1 ಸೀಸನ್‌ನಲ್ಲಿ 1500 ಪಂದ್ಯಗಳು: ದೇಶೀಯ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಮಹಿಳೆಯರ ಸೀನಿಯರ್ ಇಂಟರ್​ ಝೋನಲ್​ ಪಂದ್ಯಗಳನ್ನು ಕೂಡ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಮಹಿಳಾ ಟಿ20 ವಿಶ್ವಕಪ್ (Womens T20 World Cup ) ಬಳಿಕ ಮಹಿಳೆಯರ ಇಂಟರ್‌ಜೋನಲ್ ಟಿ20 ಮತ್ತು ಟಿ20 ಚಾಲೆಂಜರ್ ಟೂರ್ನಿಯನ್ನು ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ.

1 ಸೀಸನ್‌ನಲ್ಲಿ 1500 ಪಂದ್ಯಗಳು: ದೇಶೀಯ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 08, 2022 | 7:23 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ ದೇಶೀಯ ಕ್ರಿಕೆಟ್ ಟೂರ್ನಿಯ (Cricket) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮುಂಬರುವ 2022-23ರ ದೇಶೀಯ ಸೀಸನ್​ನಲ್ಲಿ ರಣಜಿ ಟೂರ್ನಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಸೇರಿದಂತೆ ಎಲ್ಲಾ ಟೂರ್ನಿಗಳನ್ನು ಆಯೋಜಿಸುವುದಾಗಿ ಬಿಸಿಸಿಐ ತಿಳಿಸಿದೆ. ಅದರಂತೆ ಒಂದು ಸೀಸನ್​ನಲ್ಲಿ ದೇಶೀಯ ಅಂಗಳದಲ್ಲಿ ಒಟ್ಟು 1500 ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ರೂಪುರೇಷೆ ಸಿದ್ದಪಡಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬಿಸಿಸಿಐ ದೇಶೀಯ ಅಂಗಳದಲ್ಲಿ ಸಂಪೂರ್ಣ ಟೂರ್ನಿ ಆಯೋಜಿಸಿರಲಿಲ್ಲ. ಅದರಲ್ಲೂ ಕಿರಿಯರ ಕ್ರಿಕೆಟ್​ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಈ ಬಾರಿ ದೇಶೀಯ ಸೀಸನ್ ಸೆಪ್ಟೆಂಬರ್ 2022 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 2023 ರವರೆಗೆ ನಡೆಯಲಿದೆ. ಈ ವೇಳೆ ಸಂಪೂರ್ಣ ಟೂರ್ನಿ ಜರುಗಲಿದೆ ಎಂದು ಬಿಸಿಸಿಐ ಪ್ರಕಟಣೆಯ ಮೂಲಕ ತಿಳಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಭೀತಿಯ ನಡುವೆ ರಣಜಿ ಟೂರ್ನಿ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಯನ್ನು ಮಾತ್ರ ಆಯೋಜಿಸಲಾಗಿತ್ತು. ಅಲ್ಲದೆ ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿಯನ್ನು ನಡೆಸಿರಲಿಲ್ಲ. ಈ ಸೀಸನ್​ ಮೂಲಕ ಈ ಎರಡೂ ಟೂರ್ನಿಗಳು ಮತ್ತೆ ಶುರುವಾಗಲಿದೆ.

ದುಲೀಪ್ ಟ್ರೋಫಿ ಸೆಪ್ಟೆಂಬರ್ 8ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಈ ಟೂರ್ನಿ ಆರು ವಲಯಗಳ ತಂಡಗಳ ನಡುವೆ ನಡೆಯಲಿದೆ. ಇದರಲ್ಲಿ ಉತ್ತರ, ದಕ್ಷಿಣ, ಮಧ್ಯ, ಪಶ್ಚಿಮ, ಪೂರ್ವ ಮತ್ತು ಈಶಾನ್ಯ ವಲಯಗಳು ಭಾಗವಹಿಸಲಿದೆ. ಇನ್ನು ದುಲೀಪ್ ಟ್ರೋಫಿಯನ್ನು ನಾಕ್ ಔಟ್ ಆಧಾರದ ಮೇಲೆ ಆಯೋಜಿಸಲಾಗುತ್ತದೆ.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದಾದ ಬಳಿಕ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ನಂತರ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯನ್ನು ನಡೆಸಲಾಗುತ್ತದೆ. ಈ ಎರಡೂ ಸೀಮಿತ ಓವರ್‌ಗಳ ಪಂದ್ಯಾವಳಿಗಳಲ್ಲಿ ಒಟ್ಟು 38 ತಂಡಗಳು ಭಾಗವಹಿಸಲಿದ್ದು, ಇದನ್ನು ತಲಾ ಎಂಟು ತಂಡಗಳ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಗೆಯೇ ಏಳು ತಂಡಗಳ ಎರಡು ಗುಂಪುಗಳನ್ನು ಕೂಡ ಈ ಟೂರ್ನಿಯಲ್ಲಿ ಇರಲಿದೆ.

ಇನ್ನು ರಣಜಿ ಟ್ರೋಫಿಯ ಸ್ವರೂಪವನ್ನೂ ಸಹ ಬದಲಾಯಿಸಲಾಗಿದೆ. ಇನ್ಮುಂದೆ ಇದರಲ್ಲಿ ಎರಡು ವಿಭಾಗಗಳಿರುತ್ತವೆ. ಮೊದಲ ವಿಭಾಗದಲ್ಲಿ ಎಲೈಟ್ ತಂಡಗಳಿದ್ದರೆ, ಎರಡನೇ ವಿಭಾಗದಲ್ಲಿ ಪ್ಲೇಟ್ ತಂಡಗಳಿರುತ್ತವೆ. ಎಲೈಟ್ ಗುಂಪಿನಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿದ್ದು, ತಲಾ ಎಂಟು ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಇನ್ನು ಹೋಮ್ ಅ್ಯಂಡ್ ಅವೇ ಮಾದರಿಯಲ್ಲಿ ಈ ಪಂದ್ಯಗಳನ್ನು ನಡೆಸಲಾಗುತ್ತದೆ. ಅಂದರೆ ಪ್ರತಿ ತಂಡವು ಲೀಗ್ ಹಂತದಲ್ಲಿ ಏಳು ಪಂದ್ಯಗಳನ್ನು ತವರಿನ ಮೈದಾನದಲ್ಲಿ ಆಡಲಿದೆ. ಉಳಿದ ಪಂದ್ಯಗಳ ಎದುರಾಳಿಗಳ ಮೈದಾನದಲ್ಲಿ ಆಡಬೇಕಾಗುತ್ತದೆ. ಇಲ್ಲಿ ಪ್ರತಿ ಗ್ರೂಪ್​ನಲ್ಲಿ ಅತ್ಯಧಿಕ ಪಾಯಿಂಟ್ ಕಲೆಹಾಕುವ ತಂಡಗಳು ಅಗ್ರ 2 ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಈ ಪಂದ್ಯಗಳು ಡಿಸೆಂಬರ್ 13 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 20 ರಂದು ಮುಕ್ತಾಯಗೊಳ್ಳುತ್ತದೆ.

ಇನ್ನು ಮಹಿಳೆಯರ ಸೀನಿಯರ್ ಇಂಟರ್​ ಝೋನಲ್​ ಪಂದ್ಯಗಳನ್ನು ಕೂಡ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಮಹಿಳಾ ಟಿ20 ವಿಶ್ವಕಪ್ (Womens T20 World Cup ) ಬಳಿಕ ಮಹಿಳೆಯರ ಇಂಟರ್‌ಜೋನಲ್ ಟಿ20 ಪಂದ್ಯಗಳನ್ನು ಮತ್ತು ಟಿ20 ಚಾಲೆಂಜರ್ ಟೂರ್ನಿಯನ್ನು ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ಮರೆಯಾಗಿದ್ದ ದೇಶೀಯ ಅಂಗಳದ ಕ್ರಿಕೆಟ್ ಟೂರ್ನಿಗಳಿಗೆ ಮತ್ತೆ ಚಾಲನೆ ನೀಡಲು ಬಿಸಿಸಿಐ ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡಿದೆ.