PAK vs ENG: ಸೋಲಿನಿಂದ ಕಂಗೆಟ್ಟು ಅಂಪೈರ್​ಗೆ ತಂಡ ಆಯ್ಕೆ ಮಾಡುವ ಜವಬ್ದಾರಿ ನೀಡಿದ ಪಾಕ್ ಮಂಡಳಿ

PCB: ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ದೊಡ್ಡ ಟೂರ್ನಿಗಳಲ್ಲಿ ತಂಡ ಸತತ ಸೋಲು ಕಾಣುತ್ತಿದೆ. ಈಗ ತವರಿನ ಪಂದ್ಯಗಳಲ್ಲೂ ಪಾಕಿಸ್ತಾನ ತಂಡ ಗೆಲ್ಲುತ್ತಿಲ್ಲ. ಪಾಕಿಸ್ತಾನ 1341 ದಿನಗಳಿಂದ ತವರಿನಲ್ಲಿ ಯಾವುದೇ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ.

PAK vs ENG: ಸೋಲಿನಿಂದ ಕಂಗೆಟ್ಟು ಅಂಪೈರ್​ಗೆ ತಂಡ ಆಯ್ಕೆ ಮಾಡುವ ಜವಬ್ದಾರಿ ನೀಡಿದ ಪಾಕ್ ಮಂಡಳಿ
ಪಾಕ್ ತಂಡ
Follow us
|

Updated on:Oct 11, 2024 | 4:48 PM

ಪ್ರತಿಯೊಂದು ಸರಣಿ ಹಾಗೂ ಪಂದ್ಯವನ್ನು ಸೋತಾಗಲೆಲ್ಲ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಅಲ್ಲೋಲ ಕಲ್ಲೋಲ ಏಳುವುದು ಸಹಜ. ಅದರಂತೆ ಇದೀಗ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್ ಮತ್ತು 47 ರನ್‌ಗಳಿಂದ ಹೀನಾಯವಾಗಿ ಸೋತಿರುವ ಪಾಕ್ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆಯಾಗಿದೆ. ತವರಿನಲ್ಲಿ ಆಂಗ್ಲರ ವಿರುದ್ಧ ಅವಮಾನಕರ ಸೋಲಿಗೆ ತುತ್ತಾದ ಬಳಿಕ ಅಸಮಾಧಾನಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹೊಸ ಆಯ್ಕೆ ಸಮಿತಿಯನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಈ ಆಯ್ಕೆ ಸಮಿತಿಯಲ್ಲಿ ಅಂಪೈರ್ ಕೂಡ ಸ್ಥಾನ ಪಡೆದಿದ್ದಾರೆ.

ಹೊಸ ಆಯ್ಕೆ ಸಮಿತಿ ಪ್ರಕಟ

2023ರ ಏಕದಿನ ವಿಶ್ವಕಪ್‌ನಿಂದ ಪಾಕಿಸ್ತಾನ ತಂಡದಲ್ಲಿ ರಾಜೀನಾಮೆಗಳ ಪರ್ವ ಆರಂಭವಾಗಿದೆ. ಇತ್ತೀಚೆಗಷ್ಟೇ ಮೊಹಮ್ಮದ್ ಯೂಸುಫ್ ಆಯ್ಕೆ ಸಮಿತಿಯಿಂದ ಹೊರಬಂದಿದ್ದರು. ಅಂದಿನಿಂದ ಪಿಸಿಬಿ ಅವರ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಅವಮಾನಕರ ಸೋಲಿನ ನಂತರ ಆಯ್ಕೆ ಸಮಿತಿಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲು ಪಾಕ್ ಮಂಡಳಿ ಮುಂದಾಗಿದೆ. ಇದೀಗ ಹೊಸ ಆಯ್ಕೆ ಸಮಿತಿಗೆ ಅಲೀಂ ದಾರ್, ಆಕಿಬ್ ಜಾವೇದ್, ಅಸದ್ ಶಫೀಕ್, ಅಜರ್ ಅಲಿ ಮತ್ತು ಹಸನ್ ಚೀಮಾ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ ಅಸಾದ್ ಶಫೀಕ್ ಮತ್ತು ಹಸನ್ ಚೀಮಾ ಅವರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಲಾಗಿತ್ತು. ಈಗ ಈ ಸಮಿತಿಯಲ್ಲಿ ಅಲೀಂ ದಾರ್, ಆಕಿಬ್ ಜಾವೇದ್ ಮತ್ತು ಅಜರ್ ಅಲಿ ಸ್ಥಾನ ಪಡೆದಿದ್ದಾರೆ. ಅಲೀಮ್ ದಾರ್ ಮಾಜಿ ಐಸಿಸಿ ಎಲೈಟ್ ಅಂಪೈರ್ ಆಗಿದ್ದರು. ಅವರು ಸುಮಾರು 19 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಇದೀಗ ಪಾಕ್ ತಂಡವನ್ನು ಆಯ್ಕೆ ಮಾಡುವ ಜವಬ್ದಾರಿ ಸಿಕ್ಕಿದೆ.

400ಕ್ಕೂ ಹೆಚ್ಚು ಪಂದ್ಯಗಳಲ್ಲಿ ಅಂಪೈರ್

ಅಲೀಂ ದಾರ್ ಅವರು ಬರೋಬ್ಬರಿ 435 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಂಪೈರಿಂಗ್ ವೃತ್ತಿಜೀವನದಲ್ಲಿ, ಅಲೀಮ್ ದಾರ್ ಮೂರು ಬಾರಿ ಡೇವಿಡ್ ಶೆಫರ್ಡ್ ಟ್ರೋಫಿಯನ್ನು ಗೆದ್ದಿದ್ದಾರೆ. ಅವರು 2007 ಮತ್ತು 2011 ರ ವಿಶ್ವಕಪ್‌ ಫೈನಲ್‌ನಲ್ಲಿ ಅಂಪೈರ್ ಆಗಿದ್ದರು. ಅಂಪೈರ್ ಆಗುವ ಮುನ್ನ ಅಲೀಮ್ ದಾರ್ ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲಿಯೂ ಆಡಿದ್ದರು. ದಾರ್ 1986-98 ರ ನಡುವೆ 17 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 18 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದರು. ಇದರ ನಂತರ ಅವರು ಅಂಪೈರಿಂಗ್ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.

ಸೋಲಿನ ಸರಪಳಿಯಲ್ಲಿ ಪಾಕ್ ತಂಡ

ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ದೊಡ್ಡ ಟೂರ್ನಿಗಳಲ್ಲಿ ತಂಡ ಸತತ ಸೋಲು ಕಾಣುತ್ತಿದೆ. ಈಗ ತವರಿನ ಪಂದ್ಯಗಳಲ್ಲೂ ಪಾಕಿಸ್ತಾನ ತಂಡ ಗೆಲ್ಲುತ್ತಿಲ್ಲ. ಪಾಕಿಸ್ತಾನ 1341 ದಿನಗಳಿಂದ ತವರಿನಲ್ಲಿ ಯಾವುದೇ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಇದರ ಜೊತೆಗೆ 2023 ರ ಏಕದಿನ ವಿಶ್ವಕಪ್ ಮತ್ತು 2024 ರ ಟಿ20 ವಿಶ್ವಕಪ್‌ನಲ್ಲಿಯೂ ಗುಂಪು ಹಂತದಿಂದ ಹೊರಬಿದ್ದಿತ್ತು. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಿರಂತರ ಬದಲಾವಣೆಗಳು ಕಾಣುತ್ತಿವೆಯಾದರೂ ತಂಡದ ಪ್ರದರ್ಶನದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Fri, 11 October 24

ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ಅಭಿಮಾನಿಗಳಿಂದ ಧ್ರುವ ಸರ್ಜಾಗೆ ಹೂಮಳೆ, ಸ್ಟೆಪ್ ಹಾಕಿದ ಧ್ರುವ
ಅಭಿಮಾನಿಗಳಿಂದ ಧ್ರುವ ಸರ್ಜಾಗೆ ಹೂಮಳೆ, ಸ್ಟೆಪ್ ಹಾಕಿದ ಧ್ರುವ
ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಲೋಕಸಭಾ ಚುನಾವಣೆ ಡಿಬ್ಯಾಕಲ್ ನಂತರ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಸುರೇಶ್
ಲೋಕಸಭಾ ಚುನಾವಣೆ ಡಿಬ್ಯಾಕಲ್ ನಂತರ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಸುರೇಶ್
‘ಮಾರ್ಟಿನ್’ ರಿಲೀಸ್ ವೇಳೆ ಗೋಪೂಜೆ ಮಾಡಿದ ಧ್ರುವ ಸರ್ಜಾ
‘ಮಾರ್ಟಿನ್’ ರಿಲೀಸ್ ವೇಳೆ ಗೋಪೂಜೆ ಮಾಡಿದ ಧ್ರುವ ಸರ್ಜಾ
ಶಿವಕುಮಾರ್​​ಗೆ ವಿಶ್ ಮಾಡಲು ಬೆಳಗ್ಗೆಯೇ ಮನೆ ಮುಂದೆ ಅಭಿಮಾನಿಗಳ ದಂಡು
ಶಿವಕುಮಾರ್​​ಗೆ ವಿಶ್ ಮಾಡಲು ಬೆಳಗ್ಗೆಯೇ ಮನೆ ಮುಂದೆ ಅಭಿಮಾನಿಗಳ ದಂಡು
ಸಿದ್ದರಾಮಯ್ಯ ವಾಪಸ್ಸು ಕೊಟ್ಟಿದ್ದು ಅವರ ಸ್ವಂತ ಸೈಟುಗಳಲ್ಲ: ಕುಮಾರಸ್ವಾಮಿ
ಸಿದ್ದರಾಮಯ್ಯ ವಾಪಸ್ಸು ಕೊಟ್ಟಿದ್ದು ಅವರ ಸ್ವಂತ ಸೈಟುಗಳಲ್ಲ: ಕುಮಾರಸ್ವಾಮಿ
ಪೂಜೆ ಮತ್ತು ಮಂಗಳಾರತಿ ನಂತರ ಕುಮಾರಸ್ವಾಮಿಗೆ ಪ್ರಧಾನ ಅರ್ಚಕರಿಂದ ಸನ್ಮಾನ
ಪೂಜೆ ಮತ್ತು ಮಂಗಳಾರತಿ ನಂತರ ಕುಮಾರಸ್ವಾಮಿಗೆ ಪ್ರಧಾನ ಅರ್ಚಕರಿಂದ ಸನ್ಮಾನ