RCB vs RR: ಆರ್‌ಸಿಬಿ ವಿರುದ್ಧ ಸೋತ ದುಃಖದಲ್ಲಿ ಎಣ್ಣೆ ಅಂಗಡಿಗೆ ಹೋದ ರಾಜಸ್ಥಾನದ ಸಿಇಒ: ವೈರಲ್ ವಿಡಿಯೋ

Jake Lush Mccrum viral video: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಐಪಿಎಲ್ 2025ರ ಪಂದ್ಯ ನಡೆಯಿತು. ಇದರಲ್ಲಿ ಆರ್ಆರ್ ಸೋಲು ಕಂಡಿತು. ಈ ಸೋಲಿನ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಸಿಇಒ ಜೇಕ್ ಲಶ್ ಮೆಕ್ರಮ್ ಲಿಕ್ಕರ್ ಶಾಪ್ಗೆ ಭೇಟಿ ನೀಡುತ್ತಿರುವುದು ಕಂಡುಬಂದಿದ್ದು, ಇದರ ವಿಡಿಯೋ ವೈರಲ್ ಆಗಿದೆ.

RCB vs RR: ಆರ್‌ಸಿಬಿ ವಿರುದ್ಧ ಸೋತ ದುಃಖದಲ್ಲಿ ಎಣ್ಣೆ ಅಂಗಡಿಗೆ ಹೋದ ರಾಜಸ್ಥಾನದ ಸಿಇಒ: ವೈರಲ್ ವಿಡಿಯೋ
Rajastan Royals Ceo Jake Lush Mccrum

Updated on: Apr 25, 2025 | 8:08 PM

ಬೆಂಗಳೂರು (ಏ. 25): ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಥಿತಿ ತೀರಾ ಹದಗೆಟ್ಟಿದೆ. ಗುರುವಾರ ರಾತ್ರಿ ಆರ್​ಆರ್​ ತಂಡವು ಮತ್ತೊಂದು ಸೋಲನ್ನು ಎದುರಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru vs Rajasthan Royals) ತಂಡವು ರಾಜಸ್ಥಾನವನ್ನು 11 ರನ್‌ಗಳಿಂದ ಸೋಲಿಸಿತು. ಈ ಸೋಲಿನ ನಂತರ, ರಾಜಸ್ಥಾನ ರಾಯಲ್ಸ್ ತಂಡದ ಸಿಇಒ ಜೇಕ್ ಲಶ್ ಮೆಕ್ರಮ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಅವರು ಬೆಂಗಳೂರಿನ ಪ್ರಸಿದ್ಧ ಲಿಕ್ಕರ್ ಶಾಪ್​ಗೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್:

ರಾಜಸ್ಥಾನ್ ವಿರುದ್ಧದ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇದು ಈ ಋತುವಿನಲ್ಲಿ ಅವರ ಆರನೇ ಗೆಲುವಾಗಿದೆ. ಅತ್ತ ರಾಜಸ್ಥಾನ್ ಆಡಿದ 9 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದು ಏಳರಲ್ಲಿ ಸೋತು ಎಂಟನೇ ಸ್ಥಾನದಲ್ಲಿದೆ, ಬಹುತೇಕ ಪ್ಲೇ ಆಫ್​ನಿಂದ ಹೊರಬಿದ್ದಿದೆ. ಆರ್​ಸಿಬಿ ವಿರುದ್ಧ ಗೆದ್ದಿದ್ದರೆ ಆರ್​ಆರ್ ತಂಡಕ್ಕೆ ಪ್ಲೇ ಆಫ್​ಗೇರುವ ಕನಸು ಚೂರಾದರು ಇರುತ್ತಿತ್ತು. ಆದರೀಗ ಆ ಆಸೆ ಕೂಡ ನುಚ್ಚುನೂರಾಗಿದೆ. ತಂಡದ ಸೋಲಿನ ಬೆನ್ನಲ್ಲೇ ರಾಜಸ್ಥಾನದ ಸಿಇಒ ಮೆಕ್ರಮ್ ಚಿನ್ನಸ್ವಾಮಿ ಸ್ಟೇಡಿಯಂನ ಪಕ್ಕದಲ್ಲೇ ಇರುವ ಮದ್ಯದಂಗಡಿ ‘ಟಾನಿಕ್’ ಕಡೆಗೆ ಹೋಗಿದ್ದಾರೆ. ಆರ್‌ಸಿಬಿ ಬೆಂಬಲಿಗರೊಬ್ಬರು ಇದರ ವಿಡಿಯೋವನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ
ಟಾಸ್ ಗೆದ್ದ ಸಿಎಸ್​ಕೆ: ಧೋನಿ ತಂಡದಲ್ಲಿ ಮಹತ್ವದ ಬದಲಾವಣೆ
ಕೆಕೆಆರ್ ತಂಡಕ್ಕೆ ಕಾಶ್ಮೀರಿ ಘಾತುಕ ವೇಗಿಯ ಆಗಮನ
ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ನಿಮಗೆ ನಾಚಿಕೆಯಾಗಬೇಕು; ಕನೇರಿಯಾ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ

ಮೆಕ್ರಮ್ ಬೆಂಗಳೂರಿನ ಪ್ರಸಿದ್ಧ ಮದ್ಯದಂಗಡಿ ‘ಟಾನಿಕ್’ ಕಡೆಗೆ ಹೋಗುತ್ತಿರುವ ವಿಡಿಯೋ:

 

ಈ ಪಂದ್ಯದಲ್ಲಿ 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡವು 20 ಓವರ್​ಗೆ 9 ವಿಕೆಟ್ ನಷ್ಟಕ್ಕೆ 194 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಯಶಸ್ವಿ ಜೈಸ್ವಾಲ್ (19 ಎಸೆತಗಳಲ್ಲಿ 49) ಮತ್ತು ಧ್ರುವ್ ಜುರೆಲ್ (34 ಎಸೆತಗಳಲ್ಲಿ 47) ಗೆಲುವಿಗಾಗಿ ಕಠಿಣ ಪರಿಶ್ರಮ ಪಟ್ಟರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ ರಾಜಸ್ಥಾನ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿಯಿತು. ತಂಡ ಒಂಬತ್ತು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದೆ. ಇದು ಐಪಿಎಲ್ ಇತಿಹಾಸದಲ್ಲಿ ಆರ್‌ಆರ್‌ನ ಅತಿ ದೀರ್ಘ ಸೋಲುಗಳ ಸರಣಿಯಾಗಿದೆ. ಇದಕ್ಕೂ ಮೊದಲು 2009 ರಲ್ಲಿಯೂ ತಂಡವು ಸತತ ಐದು ಪಂದ್ಯಗಳನ್ನು ಸೋತಿತ್ತು.

CSK vs SRH, IPL 2025: ಟಾಸ್ ಗೆದ್ದ ಎಸ್​ಆರ್​ಹೆಚ್: ಧೋನಿ ತಂಡದಲ್ಲಿ ಮಹತ್ವದ ಬದಲಾವಣೆ

ಆರ್‌ಸಿಬಿಗೆ ಭರ್ಜರಿ ಗೆಲುವು:

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ವಿರಾಟ್ ಕೊಹ್ಲಿ (42 ಎಸೆತಗಳಲ್ಲಿ 70) ಮತ್ತು ದೇವದತ್ ಪಡಿಕ್ಕಲ್ (27 ಎಸೆತಗಳಲ್ಲಿ 50) ನಡುವೆ 95 ರನ್‌ಗಳ ಜೊತೆಯಾಟ ಮೂಡಿಬಂತು. ಕೊಹ್ಲಿ 9 ಪಂದ್ಯಗಳಲ್ಲಿ 392 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನ ತಲುಪಿದ್ದಾರೆ. ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ (417 ರನ್‌ಗಳು) ಗಿಂತ ಹಿಂದಿದ್ದಾರೆ. ಆರ್​ಆರ್​ ಪರ ಜೈಸ್ವಾಲ್ ಮತ್ತು 14 ವರ್ಷದ ವೈಭವ್ ಸೂರ್ಯವಂಶಿ ನಡುವೆ 52 ರನ್‌ಗಳ ಜೊತೆಯಾಟ ಮೂಡಿದ್ದು ಬಿಟ್ಟರೆ ರಿಯಾನ್ ಪರಾಗ್ ಮತ್ತು ಜುರೆಲ್ ಕೆಲವು ಉತ್ತಮ ಹೊಡೆತಗಳನ್ನು ಆಡಿ ಗಮನ ಸೆಳೆದರು. ಆದರೆ ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳು ಮತ್ತು ಜೋಶ್ ಹ್ಯಾಜಲ್‌ವುಡ್ ಅಂತಿಮ ಹಂತದಲ್ಲಿ ಅದ್ಭುತ ಬೌಲಿಂಗ್ ಮಾಡಿ ಒಟ್ಟು ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರಿಂದ ರಾಜಸ್ಥಾನ ಸೋಲು ಕಾಣಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ