RCB: ಆರ್ಸಿಬಿ ಮಹಿಳಾ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕ
RCB: ನಿರಂತರ ವೈಫಲ್ಯಗಳಿಂದಾಗಿ ಬೆಸತ್ತಿರುವ ಆರ್ಸಿಬಿ ಆಡಳಿತ ಮಂಡಳಿ ತನ್ನ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಹಲವಾರು ಬಾರಿ ಬದಲಾವಣೆಗಳನ್ನು ಮಾಡಿದೆ. ಅದಕ್ಕೆ ಪೂರಕವಾಗಿ ಮುಂದಿನ ಡಬ್ಯ್ಲುಪಿಎಲ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಕೋಚ್ ಲ್ಯೂಕ್ ವಿಲಿಯಮ್ಸ್ ಅವರನ್ನು ಮಹಿಳಾ ತಂಡದಲ್ಲಿ ಸೇರಿಸಿಕೊಂಡಿದೆ.
2024 ರ ಐಪಿಎಲ್ (IPL 2024) ಆರಂಭಕ್ಕೂ ಮುನ್ನ ಪುರುಷರ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿರುವ ಆರ್ಸಿಬಿ (RCB) ಫ್ರಾಂಚೈಸ್ ಇದೀಗ ಮಹಿಳಾ ತಂಡದಲ್ಲೂ ಪ್ರಮುಖ ಬದಲಾವಣೆ ಮಾಡಿದೆ. ಕೆಲವು ದಿನಗಳ ಹಿಂದೆ ಪುರುಷರ ತಂಡದಲ್ಲಿ ಮುಖ್ಯ ಕೋಚ್ ಹಾಗೂ ನಿರ್ಧೇಶಕರ ಜಾಗಕ್ಕೆ ಆಂಡಿ ಫ್ಲವರ್ ಮತ್ತು ಮೊ ಬೊಬಾಟ್ ಅವರನ್ನು ಹೊಸದಾಗಿ ನೇಮಿಸಿಕೊಂಡಿದ್ದ ಫ್ರಾಂಚೈಸ್ ಇದೀಗ ಮಹಿಳಾ ತಂಡದ ಮುಖ್ಯ ಕೋಚ್ರನ್ನು ಬದಲಿಸಿದೆ. ಈ ಹಿಂದೆ ಆರ್ಸಿಬಿ ಮಹಿಳಾ ತಂಡದ ಮುಖ್ಯ ಕೋಚ್ ಆಗಿದ್ದ ಬೆನ್ ಸಾಯರ್ (Ben Sawyer) ಅವರನ್ನು ತಮ್ಮ ಹುದ್ದೆಯಿಂದ ಕೆಳಗಿಳಿಸಿರುವ ಫ್ರಾಂಚೈಸ್ ಇದೀಗ ಮಹಿಳಾ ಬಿಗ್ ಬ್ಯಾಷ್ ಲೀಗ್ ವಿಜೇತ ಕೋಚ್ ಲ್ಯೂಕ್ ವಿಲಿಯಮ್ಸ್ (Luke Williams) ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿದೆ.
ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ
ವಾಸ್ತವವಾಗಿ ನಾವು ಐಪಿಎಲ್‌ನ ಅತ್ಯಂತ ದುರದೃಷ್ಟಕರ ತಂಡಗಳ ಬಗ್ಗೆ ಮಾತನಾಡಿದಾಗಲೆಲ್ಲ ಆರ್ಸಿಬಿ ತಂಡ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ತಂಡದಲ್ಲಿ ಸ್ಟಾರ್ ಆಟಗಾರರ ದಂಡೆ ಇದ್ದರೂ ಈ ತಂಡಕ್ಕೆ ಒಮ್ಮೆಯೂ ಐಪಿಎಲ್ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಕಳೆದ ವರ್ಷದಿಂದ ಆರಂಭವಾಗಿರುವ ಮಹಿಳಾ ಪ್ರಿಮಿಯರ್ ಲೀಗ್ನಲ್ಲೂ ಸಹ ಆರ್ಸಿಬಿ ಒಡೆತನದ ತಂಡದ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಪುರುಷರ ತಂಡದಂತೆ ಮಹಿಳಾ ತಂಡದಲ್ಲೂ ಸ್ಟಾರ್ ಆಟಗಾರ್ತಿಯರ ದಂಡೆ ಇದ್ದರೂ ಆ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.
🚨 ANNOUNCEMENT: Big Bash Winning Coach 𝐋𝐮𝐤𝐞 𝐖𝐢𝐥𝐥𝐢𝐚𝐦𝐬 Joins RCB Women’s Team as Head Coach 😇🤝
Luke: “I look forward to working with a playing group that will host a number of the most exciting players in Indian and world cricket as we look to bring a bold and… pic.twitter.com/WxRyzedkPV
— Royal Challengers Bangalore (@RCBTweets) September 30, 2023
RCB: ಆರ್ಸಿಬಿ ತಂಡಕ್ಕೆ ಹೊಸ ನಿರ್ದೇಶಕರ ನೇಮಕ..!
ಹೀಗಾಗಿ ನಿರಂತರ ವೈಫಲ್ಯಗಳಿಂದಾಗಿ ಬೆಸತ್ತಿರುವ ಆರ್ಸಿಬಿ ಆಡಳಿತ ಮಂಡಳಿ ತನ್ನ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಹಲವಾರು ಬಾರಿ ಬದಲಾವಣೆಗಳನ್ನು ಮಾಡಿದೆ. ಅದಕ್ಕೆ ಪೂರಕವಾಗಿ ಮುಂದಿನ ಡಬ್ಯ್ಲುಪಿಎಲ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಕೋಚ್ ಲ್ಯೂಕ್ ವಿಲಿಯಮ್ಸ್ ಅವರನ್ನು ಮಹಿಳಾ ತಂಡದಲ್ಲಿ ಸೇರಿಸಿಕೊಂಡಿದೆ.
ಕೋಚ್ ಆಗಿ ಲ್ಯೂಕ್ ವಿಲಿಯಮ್ಸ್ ಸಾಧನೆ ಅದ್ಭುತ
ಲ್ಯೂಕ್ ವಿಲಿಯಮ್ಸ್ ಅವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ತರಬೇತುದಾರರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತಂಡವು 2022-23 ಆವೃತ್ತಿಯಲ್ಲಿ ಟ್ರೋಫಿಯನ್ನು ಗೆದ್ದುಕೊಂಡಿತು. ಇದಲ್ಲದೆ, ಅಲಿಡಾಡ್ ತಂಡವು ಎರಡು ಬಾರಿ ರನ್ನರ್ ಅಪ್ ಆಗಿತ್ತು. ಇದಲ್ಲದೆ, ಅವರು ದಿ ಹಂಡ್ರೆಡ್‌ನಲ್ಲಿ ಸದರ್ನ್ ಬ್ರೇವ್ ತಂಡದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಐಪಿಎಲ್ ತಂಡದಲ್ಲಿ ಬದಲಾವಣೆ
ಇತ್ತೀಚೆಗೆ ಆರ್ಸಿಬಿ ನಿರ್ವಹಣೆಯು ತನ್ನ ಐಪಿಎಲ್ ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದೆ. ತಂಡದ ಕಳಪೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಮ್ಯಾನೇಜ್ಮೆಂಟ್, ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮತ್ತು ನಿರ್ದೇಶಕ ಮೈಕ್ ಹೆಸ್ಸನ್ ಅವರನ್ನು ತೆಗೆದುಹಾಕಿತ್ತು. ಅವರ ಸ್ಥಾನಕ್ಕೆ ಆಂಡಿ ಫ್ಲವರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಹಾಗೂ ಮೊ ಬೊಬಾಟ್ ಅವರನ್ನು ನಿರ್ದೇಶಕರನ್ನಾಗಿ ಮ್ಯಾನೇಜ್‌ಮೆಂಟ್ ನೇಮಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ