ODI Cricket: ಏಕದಿನ ಕ್ರಿಕೆಟ್​ನ ಸ್ವರೂಪ ಬದಲಿಸಲು ಹೊಸ ಐಡಿಯಾ ನೀಡಿದ ರವಿ ಶಾಸ್ತ್ರಿ

| Updated By: ಝಾಹಿರ್ ಯೂಸುಫ್

Updated on: Jul 26, 2022 | 3:58 PM

Ravi Shastri: ಈ ಹಿಂದೆ ಏಕದಿನ ಕ್ರಿಕೆಟ್ 60 ಓವರ್​ಗಳ ಪಂದ್ಯವಾಗಿತ್ತು. ನಾವು 1983ರಲ್ಲಿ ವಿಶ್ವಕಪ್ ಗೆದ್ದಾಗ ಅದು 60 ಓವರ್‌ಗಳ ಇನಿಂಗ್ಸ್ ಆಗಿತ್ತು.

ODI Cricket: ಏಕದಿನ ಕ್ರಿಕೆಟ್​ನ ಸ್ವರೂಪ ಬದಲಿಸಲು ಹೊಸ ಐಡಿಯಾ ನೀಡಿದ ರವಿ ಶಾಸ್ತ್ರಿ
Ravi Shastri
Follow us on

ಕ್ರಿಕೆಟ್ ಅಂಗಳದಲ್ಲಿ ಏಕದಿನ ಸ್ವರೂಪದ ಚರ್ಚೆಗಳು ಜೋರಾಗಿದೆ. 31ನೇ ವರ್ಷಕ್ಕೆ ಇಂಗ್ಲೆಂಡ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್ ನಿವೃತ್ತಿ ಘೋಷಿಸಿದ್ದ ಬೆನ್ನಲ್ಲೇ ಇದೀಗ ಏಕದಿನ ಸ್ವರೂಪದ ಬಗ್ಗೆ ಅನೇಕ ಆಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಪಾಕ್ ದಿಗ್ಗಜ ವಾಸಿಂ ಅಕ್ರಮ್ ಏಕದಿನ ಕ್ರಿಕೆಟ್​ನ ಪ್ರಾಮುಖ್ಯತೆಯು ಕುಂಠಿತವಾಗುತ್ತಿದೆ ಎಂದು ಹೇಳಿದ್ದರು. ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರ್ರಿ ಕೂಡ ಏಕದಿನ ಸ್ವರೂಪದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ಬದಲಾವಣೆ ತರಲು ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ರವಿ ಶಾಸ್ತ್ರಿ, ಏಕದಿನ ಕ್ರಿಕೆಟ್ ಅನ್ನು 50 ಓವರ್​ಗಳನ್ನು ಆಡಿಸುವುದು ನಿಲ್ಲಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಬದಲಾಗಿ 40 ಓವರ್​ಗಳ ಪಂದ್ಯಗಳನ್ನು ನಡೆಸಬೇಕು. ಓವರ್​ಗಳ ಕಡಿತದೊಂದಿಗೆ ಪಂದ್ಯದ ಮೇಲಿನ ಆಸಕ್ತಿಯನ್ನು ಉಳಿಸಬಹುದು ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯದ ಸಮಯವನ್ನು ಕಡಿಮೆ ಮಾಡುವುದರಿಂದ ಯಾವುದೇ ಹಾನಿ ಆಗುವುದಿಲ್ಲ. ಈ ಹಿಂದೆ ಏಕದಿನ ಕ್ರಿಕೆಟ್ 60 ಓವರ್​ಗಳ ಪಂದ್ಯವಾಗಿತ್ತು. ನಾವು 1983ರಲ್ಲಿ ವಿಶ್ವಕಪ್ ಗೆದ್ದಾಗ ಅದು 60 ಓವರ್‌ಗಳ ಇನಿಂಗ್ಸ್ ಆಗಿತ್ತು. ಆ ಬಳಿಕ 60 ಓವರ್‌ಗಳು ದೀರ್ಘಾವಧಿ ಎಂದು ಪರಿಗಣಿಸಲಾಯಿತು. ಹೀಗಾಗಿ ಏಕದಿನ ಪಂದ್ಯವನ್ನು 50 ಓವರ್​ಗಳಿಗೆ ಇಳಿಸಲಾಯಿತು. ಇದರಿಂದ ಯಾವುದೇ ಬದಲಾವಣೆ ಆಗಿರಲಿಲ್ಲ. ಬದಲಾಗಿ ಪಂದ್ಯದ ಮೇಲೆ ಆಸಕ್ತಿ ಹೆಚ್ಚಾಯಿತು ಎಂದು ರವಿ ಶಾಸ್ತ್ರಿ ಹೇಳಿದರು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಪ್ರಸ್ತುತ ಸನ್ನಿವೇಶದಲ್ಲಿ ಏಕದಿನ ಕ್ರಿಕೆಟ್ ಅನ್ನು 40 ಓವರ್​ಗಳಿಗೆ ಸೀಮಿತಗೊಳಿಸುವುದು ಸೂಕ್ತ ಎಂದಿರುವ ರವಿ ಶಾಸ್ತ್ರಿ, ಈ ಮೂಲಕ ಓನ್​ಡೇ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಉಳಿಸಿಕೊಳ್ಳಬಹುದು. ಹಾಗೆಯೇ ಆಟಗಾರರು ದೀರ್ಘಾವಧಿವರೆಗೆ ಫೀಲ್ಡಿಂಗ್ ಮಾಡುವುದನ್ನು ಸಹ ತಪ್ಪಿಸಬಹುದು ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಏಕದಿನ ಕ್ರಿಕೆಟ್​ ಅನ್ನು 40 ಓವರ್​ಗಳಿಗೆ ಸೀಮಿತಗೊಳಿಸುವಂತೆ ಸಲಹೆ ನೀಡಿದ್ದರು. ಇದೀಗ ರವಿ ಶಾಸ್ತ್ರಿ ಕೂಡ ಅದೇ ಮಾದರಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೀಗಾಗಿ ಏಕದಿನ ಕ್ರಿಕೆಟ್​ನ ಸ್ವರೂಪ ಬದಲಾಗಲಿದೆಯಾ ಕಾದು ನೋಡಬೇಕಿದೆ.