Ranji Trophy 2023: ಬಲಿಷ್ಠ ತಂಡಗಳ ನಡುವೆ ನಾಳೆಯಿಂದ ರಣಜಿ ಟ್ರೋಫಿ ಫೈನಲ್ ಫೈಟ್
Ranji Trophy 2022-23: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಫೈಟ್ನಲ್ಲಿ ಸೌರಾಷ್ಟ್ರ ಹಾಗೂ ಬಂಗಾಳ ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ.

Ranji Trophy 2022-23: ರಣಜಿ ಟೂರ್ನಿಯ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಫೆಬ್ರವರಿ 16 ರಿಂದ ಶುರುವಾಗಲಿರುವ ಅಂತಿಮ ಹಣಾಹಣಿಯಲ್ಲಿ ಬಂಗಾಳ ಹಾಗೂ ಸೌರಾಷ್ಟ್ರ (Bengal vs Saurashtra) ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಸೆಮಿಫೈನಲ್ನಲ್ಲಿ ಮಧ್ಯಪ್ರದೇಶ್ ತಂಡವನ್ನು ಬರೋಬ್ಬರಿ 306 ರನ್ಗಳಿಂದ ಸೋಲಿಸಿ ಬಂಗಾಳ ತಂಡವು ಫೈನಲ್ ಪ್ರವೇಶಿಸಿತು. ಹಾಗೆಯೇ 2ನೇ ಸೆಮಿಫೈನಲ್ನಲ್ಲಿ ಕರ್ನಾಟಕ ತಂಡದ ವಿರುದ್ಧ ಸೌರಾಷ್ಟ್ರ ತಂಡ 4 ವಿಕೆಟ್ಗಳಿಂದ ಜಯ ಸಾಧಿಸಿ ಅಂತಿಮ ಸುತ್ತಿಗೆ ಎಂಟ್ರಿಕೊಟ್ಟಿತು.
ಇದೀಗ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಫೈಟ್ನಲ್ಲಿ ಸೌರಾಷ್ಟ್ರ ಹಾಗೂ ಬಂಗಾಳ ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ. ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ಈ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಇತ್ತ ಅಭಿಮನ್ಯು ಈಶ್ವರನ್, ಮನೋಜ್ ತಿವಾರಿ, ಶಹಬಾಝ್ ಅಹ್ಮದ್, ಸಂದೀಪ್ ಕುಮಾರ್ ಬಂಗಾಳ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದರೆ, ಅತ್ತ ಸೌರಾಷ್ಟ್ರ ತಂಡದಲ್ಲಿ ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ, ಪ್ರೇರಕ್ ಮಂಕಡ್ನಂತಹ ಸ್ಟಾರ್ ಆಟಗಾರರಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸೌರಾಷ್ಟ್ರ ತಂಡದಲ್ಲಿ ಜಯದೇವ್ ಉನಾದ್ಕಟ್, ಚೇತನ್ ಸಕರಿಯಾ, ಕುಶಾಂಗ್ ಪಟೇಲ್ನಂತಹ ಅತ್ಯುತ್ತಮ ಬೌಲರ್ಗಳ ಲೈನಪ್ ಇದೆ. ಹಾಗೆಯೇ ಬಂಗಾಳ ಪರ ಮುಖೇಶ್ ಕುಮಾರ್, ಶಹಬಾಝ್ ಅಹ್ಮದ್, ಆಕಾಶ್ ದೀಪ್ನಂತಹ ಅತ್ಯುತ್ತಮ ಬೌಲರ್ಗಳಿದ್ದಾರೆ. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳು ಸಮಬಲ ಹೊಂದಿದೆ ಎನ್ನಬಹುದು. ಹೀಗಾಗಿ ಈ ಬಾರಿ ರಣಜಿ ಟ್ರೋಫಿಯನ್ನು ಯಾರು ಮುಡಿಗೇರಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆ ಮಾಡಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ ಹಾಟ್ಸ್ಟಾರ್ನಲ್ಲೂ ಲೈವ್ ಪ್ರಸಾರ ಇರಲಿದೆ.
ಬಂಗಾಳ ತಂಡ: ಕರಣ್ ಲಾಲ್, ಅಭಿಮನ್ಯು ಈಶ್ವರನ್, ಸುದೀಪ್ ಕುಮಾರ್ ಘರಾಮಿ, ಅನುಸ್ತುಪ್ ಮಜುಂದಾರ್, ಮನೋಜ್ ತಿವಾರಿ(ನಾಯಕ), ಶಹಬಾಝ್ ಅಹ್ಮದ್, ಅಭಿಷೇಕ್ ಪೊರೆಲ್(ವಿಕೆಟ್ ಕೀಪರ್), ಪ್ರದೀಪ್ತ ಪ್ರಮಾಣಿಕ್, ಆಕಾಶ್ ದೀಪ್, ಮುಖೇಶ್ ಕುಮಾರ್, ಇಶಾನ್ ಪೊರೆಲ್, ರಿಟಿಕ್ ಚಟರ್ಜಿ, ರವಿಕಾಂತ್ ಸಿಂಗ್, ಕೌಶಿಕ್ ಘೋಷ್, ಸಯಾನ್ ಮೊಂಡಲ್, ಅಭಿಷೇಕ್ ದಾಸ್, ಅಂಕಿತ್ ಮಿಶ್ರಾ, ಕಾಜಿ ಸೈಫಿ
ಸೌರಾಷ್ಟ್ರ ತಂಡ: ಹಾರ್ವಿಕ್ ದೇಸಾಯಿ(ವಿಕೆಟ್ ಕೀಪರ್), ಸ್ನೆಲ್ಲ್ ಪಟೇಲ್, ವಿಶ್ವರಾಜ್ ಜಡೇಜಾ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ (ನಾಯಕ), ಚಿರಾಗ್ ಜಾನಿ, ಪ್ರೇರಕ್ ಮಂಕಡ್, ಪಾರ್ಥ್ ಭುತ್, ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ, ಕುಶಾಂಗ್ ಪಟೇಲ್, ಸಮರ್ಥ್ ವ್ಯಾಸ್, ತರಂಗ್ ಗೊಟಮ್ಹೆಲ್, ತರಂಗ್ ಗೊಟಮ್ಹೆಲ್ , ಜೈ ಗೋಹಿಲ್, ನವನೀತ್ ವೋರಾ, ಯುವರಾಜ್‌ಸಿಂಹ ದೋಡಿಯಾ.
Published On - 5:16 pm, Wed, 15 February 23




