ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. 18.4 ಓವರ್​ಗೆ 121 ರನ್ ಗುರಿ ತಲುಪುವ ಮೂಲಕ ಸರಣಿಯ ಮೊದಲ ಗೆಲುವನ್ನು ಸನ್​ರೈಸರ್ಸ್ ತಂಡ ಕಾಣುವಂತಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಸನ್​ರೈಸರ್ಸ್, ಪಂಜಾಬ್ ತಂಡಕ್ಕೆ ಮತ್ತೆ ಸೋಲುಣಿಸಿದೆ.

 • 21 Apr 2021 18:49 PM (IST)

  ಅರ್ಧಶತಕ ಪೂರೈಸಿದ ಬೇರ್​ಸ್ಟೋ

  ಸನ್​ರೈಸರ್ಸ್ ಹೈದರಾಬಾದ್ ಪರ ಉತ್ತಮ ಆಟವಾಡಿದ ಬೇರ್​ಸ್ಟೋ ಅರ್ಧಶತಕ ಪೂರೈಸಿದ್ದಾರೆ. 49 ಬಾಲ್​ಗೆ 2 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 51 ರನ್ ಗಳಿಸಿದ್ದಾರೆ. ಸನ್​ರೈಸರ್ಸ್ ತಂಡದ ಮೊತ್ತ 18 ಓವರ್​ನ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 111 ಆಗಿದೆ. ಗೆಲ್ಲಲು 12 ಬಾಲ್​ಗೆ 10 ರನ್ ಬೇಕಿದೆ.

 • 21 Apr 2021 18:42 PM (IST)

  100 ರನ್ ತಲುಪಿದ ಸನ್​ರೈಸರ್ಸ್

  16 ಓವರ್​ಗಳ ಅಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡು ಸನ್​ರೈಸರ್ಸ್ ಹೈದರಾಬಾದ್ ತಂಡ 100 ರನ್ ಗಡಿ ದಾಟಿದೆ. ತಂಡ ಗೆಲ್ಲಲು ಇನ್ನು 24 ಬಾಲ್​ಗೆ 21 ರನ್ ಬೇಕಿದೆ. ತಂಡದ ಪರ ವಿಲಿಯಮ್​ಸನ್ ಹಾಗೂ ಬೇರ್​ಸ್ಟೋ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 21 Apr 2021 18:32 PM (IST)

  36 ಬಾಲ್​ಗೆ 30 ರನ್ ಬೇಕು

  ಸನ್​ರೈಸರ್ಸ್ ಹೈದರಾಬಾದ್ ಗೆಲ್ಲಲು 36 ಬಾಲ್​ಗಳು ಉಳಿದಿರುವಂತೆ 30 ರನ್ ಬೇಕಾಗಿದೆ. ತಂಡ 14 ಓವರ್​ಗೆ 1 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿದೆ. ವಿಲಿಯಮ್ಸನ್ ಈ ಬಾರಿಯ ಟೂರ್ನಿಯ ಮೊದಲ ಪಂದ್ಯವನ್ನಾಡುತ್ತಿದ್ದು, 9 ಬಾಲ್​ಗೆ 9 ರನ್ ಗಳಿಸಿದ್ದಾರೆ. ಬೇರ್​ಸ್ಟೋ 39 ಬಾಲ್​ಗೆ 42 ರನ್ ಕಲೆಹಾಕಿದ್ದಾರೆ.

 • 21 Apr 2021 18:26 PM (IST)

  ಸನ್​ರೈಸರ್ಸ್ ಗೆಲ್ಲಲು 42 ಬಾಲ್​ಗೆ 34 ರನ್

  ಸನ್​ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 42 ಬಾಲ್​ಗೆ 34 ರನ್ ಬೇಕಾಗಿದೆ. ಹೈದರಾಬಾದ್ ಮೊತ್ತ 13 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 87 ರನ್ ದಾಖಲಿಸಿದೆ.

 • 21 Apr 2021 18:16 PM (IST)

  ಸನ್​ರೈಸರ್ಸ್ 73/1 (11 ಓವರ್)

  11 ಓವರ್​ಗಳ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ 1 ವಿಕೆಟ್ ಕಳೆದುಕೊಂಡು 73 ರನ್ ದಾಖಲಿಸಿದೆ. ಸನ್​ರೈಸರ್ಸ್ ಗೆಲ್ಲಲು 54 ಬಾಲ್​ಗೆ 48 ರನ್ ಬೇಕಿದೆ.

 • 21 Apr 2021 18:13 PM (IST)

  ವಾರ್ನರ್ ಔಟ್

  img

  37 ಬಾಲ್​ಗೆ 37 ರನ್ ಗಳಿಸಿ ಸನ್​ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಔಟ್ ಆಗಿದ್ದಾರೆ. ಈ ಮೂಲಕ ಎಸ್​ಆರ್​ಎಚ್ ಮೊದಲ ವಿಕೆಟ್ ಪತನವಾಗಿದೆ.

 • 21 Apr 2021 18:12 PM (IST)

  ವಾರ್ನರ್ ಸಿಕ್ಸರ್

  img

  ಸನ್​ರೈಸರ್ಸ್ ಹೈದರಾಬಾದ್ ಪರ ಅದ್ಭುತ ಆಟವಾಡುತ್ತಿರುವ ಆರಂಭಿಕ ಜೋಡಿ 10 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 73 ರನ್ ದಾಖಲಿಸಿದೆ. ಹೂಡಾ ಬೌಲಿಂಗ್ ಮಾಡಿದ ಕೊನೆಯ ಓವರ್​ನಲ್ಲಿ ವಾರ್ನರ್ ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಹೈದರಾಬಾದ್ ರನ್ ವೇಗ ಹೆಚ್ಚಿಕೊಂಡಿದೆ. ವಾರ್ನರ್ 37 (36) ಮತ್ತು ಬೇರ್​ಸ್ಟೋ 32 (24) ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡ ಗೆಲ್ಲಲು 60 ಬಾಲ್​ಗೆ 48 ರನ್ ಬೇಕಿದೆ.

 • 21 Apr 2021 18:05 PM (IST)

  ಸನ್​ರೈಸರ್ಸ್ 58/0 (8 ಓವರ್)

  ಸನ್​ರೈಸರ್ಸ್ ಹೈದರಾಬಾದ್ ತಂಡ 8 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದೆ. ಬೇರ್​ಸ್ಟೋ 28 (21) ಹಾಗೂ ಡೇವಿಡ್ ವಾರ್ನರ್ 26 (27) ಮೊತ್ತ ದಾಖಲಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ.

 • 21 Apr 2021 17:55 PM (IST)

  ಪವರ್​​ಪ್ಲೇ ಅಂತ್ಯಕ್ಕೆ 50/0

  ಸನ್​ರೈಸರ್ಸ್ ಹೈದರಾಬಾದ್ ತಂಡ 6 ಓವರ್​ಗಳ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 50 ರನ್ ಗಳಿಸಿದೆ. ಈ ಮೂಲಕ ತಂಡ ಗೆಲ್ಲಲು 84 ಬಾಲ್​ಗೆ 71 ರನ್ ಬೇಕಿದೆ.

 • 21 Apr 2021 17:49 PM (IST)

  ಸನ್​ರೈಸರ್ಸ್​ಗೆ 90 ಬಾಲ್​ಗೆ 81 ರನ್ ಬೇಕು

  ಸನ್​ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 90 ಬಾಲ್​ಗೆ 81 ರನ್ ಬೇಕಾಗಿದೆ. ಪಂಜಾಬ್ ಬೌಲರ್​ಗಳನ್ನು ಹೈದರಾಬಾದ್ ಆರಂಭಿಕ ಬ್ಯಾಟ್ಸ್​ಮನ್​ಗಳು ದಂಡಿಸುತ್ತಿದ್ದಾರೆ. ಪಂಜಾಬ್ ಪರ ಯಾವುದೇ ವಿಕೆಟ್ ಬೀಳದಿರುವುದು ಸನ್​ರೈಸರ್ಸ್ ರನ್ ವೇಗ ಉಳಿಸಿಕೊಳ್ಳಲು ಸಹಾಯ ಮಾಡಿದೆ.

 • 21 Apr 2021 17:46 PM (IST)

  ಸನ್​ರೈಸರ್ಸ್ 33/0 (4 ಓವರ್)

  ಸನ್​ರೈಸರ್ಸ್ ಹೈದರಾಬಾದ್ ತಂಡ 4 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 33 ರನ್ ದಾಖಲಿಸಿದೆ. ಹೈದರಾಬಾದ್ ಪರ ವಾರ್ನರ್ 13 (12) ಹಾಗೂ ಬೇರ್​ಸ್ಟೋ 26 (15) ಆಟವಾಡುತ್ತಿದ್ದಾರೆ.

 • 21 Apr 2021 17:40 PM (IST)

  ವೇಗದ ಆಟಕ್ಕೆ ಮುಂದಾದ ಬೇರ್​ಸ್ಟೋ

  img

  ಸನ್​ರೈಸರ್ಸ್ ಹೈದರಾಬಾದ್ ಪರ ಜಾನಿ ಬೇರ್​ಸ್ಟೋ ವೇಗದ ಆಟ ಆಡುತ್ತಿದ್ದಾರೆ. 9 ಬಾಲ್​ಗೆ 1 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 16 ರನ್ ಗಳಿಸಿದ್ದಾರೆ. ಡೇವಿಡ್ ವಾರ್ನರ್ 9 ಬಾಲ್​ಗೆ 10 ರನ್ ಬಾರಿಸಿದ್ದಾರೆ. ಸನ್​ರೈಸರ್ಸ್ ಮೊತ್ತ 3 ಓವರ್ ಅಂತ್ಯಕ್ಕೆ 27 ರನ್ ಗಳಿಸಿದೆ.

 • 21 Apr 2021 17:32 PM (IST)

  ಸನ್​ರೈಸರ್ಸ್ 6/0 (1 ಓವರ್)

  ಮೊದಲ ಓವರ್​​ನ ಅಂತ್ಯಕ್ಕೆ ಸನ್​ರೈಸರ್ಸ್ ಹೈದರಾಬಾದ್ ತಂಡ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ. ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್​​ಸ್ಟೋ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊಹಮ್ಮದ್ ಶಮಿ ಮೊದಲ ಓವರ್ ಬೌಲಿಂಗ್ ಮಾಡಿ್ದ್ದಾರೆ.

 • 21 Apr 2021 17:13 PM (IST)

  ಶಮಿ ರನೌಟ್; ಪಂಜಾಬ್ ಆಲ್ ಔಟ್

  img

  ಪಂಜಾಬ್ ಕಿಂಗ್ಸ್ ತಂಡ 19.4 ಓವರ್​ಗೆ 120 ರನ್ ಗಳಿಸಿ ಆಲ್ ಔಟ್ ಆಗಿದೆ. ಶಮಿ ಕೊನೆಯ ಓವರ್​ನಲ್ಲಿ ಅವಸರದ ಓಟಕ್ಕೆ ಮುಂದಾಗಿ ರನ್ ಔಟ್ ಆಗಿದ್ದಾರೆ. ಈ ಮೂಲಕ ಪಂಜಾಬ್, ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 121 ರನ್ ಗಳ ಟಾರ್ಗೆಟ್ ನೀಡಿದೆ.

 • 21 Apr 2021 17:08 PM (IST)

  ಮುರುಗನ್ ಅಶ್ವಿನ್ ಔಟ್

  img

  10 ಬಾಲ್​ಗೆ 9 ರನ್ ಗಳಿಸಿ ಮುರುಗನ್ ಅಶ್ವಿನ್ ಔಟ್ ಆಗಿದ್ದಾರೆ. ಸಿದ್ಧಾರ್ಥ್ ಕೌಲ್ ಬೌಲಿಂಗ್​ಗೆ ಕೀಪರ್ ಬೇರ್​ಸ್ಟೋಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಪಂಜಾಬ್ ಕಿಂಗ್ಸ್ 19.1 ಓವರ್​ಗೆ 114/9 ರನ್ ಗಳಿಸಿದೆ.

 • 21 Apr 2021 17:04 PM (IST)

  ಶಾರುಖ್ ಖಾನ್ ಔಟ್

  img

  ಪಂಜಾಬ್ ಕಿಂಗ್ಸ್ ತಂಡದ ಮೊತ್ತ 100 ರನ್ ಗಡಿ ದಾಟುವಲ್ಲಿ ಸಹಕಾರಿಯಾಗಿದ್ದ ಆಟಗಾರ ಶಾರುಖ್ ಖಾನ್ 17 ಬಾಲ್​ಗೆ 22 ರನ್ ಗಳಿಸಿ ಔಟ್ ಆಗಿದ್ದಾರೆ. ಖಲೀಲ್ ಅಹ್ಮದ್ ಬಾಲ್​ಗೆ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮೊಹಮ್ಮದ್ ಶಮಿ ಮತ್ತು ಮುರುಗನ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 21 Apr 2021 17:01 PM (IST)

  ಪಂಜಾಬ್ ಕಿಂಗ್ಸ್ 110/7 (18 ಓವರ್)

  18 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 110 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ಶಾರುಖ್ ಖಾನ್ ಹಾಗೂ ಮುರುಗನ್ ಅಶ್ವಿನ್ ಆಟವಾಡುತ್ತಿದ್ದಾರೆ.

 • 21 Apr 2021 16:54 PM (IST)

  ಫಬಿಯನ್ ಅಲೆನ್ ಔಟ್

  img

  ವಾರ್ನರ್ ಹಿಡಿದ ಉತ್ತಮ ಕ್ಯಾಚ್​ಗೆ ಫಬಿಯನ್ ಅಲೆನ್ 11 ಬಾಲ್​ಗೆ 6 ರನ್ ಗಳಿಸಿ ಔಟ್ ಆಗಿದ್ದಾರೆ. ಖಲೀಲ್ ಅಹ್ಮದ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ ಕಿಂಗ್ಸ್ 16.4 ಓವರ್​ಗೆ 101 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ.

 • 21 Apr 2021 16:51 PM (IST)

  ಪಂಜಾಬ್ ಕಿಂಗ್ಸ್ 98/6 (16 ಓವರ್)

  ಪಂಜಾಬ್ ಕಿಂಗ್ಸ್ ತಂಡ 16 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 98 ರನ್ ದಾಖಲಿಸಿದೆ. ಶಾರುಖ್ ಹಾಗೂ ಫಬಿಯನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು 4 ಓವರ್​ಗಳು ಬಾಕಿ ಉಳಿದಿದ್ದು, ದೊಡ್ಡ ಮೊತ್ತ ಪೇರಿಸುವ ಸಾಧ್ಯತೆ ಕಂಡುಬರುತ್ತಿಲ್ಲ.

 • 21 Apr 2021 16:39 PM (IST)

  ಹೆನ್ರಿಕ್ವೆಸ್ ಸ್ಟಂಪ್ ಔಟ್

  img

  ಐಪಿಎಲ್ 2021 ಟೂರ್ನಿಯ ಮೊದಲ ಪಂದ್ಯ ಆಡುತ್ತಿರುವ ಹೆನ್ರಿಕ್ವೆಸ್ 17 ಬಾಲ್​ಗೆ 14 ರನ್ ಗಳಿಸಿ ಅಭಿಷೇಕ್ ಶರ್ಮಾ ಬಾಲ್​ಗೆ ಸ್ಟಂಪ್ ಔಟ್ ಆಗಿದ್ದಾರೆ. ಪಂಜಾಬ್ ತಂಡ 14 ಓವರ್​ಗಳ ಅಂತ್ಯಕ್ಕೆ 84 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. ಶಾರುಖ್ ಖಾನ್ ಮತ್ತು ಫಬಿಯನ್ ಅಲೆನ್ ಬ್ಯಾಟಿಂಗ್​ಗೆ ಇಳಿದಿದ್ದಾರೆ.

 • 21 Apr 2021 16:35 PM (IST)

  ಪಂಜಾಬ್ ಕಿಂಗ್ಸ್ 75/5 (13 ಓವರ್)

  13 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದೆ. ಹೆನ್ರಿಕ್ವೆಸ್ 14 (16) ಹಾಗೂ ಶಾರುಖ್ ಖಾನ್ 2 (3) ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 21 Apr 2021 16:30 PM (IST)

  ದೀಪಕ್ ಹೂಡಾ ಔಟ್

  img

  ಪಂಜಾಬ್ ಕಿಂಗ್ಸ್ ದಾಂಡಿಗ ದೀಪಕ್ ಹೂಡಾ 11 ಬಾಲ್​ಗೆ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಭಿಷೇಕ್ ಶರ್ಮಾ ಬಾಲ್​ಗೆ ಎಲ್​ಬಿಡಬ್ಲ್ಯು ಆಗಿದ್ದಾರೆ. ಹೆನ್ರಿಕ್ವೆಸ್ ಹಾಗೂ ಶಾರುಖ್ ಖಾನ್ ಬ್ಯಾಟಿಂಗ್ ಮಾಡುತ್ತಿದ್ದು, ಪಂಜಾಬ್ ಮೊತ್ತ 12 ಓವರ್​ಗೆ 66/5 ಆಗಿದೆ.

 • 21 Apr 2021 16:26 PM (IST)

  ಪಂಜಾಬ್ ಕಿಂಗ್ಸ್ ನಿಧಾನ ಆಟ

  ಪ್ರಮುಖ ವಿಕೆಟ್ ಕಳೆದುಕೊಂಡಿರುವ ಪಂಜಾಬ್ ಕಿಂಗ್ಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. 11 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡಿರುವ ಪಂಜಾಬ್ ಕೇವಲ 60 ರನ್ ಗಳಿಸಿದ್ದಾರೆ.

 • 21 Apr 2021 16:19 PM (IST)

  ಪಂಜಾಬ್ ಕಿಂಗ್ಸ್ 47/4 (9 ಓವರ್)

  ಪಂಜಾಬ್ ಕಿಂಗ್ಸ್ ತಂಡ 9 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿದೆ. ಸನ್​ರೈಸರ್ಸ್ ಬೌಲರ್​ಗಳ ದಾಳಿಗೆ ಬ್ಯಾಟ್ಸ್​ಮನ್​ಗಳು ಬೇಗನೇ ವಿಕೆಟ್ ಕಳೆದುಕೊಂಡಿದ್ದಾರೆ.

 • 21 Apr 2021 16:17 PM (IST)

  ಕ್ರಿಸ್ ಗೈಲ್ ಔಟ್

  img

  ರಶೀದ್ ಖಾನ್ ಬಾಲ್​ಗೆ ಕ್ರಿಸ್ ಗೈಲ್ ವಿಕೆಟ್ ಒಪ್ಪಿಸಿದ್ದಾರೆ. 17 ಬಾಲ್​ಗೆ 15 ರನ್ ಗಳಿಸಿ ಗೈಲ್ ನಿರ್ಗಮಿಸಿದ್ದಾರೆ. ಪಂಜಾಬ್ ಕಿಂಗ್ಸ್ ಅಗ್ರ ಕ್ರಮಾಂಕ ಕುಸಿದ ಕಾರಣ, ಮಧ್ಯಮ ಕ್ರಮಾಂಕದಲ್ಲಿ ಗೈಲ್ ಆಡುವ ನಿರೀಕ್ಷೆ ಇತ್ತು. ಐಪಿಎಲ್ ಮಾದರಿಯಲ್ಲಿ ಬಾಸ್ ಎಂದು ಗುರುತಿಸಿಕೊಳ್ಳುವ ಗೈಲ್ ಹೊಡಿಬಡಿ ಆಟ ಇಂದು ನೋಡಬಹುದು ಎಂಬ ನಿರೀಕ್ಷೆ ಇತ್ತು. ಅದು ಸುಳ್ಳಾಗಿದೆ. ಗೈಲ್ ಔಟಾಗಿದ್ದು, ಈಗ ದೀಪಕ್ ಹೂಡಾ ಹಾಗೂ ಮೊಯಿಸಸ್ ಹೆನ್ರಿಕ್ವೆಸ್ ಕ್ರೀಸ್​ನಲ್ಲಿದ್ದಾರೆ.

 • 21 Apr 2021 16:11 PM (IST)

  ಪಂಜಾಬ್ ಕಿಂಗ್ಸ್ 45/3 (8 ಓವರ್)

  8 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 45 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. ಕ್ರಸ್ ಗೈಲ್ 14 ಬಾಲ್​ಗೆ 14 ಹಾಗೂ ದೀಪಕ್ ಹೂಡಾ 3 ಬಾಲ್​ಗೆ 5 ರನ್ ಗಳಿಸಿ ಕಣದಲ್ಲಿದ್ದಾರೆ.

 • 21 Apr 2021 16:09 PM (IST)

  ಶೂನ್ಯಕ್ಕೆ ಔಟಾದ ಪೂರನ್

  img

  ಮಯಾಂಕ್ ಬಳಿಕ ಬ್ಯಾಟಿಂಗ್​ಗೆ ಆಗಮಿಸಿದ ನಿಕೊಲಸ್ ಪೂರನ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಅವಸರದ ಓಟಕ್ಕೆ ಡೇವಿಡ್ ವಾರ್ನರ್​ಗೆ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ ಕಿಂಗ್ಸ್ 7.2 ಓವರ್​ಗೆ 3 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ. ಗೈಲ್ ಮತ್ತು ಹೂಡಾ ಕ್ರೀಸ್​ನಲ್ಲಿದ್ದಾರೆ.

 • 21 Apr 2021 16:06 PM (IST)

  ಮಯಾಂಕ್ ಅಗರ್​ವಾಲ್ ಔಟ್

  img

  25 ಬಾಲ್​ಗೆ 22 ರನ್ ಗಳಿಸಿ ಮಯಾಂಕ್ ಅಗರ್​ವಾಲ್ ವಿಕೆಟ್ ಒಪ್ಪಿಸಿದ್ದಾರೆ. ಖಲೀಲ್ ಅಹ್ಮದ್ ಬೌಲಿಂಗ್​ಗೆ ರಶೀದ್ ಖಾನ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 7 ಓವರ್ ಅಂತ್ಯಕ್ಕೆ 39 ರನ್ ಗಳಿಸಿ 2 ವಿಕೆಟ್ ಪಡೆದಿದ್ದಾರೆ.

 • 21 Apr 2021 16:00 PM (IST)

  ಪವರ್​ಪ್ಲೇ ಅಂತ್ಯಕ್ಕೆ 32/1

  6 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 32 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಗರ್​ವಾಲ್ 23 ಬಾಲ್​ಗೆ 21 ಹಾಗೂ ಕ್ರಿಸ್ ಗೈಲ್ 7 ಬಾಲ್​ಗೆ 7 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸನ್​ರೈಸರ್ಸ್ ಪರ ಅಭಿಷೇಕ್ ಶರ್ಮಾ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ಸಿದ್ಧಾರ್ಥ್ ಕೌಲ್ ಉತ್ತಮ ಬೌಲಿಂಗ್ ಮಾಡಿ, ರನ್ ಗಳಿಕೆ ನಿಯಂತ್ರಣದಲ್ಲಿ ಇರಿಸಿದ್ದಾರೆ.

 • 21 Apr 2021 15:45 PM (IST)

  ಕೆ.ಎಲ್. ರಾಹುಲ್ ಔಟ್

  img

  ಭುವನೇಶ್ವರ್ ಕುಮಾರ್ ಬೌಲಿಂಗ್​ಗೆ, 6 ಬಾಲ್​ಗೆ 4 ರನ್ ಗಳಿಸಿದ್ದ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿದ್ದಾರೆ. ಕೇದಾರ್ ಜಾಧವ್ ಕ್ಯಾಚ್ ಪಡೆದಿದ್ದಾರೆ. ಈ ಮೂಲಕ ಪಂಜಾಬ್​ನ ಮೊದಲ ವಿಕೆಟ್ ಪತನವಾಗಿದ್ದು, 3.1 ಓವರ್​ಗೆ 15 ರನ್ ಗಳಿಸಿದೆ.

 • 21 Apr 2021 15:43 PM (IST)

  ಪಂಜಾಬ್ ಕಿಂಗ್ಸ್ 15/0 (3 ಓವರ್)

  3 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ಮೊತ್ತ ವಿಕೆಟ್ ನಷ್ಟವಿಲ್ಲದೆ 15 ರನ್ ಆಗಿದೆ. ರಾಹುಲ್ 4(5) ಹಾಗೂ ಮಯಾಂಕ್ 11(13) ಆಟವಾಡುತ್ತಿದ್ದಾರೆ.

 • 21 Apr 2021 15:40 PM (IST)

  ಪಂದ್ಯದ ಮೊದಲ ಫೋರ್

  img

  ಮೂರನೇ ಓವರ್​ನ ಖಲೀಲ್ ಬೌಲಿಂಗ್​ಗೆ ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಬೌಂಡರಿ ಬಾರಿಸಿದ್ದಾರೆ. ಈ ಮೂಲಕ ತಂಡದ ಪಂಜಾಬ್ ಕಿಂಗ್ಸ್ ಮೊತ್ತ 2.2 ಓವರ್​ಗೆ ವಿಕೆಟ್ ಕಳೆದುಕೊಳ್ಳದೆ 13 ರನ್ ಆಗಿದೆ.

 • 21 Apr 2021 15:35 PM (IST)

  ಪಂಜಾಬ್ ಕಿಂಗ್ಸ್ 3/0 (1 ಓವರ್)

  1 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್​ವಾಲ್ ಕಣಕ್ಕಿಳಿದಿದ್ದಾರೆ. ಮೊದಲ ಓವರ್​ನ್ನು ಅಭಿಷೇಕ್ ಶರ್ಮಾ ಬೌಲಿಂಗ್ ಮಾಡಿದ್ದಾರೆ.

 • 21 Apr 2021 15:25 PM (IST)

  ಸನ್​ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್

  ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಕೇದಾರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್

  ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮುಖ್ಯವಾದ ಬದಲಾವಣೆ ಮಾಡಿಕೊಳ್ಳಲಾಗಿದೆ. ಕೇನ್ ವಲಿಯಮ್ಸನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

 • 21 Apr 2021 15:24 PM (IST)

  ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

  ಕೆ.ಎಲ್. ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೈಲ್, ಮೊಯಿಸಸ್ ಹೆನ್ರಿಕ್ಸ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಫ್ಯಾಬಿಯನ್ ಅಲೆನ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್

 • 21 Apr 2021 15:03 PM (IST)

  ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ

  ಪಂಜಾಬ್ ಕಿಂಗ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಸನ್​ರೈಸರ್ಸ್ ಹೈದರಾಬಾದ್ ಬೌಲಿಂಗ್ ಮಾಡಲಿದೆ.

 • 21 Apr 2021 15:00 PM (IST)

  ಪಂಜಾಬ್ ಕಿಂಗ್ಸ್- ಸನ್​ರೈಸರ್ಸ್ ಹೈದರಾಬಾದ್ ಮುಖಾಮುಖಿ

  ಐಪಿಎಲ್ ಟೂರ್ನಿಯ ಪಂಜಾಬ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ನಡುವಿನ ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ 5 ಹಾಗೂ ಸನ್​ರೈಸರ್ಸ್ ಹೈದರಾಬಾದ್ 11 ಪಂದ್ಯಗಳನ್ನು ಗೆದ್ದಿದು.