ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ (Ravindra Jadeja) ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಇದಾಗ್ಯೂ ಅವರ ಅವರ ಸಂಪತ್ತು, ಹೂಡಿಕೆ ಮತ್ತು ಆದಾಯದ ಮೂಲಗಳು ಯಾವುವು ಎಂಬುದರ ಮಾಹಿತಿ ಎಲ್ಲೂ ಹೊರಬಿದ್ದಿರಲಿಲ್ಲ. ಆದರೀಗ ಜಡೇಜಾ ಅವರ ಸಂಪತ್ತೆಷ್ಟು, ಅವರು ಎಲ್ಲೆಲ್ಲಾ ಹೂಡಿಕೆ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಬಹಿರಂಗವಾಗಿದೆ. ಇದಕ್ಕೆ ಕಾರಣ ಅವರ ಪತ್ನಿ ರಿವಾಬಾ ರವೀಂದ್ರಸಿನ್ಹ್ ಸೋಲಂಕಿ ಅವರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವುದು. ಜಾಮ್‌ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಜಡೇಜಾ ಅವರ ಒಟ್ಟು ಆಸ್ತಿ ಮೌಲ್ಯವನ್ನು ಬಹಿರಂಗಪಡಿಸಿದ್ದಾರೆ.
ಅದರಂತೆ ರವೀಂದ್ರ ಜಡೇಜಾ ಅವರ ಒಟ್ಟು ಆಸ್ತಿ ಮೌಲ್ಯ 97,35,59,222 ರೂ. ಹಾಗೆಯೇ ಹಲವು ದುಬಾರಿ ಕಾರುಗಳು ಇದರಲ್ಲಿ ಸೇರಿವೆ. ಇದರ ಜೊತೆಗೆ ಮತ್ತೊಂದು ಆಸಕ್ತಿಕರ ವಿಚಾರವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಜಡೇಜಾ ಅವರು ಹೂಡಿಕೆ ಮಾಡಿರುವ ಕ್ಷೇತ್ರ.
ಸಾಮಾನ್ಯವಾಗಿ ಶ್ರೀಮಂತರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ರವೀಂದ್ರ ಜಡೇಜಾ ಹೂಡಿಕೆ ಮಾಡಿರುವುದು ಅಂಚೆ ಕಚೇರಿಯ ಪಿಪಿಎಫ್ ಯೋಜನೆಯಲ್ಲಿ ಎಂಬುದು ವಿಶೇಷ. ಪತ್ನಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, ರವೀಂದ್ರ ಜಡೇಜಾ ಅವರು ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂದರೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಯೋಜನೆಯು ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಇದರಲ್ಲಿ ಜಡೇಜಾ 2 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.
ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ರವೀಂದ್ರ ಜಡೇಜಾ ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆ ಅಥವಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡದೇ ಸರ್ಕಾರದ ಪಿಪಿಎಫ್ ಯೋಜನೆಯನ್ನು ಆಯ್ಕೆ ಮಾಡಿಕೊಂಡಿರುವುದೇ ವಿಶೇಷ.
ಪಿಪಿಎಫ್ ಯೋಜನೆಯ ವಿಶೇಷಗಳೇನು?