PSL: ಪಾಕ್ ಕ್ರಿಕೆಟ್​ ಲೀಗ್​ನಲ್ಲಿ ವಿಶೇಷ ಪ್ರಶಸ್ತಿ; ಮ್ಯಾಚ್ ವಿನ್ನರ್​ಗಳಿಗೆ ಫ್ಲಾಟ್, ಐಫೋನ್​, ಶೂ ಗಿಫ್ಟ್..!

PSL: 34 ಪಂದ್ಯಗಳ ಈ ಟೂರ್ನಿಯಲ್ಲಿ ಇದುವರೆಗೆ 20 ಪಂದ್ಯಗಳು ನಡೆದಿವೆ. ಇದರಲ್ಲಿ ಶಾಹೀನ್ ಶಾ ಆಫ್ರಿದಿ ನೇತೃತ್ವದ ಲಾಹೋರ್ ಖಲಂದರ್ಸ್ ತಂಡ ಪಾಕಿಸ್ತಾನ ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 1 ರಲ್ಲಿ ಸೋತು, 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

PSL: ಪಾಕ್ ಕ್ರಿಕೆಟ್​ ಲೀಗ್​ನಲ್ಲಿ ವಿಶೇಷ ಪ್ರಶಸ್ತಿ; ಮ್ಯಾಚ್ ವಿನ್ನರ್​ಗಳಿಗೆ ಫ್ಲಾಟ್, ಐಫೋನ್​, ಶೂ ಗಿಫ್ಟ್..!
ಪಾಕ್ ಕ್ರಿಕೆಟ್​ ಲೀಗ್​ನಲ್ಲಿ ವಿಶೇಷ ಪ್ರಶಸ್ತಿ
Follow us
|

Updated on:Mar 04, 2023 | 5:35 PM

ದೇಶ ವಿದೇಶಗಳಲ್ಲಿ ನಡೆಯುವ ಟಿ20 ಲೀಗ್​ನಲ್ಲಿ ಹಣದ ಮಳೆಯಾಗುವುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಈ ಚುಟುಕು ಸಮರದಲ್ಲಿ ಇಷ್ಟೊಂದು ಲಾಭವಿರುವುದಿಂದಲೇ ಸಾಕಷ್ಟು ದೇಶಗಳು ಈ ಟೂರ್ನಿಗಳನ್ನು ಆಯೋಜಿಸುತ್ತಿವೆ. ಇದರೊಂದಿಗೆ ಈ ಟೂರ್ನಿಯಲ್ಲಿ ಮಿಂಚುವ ಆಟಗಾರರ ರಾತ್ರೋ ರಾತ್ರಿ ಕೋಟ್ಯಾದಿಪತಿಯಾಗುವುದನ್ನು ನಾವು ನೋಡಿದ್ದೇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿಕೊಟ್ಟ ಆಟಗಾರನಿಗೆ ಫ್ರಾಂಚೈಸಿಯೂ ಫ್ಲಾಟ್, ಹಾಗೂ ಐಫೋನ್ (IPhone) ಮೊಬೈಲ್​ ಅನ್ನು ಉಡುಗೊರೆಯಾಗಿ ನೀಡಿದೆ. ವಾಸ್ತವವಾಗಿ ಈ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ. ಪ್ರಸ್ತುತ ಪಾಕಿಸ್ತಾನದಲ್ಲಿ ಪಿಎಸ್ಎಲ್​ನ (PSL) ಎಂಟನೇ ಆವೃತ್ತಿ ನಡೆಯುತ್ತಿದ್ದು, ಲಾಹೋರ್ ಖಲಂದರ್ಸ್ ತಂಡದ (Lahore Qalandars) ಪರ ಅದ್ಭುತ ಪ್ರದರ್ಶನ ನೀಡಿದ ಸಿಕಂದರ್ ರಜಾಗೆ (Sikandar Raza) ಫ್ಲಾಟ್ ಉಡುಗೊರೆಯಾಗಿ ಸಿಕ್ಕಿದ್ದರೆ, ರಶೀದ್ ಖಾನ್​ಗೆ (Rashid Khan) ಐಫೋನ್​ ಉಡುಗೊರೆಯಾಗಿ ಸಿಕ್ಕಿದೆ.

34 ಪಂದ್ಯಗಳ ಈ ಟೂರ್ನಿಯಲ್ಲಿ ಇದುವರೆಗೆ 20 ಪಂದ್ಯಗಳು ನಡೆದಿವೆ. ಇದರಲ್ಲಿ ಶಾಹೀನ್ ಶಾ ಆಫ್ರಿದಿ ನೇತೃತ್ವದ ಲಾಹೋರ್ ಖಲಂದರ್ಸ್ ತಂಡ ಪಾಕಿಸ್ತಾನ ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 1 ರಲ್ಲಿ ಸೋತು, 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಖಲಂದರ್ ಪಟ್ಟಣದಲ್ಲಿ ಒಂದು ಫ್ಲಾಟ್

ಲಾಹೋರ್ ಖಲಂದರ್ಸ್ ತಂಡ ಮಾರ್ಚ್ 2 ರಂದು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಎದುರಿಸಿತ್ತು. ಅಂತಿಮವಾಗಿ ಲಾಹೋರ್ ತಂಡ ಈ ಪಂದ್ಯವನ್ನು 17 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನಲ್ಲಿ ಜಿಂಬಾಬ್ವೆಯ ಸ್ಟಾರ್ ಕ್ರಿಕೆಟಿಗ ಸಿಕಂದರ್ ರಾಜಾ 34 ಎಸೆತಗಳಲ್ಲಿ 71 ರನ್ ಗಳಿಸಿ ಅಜೇಯ ಇನ್ನಿಂಗ್ಸ್‌ ಆಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಹೀಗಾಗಿ ರಜಾ ಆಟಕ್ಕೆ ಮನಸೋತ ಫ್ರಾಂಚೈಸ್, ಅವರಿಗೆ ಖಲಂದರ್ ಪಟ್ಟಣದಲ್ಲಿ ಒಂದು ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದೆ.

WPL 2023: ಅರ್ಧ ಗಂಟೆ ತಡವಾಗಿ ಆರಂಭವಾಗಲಿದೆ ಮೊದಲ ಪಂದ್ಯ! ಕಾರಣವೇನು ಗೊತ್ತಾ?

ಒಂದು ವರ್ಷದವರೆಗೆ ಉಚಿತ ಶೂ ಗಿಫ್ಟ್

ಹಾಗೆಯೇ ತಂಡದ ಪರ ಮಿಂಚಿದ ಮತ್ತೊಬ್ಬ ಆಟಗಾರ ರಶೀದ್ ಖಾನ್‌ಗೆ ಐಫೋನ್ 14 ಅನ್ನು ಗಿಫ್ಟ್ ಆಗಿ ನೀಡಿದೆ. ಮತ್ತೊಂದೆಡೆ, ಪಾಕ್ ವೇಗಿ ಹ್ಯಾರಿಸ್ ರೂಫ್‌ಗೆ ಒಂದು ವರ್ಷದವರೆಗೆ ಉಚಿತ ಶೂಗಳನ್ನು ಉಡುಗೊರೆಯಾಗಿ ನೀಡುವುದಾಗಿ ಫ್ರಾಂಚೈಸ್ ಹೇಳಿಕೊಂಡಿದೆ. ಈ ಹಿಂದೆಯೂ ಪಾಕ್ ಲೀಗ್​ನಲ್ಲಿ ಆಡುವ ಹಲವು ಕ್ರಿಕೆಟಿಗರು ವಿವಿಧ ಪಿಎಸ್‌ಎಲ್ ಪಂದ್ಯಗಳಲ್ಲಿ ಇದೇ ರೀತಿಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಫಖರ್ ಜಮಾನ್ ಕೂಡ ಈ ಹಿಂದೆ ಐಫೋನ್ 14 ಗೆದ್ದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Sat, 4 March 23