ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಒಟ್ಟು 19 ಆಟಗಾರರನ್ನು ಖರೀದಿಸಿದೆ. ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಅವರಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದರ್ ಹಾಗೂ ಯಶ್ ದಯಾಳ್ ಸೇರಿದ್ದರು. ಹೀಗಾಗಿ ಮೆಗಾ ಹರಾಜಿನಲ್ಲಿ ಆರ್ಸಿಬಿ ಕನಿಷ್ಠ 15 ಆಟಗಾರರನ್ನು ಖರೀದಿಸಲೇಬೇಕಿತ್ತು. ಅದರಂತೆ ಆರ್ಸಿಬಿ 19 ಆಟಗಾರರನ್ನು ಖರೀದಿಸಿದ್ದು, ತಂಡದಲ್ಲಿರುವ ಒಟ್ಟು ಆಟಗಾರರ ಸಂಖ್ಯೆ 22 ಕ್ಕೇರಿದೆ.
ಆರ್ಸಿಬಿ ಮೆಗಾ ಹರಾಜಿನ ಮೊದಲ ದಿನ ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್ವುಡ್, ರಸಿಖ್ ದಾರ್ ಮತ್ತು ಸುಯ್ಯಾಶ್ ಶರ್ಮಾ ಅವರನ್ನು ಖರೀದಿಸಿತ್ತು. ಹೀಗಿರುವಾಗ ಹರಾಜಿನ ಎರಡನೇ ಮತ್ತು ಕೊನೆಯ ದಿನದಂದು ಆರ್ಸಿಬಿ 5 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 16 ಆಟಗಾರರನ್ನು 30.65 ಕೋಟಿ ರೂ.ಗೆ ಖರೀದಿಸಬೇಕಿತ್ತು. ಅದರಂತೆ ಎರಡನೇ ದಿನ ಹರಾಜಿಗೆ ಪ್ರವೇಶಿಸಿದ್ದ ಆರ್ಸಿಬಿ, 13 ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಉಳಿದಂತೆ ಆರ್ಸಿಬಿ ಯಾವ ಆಟಗಾರರನ್ನು ಎಷ್ಟು ಮೊತ್ತಕ್ಕೆ ಖರೀದಿಸಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 pm, Mon, 25 November 24