Sachin Tendulkar: ಬರೋಬ್ಬರಿ 12 ವರ್ಷಗಳ ಬಳಿಕ ಕ್ರಿಕೆಟ್ ದೇವರಿಗೆ ಸಿಗ್ತು ಅವಿಸ್ಮರಣೀಯ ಉಡುಗೊರೆ..! ಏನದು ಗೊತ್ತಾ?

Sachin Tendulkar: 12 ವರ್ಷಗಳ ಹಿಂದೆ ಗ್ವಾಲಿಯರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಏಕದಿನ ಪಂದ್ಯ ಮುಗಿದ ನಂತರ, ನಾನು ತೆಂಡೂಲ್ಕರ್ ದ್ವಿಶತಕ ಸಿಡಿಸಿದ ಚೆಂಡನ್ನು ನೆನಪಿಗಾಗಿ ಉಳಿಸಿಕೊಂಡಿದ್ದೆ ಎಂದು ಕ್ಯುರೇಟರ್ ಚೌಹಾಣ್ ಹೇಳಿಕೊಂಡಿದ್ದಾರೆ.

Sachin Tendulkar: ಬರೋಬ್ಬರಿ 12 ವರ್ಷಗಳ ಬಳಿಕ ಕ್ರಿಕೆಟ್ ದೇವರಿಗೆ ಸಿಗ್ತು ಅವಿಸ್ಮರಣೀಯ ಉಡುಗೊರೆ..! ಏನದು ಗೊತ್ತಾ?
sachin tendulkar
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 19, 2022 | 11:04 PM

ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ಗ್ವಾಲಿಯರ್. ಈ ಎರಡು ಹೆಸರುಗಳನ್ನು ಒಟ್ಟಿಗೆ ತೆಗೆದುಕೊಂಡಾಗ ಕ್ರಿಕೆಟ್ ಪ್ರೇಮಿಗಳ ಮನಸ್ಸಿಗೆ ಮೊದಲು ಬರುವುದು ಅದೊಂದು ವಿಶ್ವದಾಖಲೆ. ಈ ನಗರದ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡಲ್ಕೂರ್ ಏಕದಿನ ಕ್ರಿಕೆಟ್​ನ ಇತಿಹಾಸದಲ್ಲಿ ಮೊದಲ ದ್ವಿಶತಕ ಸಿಡಿಸಿದ್ದರು. ಹಲವು ಮೊದಲುಗಳಿಗೆ ಹೆಸರಾಗಿದ್ದ ಸಚಿನ್​, ದ್ವಿಶತಕ ಸಿಡಿಸುವುದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದರು. ಈಗ ಆ ದ್ವಿಶತಕಕ್ಕೆ ಸಂಬಂಧಿಸಿದ ವಸ್ತುವೊಂದು ಬರೋಬ್ಬರಿ 12 ವರ್ಷಗಳ ಬಳಿಕ ಸಚಿನ್​ಗೆ ಉಡುಗೂರೆಯಾಗಿ ಬಂದಿದೆ. ಅಂದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಬಾರಿಸಿದ ಚೆಂಡನ್ನು ಅವರಿಗೆ ಇಂದೋರ್‌ನಲ್ಲಿ ಉಡುಗೊರೆಯಾಗಿ ನೀಡಲಾಗಿದೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ (MPCA) ಅಧಿಕಾರಿಯೊಬ್ಬರು ಸೋಮವಾರ ಈ ಮಾಹಿತಿ ನೀಡಿದ್ದು, ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಪಂದ್ಯಾವಳಿಯ ನಿಮಿತ್ತ ಇಂದೋರ್‌ನಲ್ಲಿರುವ ಸಚಿನ್​ಗೆ ಈ ಉಡುಗೂರೆ ದೊರೆತಿದೆ.

ಕ್ಯುರೇಟರ್ ಅವರಿಂದ ಉಡುಗೊರೆ

ಅಷ್ಟಕ್ಕೂ ಈ ಚೆಂಡನ್ನು ಉಡುಗೂರೆಯಾಗಿ ನೀಡಿದ್ದವರು ಎಂಪಿಸಿಎ ಮುಖ್ಯ ಕ್ಯುರೇಟರ್ ಸಮಂದರ್ ಸಿಂಗ್ ಚೌಹಾಣ್. ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಪಂದ್ಯಕ್ಕಾಗಿ ಇಂದೋರ್​ನಲ್ಲಿ ಸಚಿನ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಸಚಿನ್​ರನ್ನು ನೋಡಿದ ಕ್ಯುರೇಟರ್ ಸಮಂದರ್ ಸಿಂಗ್ ಚೌಹಾಣ್, ಸಚಿನ್ ದ್ವಿಶತಕ ಸಿಡಿಸಿದ ಚೆಂಡಿನ ಮೇಲೆ ಆಟೋಗ್ರಾಫ್ ನೀಡುವಂತೆ ಕೇಳಿಕೊಂಡಿದ್ದಾರೆ. ಇದು ನಾನು ದ್ವಿಶತಕ ಸಿಡಿಸಿದ ಚೆಂಡು ಎಂಬುದನ್ನು ತಿಳಿದ ಸಚಿನ್, ಆಶ್ಚರ್ಯಚಕಿತರಾಗಿ ಈ ಚೆಂಡನ್ನು ನನಗೆ ಉಡುಗೊರೆಯಾಗಿ ನೀಡಬಹುದೇ ಎಂದು ಸಮಂದರ್ ಸಿಂಗ್ ಚೌಹಾಣ್ ಬಳಿ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಕೂಡಲೇ ಒಪ್ಪಿದ ಕ್ಯುರೇಟರ್, ಆ ಚೆಂಡನ್ನು ನಿಜವಾದ ಮಾಲೀಕನಿಗೆ ಹಸ್ತಾಂತರಿಸಿದ್ದಾರೆ.

12 ವರ್ಷದಿಂದಲೂ ಚೆಂಡಿನ ಸಂರಕ್ಷಣೆ

12 ವರ್ಷಗಳ ಹಿಂದೆ ಗ್ವಾಲಿಯರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಏಕದಿನ ಪಂದ್ಯ ಮುಗಿದ ನಂತರ, ನಾನು ತೆಂಡೂಲ್ಕರ್ ದ್ವಿಶತಕ ಸಿಡಿಸಿದ ಚೆಂಡನ್ನು ನೆನಪಿಗಾಗಿ ಉಳಿಸಿಕೊಂಡಿದ್ದೆ ಎಂದು ಕ್ಯುರೇಟರ್ ಚೌಹಾಣ್ ಹೇಳಿಕೊಂಡಿದ್ದಾರೆ. ಪಿಚ್ ಸಿದ್ಧಪಡಿಸುವಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಕ್ಯುರೇಟರ್ ಚೌಹಾಣ್, ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ತೆಂಡೂಲ್ಕರ್ ದ್ವಿಶತಕ ಸಿಡಿಸಿದ ಪಿಚ್ ಕೂಡ ನಾನೇ ಸಿದ್ಧಪಡಿಸಿದ್ದೇ ಎಂದು ಹೇಳಿಕೊಂಡಿದ್ದಾರೆ.

24 ಫೆಬ್ರವರಿ 2010 ರಂದು ಗ್ವಾಲಿಯರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ, ತೆಂಡೂಲ್ಕರ್ 147 ಎಸೆತಗಳಲ್ಲಿ 25 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 200 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನ ಈ ಮಾದರಿಯಲ್ಲಿ ಆಟಗಾರನೊಬ್ಬ ದ್ವಿಶತಕ ಸಿಡಿಸಿದ್ದು ಇದೇ ಮೊದಲು. ಈ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 153 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಮತ್ತು ತೆಂಡೂಲ್ಕರ್ ಅದ್ಭುತ ಇನ್ನಿಂಗ್ಸ್​ನಿಂದಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

Published On - 6:58 pm, Mon, 19 September 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ