250 ರನ್ ಬಾರಿಸಿದ ರಾಣ: ಎದುರಾಳಿ ತಂಡ 170 ರನ್ಗೆ ಆಲೌಟ್..!
Ranji Trophy 2024: ವಿಶೇಷ ಎಂದರೆ ಈ ಪಂದ್ಯದಲ್ಲಿ 2 ಇನಿಂಗ್ಸ್ಗಳಿಂದ ಮಣಿಪುರ ತಂಡ ಕಲೆಹಾಕಿದ್ದು ಕೇವಲ 170 ರನ್ಗಳು ಮಾತ್ರ. ಅದೇ ಅತ್ತ ಹರ್ಯಾಣ ಪರ ಹಿಮಾಂಶು ರಾಣ ಏಕಾಂಗಿಯಾಗಿ 250 ರನ್ ಪೇರಿಸಿದ್ದರು.
ಅಹಮದಾಬಾದ್ನಲ್ಲಿ ನಡೆದ ರಣಜಿ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಹರ್ಯಾಣ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪುರ ತಂಡವು ಹರ್ಯಾಣವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಹರ್ಯಾಣ ತಂಡಕ್ಕೆ ಅಂಕಿತ್ ಕುಮಾರ್ (56) ಉತ್ತಮ ಆರಂಭ ಒದಗಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿಮಾಂಶು ರಾಣ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮಣಿಪುರ ಬೌಲರ್ಗಳನ್ನು ಬೆಂಡೆತ್ತಿ ಅಬ್ಬರಿಸಿದ ರಾಣ ಮೊದಲ ದಿನದಾಟದಲ್ಲೇ ದ್ವಿಶತಕ ಪೂರೈಸಿದರು.
ಇನ್ನೊಂದೆಡೆ ನಿಶಾಂತ್ ಸಿಂಧು (119) ಕೂಡ ಶತಕ ಬಾರಿಸಿ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ 313 ಎಸೆತಗಳನ್ನು ಎದುರಿಸಿದ ಹಿಮಾಂಶು ರಾಣ 33 ಫೋರ್ಗಳೊಂದಿಗೆ ಅಜೇಯ 250 ರನ್ ಬಾರಿಸಿದರು. ಈ ಭರ್ಜರಿ ದ್ವಿಶತಕದ ನೆರವಿನಿಂದ ಹರ್ಯಾಣ ತಂಡವು 3 ವಿಕೆಟ್ ಕಳೆದುಕೊಂಡು 508 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು.
Himanshu Rana scored 250* in 313 balls with 33 fours for Haryana against Manipur in the Ranji Trophy to help Haryana register a classical win. pic.twitter.com/BoX7gK9Fb2
— Mufaddal Vohra (@mufaddal_vohra) January 21, 2024
ಇದಾದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಮಣಿಪುರ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಹರ್ಯಾಣ ಬೌಲರ್ಗಳು ಯಶಸ್ವಿಯಾಗಿದ್ದರು. 42 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಮಣಿಪುರ ತಂಡವು ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಆಲೌಟ್ ಆಗಿತ್ತು. ಅಂದರೆ ಮೊದಲ ಇನಿಂಗ್ಸ್ ಅನ್ನು ಕೇವಲ 77 ರನ್ಗಳಿಗೆ ಅಂತ್ಯಗೊಳಿಸಿತ್ತು.
ಇದರ ಬೆನ್ನಲ್ಲೇ ಫಾಲೋಆನ್ ಹೇರಿದ ಹರ್ಯಾಣ ತಂಡವು ಮಣಿಪುರ ತಂಡವನ್ನು ಮತ್ತೆ ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಮಣಿಪುರ ತಂಡವು ಈ ಬಾರಿ ಕೇವಲ 29 ರನ್ ಕಲೆಹಾಕುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ ನಾಯಕ ಕಿಶನ್ಗ್ಬಮ್ 70 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ಒಂದು ವಿಕೆಟ್ ಸಿಗುತ್ತಿದ್ದಂತೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹರ್ಯಾಣ ಬೌಲರ್ಗಳು ಮಣಿಪುರ ತಂಡವನ್ನು ಕೇವಲ 93 ರನ್ಗಳಿಗೆ ಆಲೌಟ್ ಮಾಡಿತು.
ಹಿಮಾಂಶು vs ಮಣಿಪುರ:
ವಿಶೇಷ ಎಂದರೆ ಈ ಪಂದ್ಯದಲ್ಲಿ 2 ಇನಿಂಗ್ಸ್ಗಳಿಂದ ಮಣಿಪುರ ತಂಡ ಕಲೆಹಾಕಿದ್ದು ಕೇವಲ 170 ರನ್ಗಳು ಮಾತ್ರ. ಅದೇ ಅತ್ತ ಹರ್ಯಾಣ ಪರ ಹಿಮಾಂಶು ರಾಣ ಏಕಾಂಗಿಯಾಗಿ 250 ರನ್ ಪೇರಿಸಿದ್ದರು. ಹಾಗೆಯೇ 2ನೇ ದಿನದಾಟದಲ್ಲೇ ಮಣಿಪುರ ತಂಡದ 20 ವಿಕೆಟ್ಗಳನ್ನು ಕಬಳಿಸುವ ಮೂಲಕ ಹರ್ಯಾಣ ತಂಡವು 338 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಹರ್ಯಾಣ (ಪ್ಲೇಯಿಂಗ್ XI): ಮಯಾಂಕ್ ಶಾಂಡಿಲ್ಯ, ಅಂಕಿತ್ ಕುಮಾರ್, ಹಿಮಾಂಶು ರಾಣ, ಅನ್ಶುಲ್ ಕಾಂಬೋಜ್, ನಿಶಾಂತ್ ಸಿಂಧು, ರೋಹಿತ್ ಪರ್ಮೋದ್ ಶರ್ಮಾ, ರಾಹುಲ್ ತೆವಾಟಿಯಾ, ಅಶೋಕ್ ಮೆನಾರಿಯಾ (ನಾಯಕ), ಜಯಂತ್ ಯಾದವ್, ಹರ್ಷಲ್ ಪಟೇಲ್, ಸುಮಿತ್ ಕುಮಾರ್.
ಇದನ್ನೂ ಓದಿ: Rishabh Pant: ಟೀಮ್ ಇಂಡಿಯಾ ಜೊತೆ ಕಾಣಿಸಿಕೊಂಡ ರಿಷಭ್ ಪಂತ್
ಮಣಿಪುರ (ಪ್ಲೇಯಿಂಗ್ XI): ಕರ್ಣಜಿತ್ ಯುಮ್ನಮ್, ಜಾನ್ಸನ್ ಸಿಂಗ್, ಲ್ಯಾಂಗ್ಲೋನಿಯಾಂಬ ಕಿಶನ್ಗ್ಬಮ್ (ನಾಯಕ), ಪ್ರಫುಲ್ಲೋಮಣಿ ಸಿಂಗ್, ರೆಕ್ಸ್ ರಾಜ್‌ಕುಮಾರ್, ಎಲ್ ಕಿಶನ್ ಸಿಂಘಾ, ಬಿಶ್ವರ್ಜಿತ್ ಕೊಂಥೌಜಮ್, ನರಿಸಿಂಗ್ ಯಾದವ್, ನಿತೇಶ್ ಸೆಡೈ, ಕಂಗಬಾಮ್ ಪ್ರಿಯೋಜಿತ್ ಸಿಂಗ್, ಕಿಶನ್ ಥೋಕ್ಚೋಮ್.
Published On - 2:23 pm, Sun, 21 January 24