Rashid Khan: ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್

Rashid Khan: ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್
Rashid Khan

IPL 2022: ರಶೀದ್ ಖಾನ್ ಪ್ರಸಕ್ತ ಐಪಿಎಲ್​ನಲ್ಲಿ ಇದುವರೆಗೆ 15 ವಿಕೆಟ್ ಪಡೆದಿದ್ದಾರೆ. ಲಕ್ನೋ ವಿರುದ್ದ 4 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರ 10 ರೊಳಗೆ ಪ್ರವೇಶಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಕೂಡ ರಶೀದ್ ಖಾನ್ ಕಡಿಮೆ ರನ್ ಬಿಟ್ಟುಕೊಟ್ಟಿದ್ದಾರೆ.

TV9kannada Web Team

| Edited By: Zahir PY

May 12, 2022 | 4:43 PM

IPL 2022: ಐಪಿಎಲ್​ನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು 62 ರನ್​ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಸ್ಪಿನ್ನರ್ ರಶೀದ್ ಖಾನ್ (Rashid Khan). ಈ ಪಂದ್ಯದಲ್ಲಿ 3.5 ಓವರ್‌ಗಳನ್ನು ಎಸೆದ ರಶೀದ್ ಖಾನ್ 4 ವಿಕೆಟ್ ಪಡೆದು ಮಿಂಚಿದ್ದರು. ಇದರೊಂದಿಗೆ ಅಫ್ಘಾನಿಸ್ತಾನದ ಸ್ಪಿನ್ನರ್ ಟಿ20 ಕ್ರಿಕೆಟ್​ನಲ್ಲಿ 450 ವಿಕೆಟ್‌ಗಳನ್ನು ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ 450 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ವೆಸ್ಟ್​ ಇಂಡೀಸ್​ನ ಆಲ್ ರೌಂಡರ್ ಡ್ವೇನ್ ಬ್ರಾವೋ ಹಾಗೂ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಈ ಸಾಧನೆ ಮಾಡಿದ್ದರು. ಬ್ರಾವೊ ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. 531 ಪಂದ್ಯಗಳಲ್ಲಿ 587 ವಿಕೆಟ್ ಉರುಳಿಸಿ ಬ್ರಾವೊ ಇತಿಹಾಸ ನಿರ್ಮಿಸಿದ್ದಾರೆ. ಇನ್ನು ಇಮ್ರಾನ್ ತಾಹಿರ್ 356 ಟಿ20 ಪಂದ್ಯಗಳಲ್ಲಿ 451 ವಿಕೆಟ್ ಪಡೆದಿದ್ದರೆ. ಇದೀಗ ರಶೀದ್ ಖಾನ್ 323 ಪಂದ್ಯಗಳಲ್ಲಿ 450 ವಿಕೆಟ್ ಪಡೆದಿದ್ದಾರೆ. ವಿಶೇಷ ಎಂದರೆ ಬ್ರಾವೊ ಹಾಗೂ ಇಮ್ರಾನ್​ ತಾಹಿರ್​ಗಿಂತ ಅತೀ ವೇಗವಾಗಿ ರಶೀದ್ ಖಾನ್ 450 ವಿಕೆಟ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ರಶೀದ್ ಖಾನ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಟಿ20 ವಿಕೆಟ್ ಟೇಕರ್​ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ರಶೀದ್ ಖಾನ್​ಗೆ 2 ವಿಕೆಟ್​ಗಳ ಅಗತ್ಯವಿದೆ. ಮುಂದಿನ ಪಂದ್ಯದಲ್ಲಿ ಅಫ್ಘಾನ್ ಸ್ಪಿನ್ನರ್ ಎರಡು ವಿಕೆಟ್ ಉರುಳಿಸಿದರೆ, ಇಮ್ರಾನ್ ತಾಹಿರ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳು: 1. ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್) – 587 ವಿಕೆಟ್‌ಗಳು 2. ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ) – 451 ವಿಕೆಟ್‌ಗಳು 3. ರಶೀದ್ ಖಾನ್ (ಅಫ್ಘಾನಿಸ್ತಾನ್) – 450 ವಿಕೆಟ್‌ಗಳು 4. ಸುನಿಲ್ ನರೈನ್ (ವೆಸ್ಟ್ ಇಂಡೀಸ್) – 437 ವಿಕೆಟ್‌ಗಳು

ಐಪಿಎಲ್ 2022 ರಲ್ಲಿ 15 ವಿಕೆಟ್​: ರಶೀದ್ ಖಾನ್ ಪ್ರಸಕ್ತ ಐಪಿಎಲ್​ನಲ್ಲಿ ಇದುವರೆಗೆ 15 ವಿಕೆಟ್ ಪಡೆದಿದ್ದಾರೆ. ಲಕ್ನೋ ವಿರುದ್ದ 4 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರ 10 ರೊಳಗೆ ಪ್ರವೇಶಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಕೂಡ ರಶೀದ್ ಖಾನ್ ಕಡಿಮೆ ರನ್ ಬಿಟ್ಟುಕೊಟ್ಟಿದ್ದಾರೆ. ಪ್ರತಿ ಓವರ್​ಗೆ 6.79 ಸರಾಸರಿಯಂತೆ ರನ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಟಿಂಗ್ ಮೂಲಕ ಕೂಡ ಗುಜರಾತ್ ಟೈಟನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸದ್ಯ ಪ್ಲೇಆಫ್ ಖಚಿತಪಡಿಸಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಲೀಗ್ ಹಂತದಲ್ಲಿ ಇನ್ನು 2 ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಸ್ಪಿನ್ ಮೋಡಿ ಮಾಡುವ ಮೂಲಕ ರಶೀದ್ ಖಾನ್ ತನ್ನ ವಿಕೆಟ್​ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಇರಾದೆಯಲ್ಲಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada