RCB Income: ಅರ್ಧ ಸಾವಿರ ಕೋಟಿಗೂ ಅಧಿಕ..! ಇದು ಐಪಿಎಲ್ 2025 ರಲ್ಲಿ ಆರ್​ಸಿಬಿಯ ಆದಾಯ

RCB Revenue, Net Worth: 2025ರ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2024 ರ ಆರ್ಥಿಕ ವರ್ಷದಲ್ಲಿ 653 ಕೋಟಿ ರೂ. ಆದಾಯ ಗಳಿಸಿದ್ದು, ಪ್ರಸಾರ, ಪ್ರಾಯೋಜಕತ್ವ, ಟಿಕೆಟ್ ಮಾರಾಟ ಮತ್ತು ಇತರ ಮೂಲಗಳಿಂದ ಆದಾಯ ಬಂದಿದೆ. ಅಲ್ಲದೆ ತಂಡದ ನಿವ್ವಳ ಮೌಲ್ಯ 1012 ಕೋಟಿ ರೂ.ಗಳಷ್ಟಿದ್ದು, ಐಪಿಎಲ್‌ನಲ್ಲಿ ಮೂರನೇ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿದೆ.

RCB Income: ಅರ್ಧ ಸಾವಿರ ಕೋಟಿಗೂ ಅಧಿಕ..! ಇದು ಐಪಿಎಲ್ 2025 ರಲ್ಲಿ ಆರ್​ಸಿಬಿಯ ಆದಾಯ
Rcb 2025

Updated on: Jun 05, 2025 | 5:54 PM

2025 ರ ಐಪಿಎಲ್ (IPL 2025) ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ, ಆರ್​ಸಿಬಿ ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಬಾರಿಯ ಚಾಂಪಿಯನ್ ಆದ ಆರ್‌ಸಿಬಿ ತಂಡಕ್ಕೆ ಆಯೋಜಕರಿಂದ 20 ಕೋಟಿ ರೂ. ಬಹುಮಾನದ ಹಣ ಕೂಡ ಸಿಕ್ಕಿತು. ಇದರೊಂದಿಗೆ, 2024 ರ ಆರ್ಥಿಕ ವರ್ಷದಲ್ಲಿ ಆರ್‌ಸಿಬಿ ತಂಡ ಎಷ್ಟು ಹಣವನ್ನು ಗಳಿಸಿತು ಮತ್ತು ಅದರ ನಿವ್ವಳ ಮೌಲ್ಯ ಎಷ್ಟು ಎಂಬುದರ ವಿವರವನ್ನು ನಾವು ನಿಮಗೆ ನೀಡಲಿದ್ದೇವೆ.

ಆರ್‌ಸಿಬಿ ಆದಾಯ ಎಷ್ಟು ಕೋಟಿ?

2024ರ ಆರ್ಥಿಕ ವರ್ಷದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 653 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ಪ್ರಸಾರದಿಂದ 420 ಕೋಟಿ ರೂ. ಗಳಿಸಿದ್ದರೆ, ಪ್ರಾಯೋಜಕತ್ವ ಮತ್ತು ಜಾಹೀರಾತಿನಿಂದ 120 ಕೋಟಿ ರೂ. ಗಳಿಸಿದೆ. ಟಿಕೆಟ್ ಮಾರಾಟದಿಂದಲೂ 60 ಕೋಟಿ ರೂ. ಗಳಿಸಿದೆ. ಇದಲ್ಲದೇ, ಆರ್‌ಸಿಬಿ ಫ್ರಾಂಚೈಸಿ ಸರಕುಗಳಿಂದ 30 ಕೋಟಿ ರೂ. ಗಳಿಸಿದ್ದು, ತಂಡದ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಆದಾಯ 10 ಕೋಟಿ ರೂಗಳಾಗಿದೆ.

ಇವೆಲ್ಲವನ್ನೂ ಸೇರಿಸಿದರೆ, ಆರ್‌ಸಿಬಿ 2024 ರಲ್ಲಿ 653 ಕೋಟಿ ರೂ. ಆದಾಯ ಗಳಿಸಿದೆ. 2023 ರ ಆರ್ಥಿಕ ವರ್ಷದ ಆರಂಭದಲ್ಲಿ, ತಂಡವು 235.4 ಕೋಟಿ ರೂ. ಲಾಭ ಗಳಿಸಿತ್ತು. ಅದರ ಹಿಂದಿನ ವರ್ಷ ಅಂದರೆ 2022 ರಲ್ಲಿ 291.6 ಕೋಟಿ ರೂ. ಸಂಪಾಧನೆ ಮಾಡಿತ್ತು.

RCB Fans Death: ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ ಆರ್​ಸಿಬಿ

ಆರ್‌ಸಿಬಿ ನಿವ್ವಳ ಮೌಲ್ಯ ಎಷ್ಟು?

ವರದಿಯ ಪ್ರಕಾರ, ಆರ್‌ಸಿಬಿ ಫ್ರಾಂಚೈಸಿಯ ನಿವ್ವಳ ಮೌಲ್ಯ 1012 ಕೋಟಿ ರೂ. ಆಗಿದ್ದು, ಐಪಿಎಲ್‌ನಲ್ಲಿ ಮೂರನೇ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿದೆ. ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದ್ದು, ಅವರ ನಿವ್ವಳ ಮೌಲ್ಯ 1029 ಕೋಟಿ ರೂ. ಆಗಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್​ನ ನಿವ್ವಳ ಮೌಲ್ಯ 1059 ಕೋಟಿ ರೂ. ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ