
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್‌ಗೆ ತಲುಪಿದೆ. ಇದೀಗ ಆರ್‌ಸಿಬಿ ಆಟಗಾರರು ಟ್ರೋಫಿ ಗೆಲ್ಲುವ ಉದ್ದೇಶದಿಂದ ಜೂನ್ 3 ರಂದು ಅಹಮದಾಬಾದ್ ಮೈದಾನ ಪ್ರವೇಶಿಸಲಿದ್ದಾರೆ. ಆದರೆ ಇದಕ್ಕೂ ಮುನ್ನ ಆರ್‌ಸಿಬಿ ಪಾಳಯದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ, ಕ್ವಾಲಿಫೈಯರ್ ಗೆದ್ದ ನಂತರ ಆರ್‌ಸಿಬಿ ಆಟಗಾರರ ಫೋಟೋ ಶೂಟ್ ನಡೆದಿದೆ. ಈ ವೇಳೆ ಕೊಹ್ಲಿ (Virat Kohli) ಜೊತೆ ಫೋಟೋ ತೆಗೆಸಿಕೊಳ್ಳಲು ತಂಡದ ಸಹ ಆಟಗಾರ ಸ್ವಸ್ತಿಕ್ ಚಿಕಾರ (Swastik Chikara) ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಟಿಮ್ ಡೇವಿಡ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವಕಾಶ ಮಾಡಿಕೊಟ್ಟಿಲ್ಲ. ಇವರಿಬ್ಬರು ಸೇರಿ ಸ್ವಸ್ತಿಕ್ರನ್ನು ಕೊಹ್ಲಿಯಿಂದ ದೂರ ತಳ್ಳಿದ್ದಾರೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಾಸ್ತವವಾಗಿ, ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಡೀ ತಂಡವು ಗುಂಪು ಫೋಟೋಕ್ಕಾಗಿ ಒಟ್ಟುಗೂಡಿತ್ತು. ಇದಕ್ಕಾಗಿ ಮುಂದಿನ ಸಾಲಿನಲ್ಲಿ ಕುರ್ಚಿಗಳನ್ನು ಸಹ ಇರಿಸಲಾಗಿತ್ತು. ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ಅದರ ಮೇಲೆ ಕುಳಿತುಕೊಳ್ಳುತ್ತಿದ್ದರು. ಉಳಿದ ಆಟಗಾರರು ಅವರ ಹಿಂದೆ ಸಾಲಿನಲ್ಲಿ ನಿಲ್ಲಲು ಆರಂಭಿಸಿದರು. ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ ಕೂಡ ಗ್ರೂಪ್ ಫೋಟೋಗಾಗಿ ಕೊಹ್ಲಿ ಹಿಂದೆ ನಿಂತಿದ್ದರು. ಆದರೆ ಈ ವೇಳೆ ಅಲ್ಲಿಗೆ ಬಂದ ಟಿಮ್ ಡೇವಿಡ್ ಚಿಕಾರನನ್ನು ಕೊಹ್ಲಿಯಿಂದ ದೂರ ತಳ್ಳಿದರು. ಅಲ್ಲಿಗೆ ಸುಮ್ಮನಾಗದ ಚಿಕಾರ ಮತ್ತೆ ಕೊಹ್ಲಿ ಬಳಿಕ ಬರಲು ಪ್ರಯತ್ನಿಸಿದರು. ಆಗ ಅಲ್ಲೇ ನಿಂತಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತೆ ಚಿಕಾರನನ್ನು ದೂರ ತಳ್ಳಿದರು. ಇವರಿಬ್ಬರು ಹಾಗೇ ಮಾಡಲು ಕಾರಣವೂ ಇದೆ.
it takes a tim and liam to keep swastik a lil away from kohli 😭 that guy is literally a glued to kohli everytime 😂 pic.twitter.com/BaEO9Hzijd
— ss🤍 (@nushstan) May 30, 2025
ವಾಸ್ತವವಾಗಿ ಇದೇ ಮೊದಲ ಬಾರಿಗೆ ಆರ್‌ಸಿಬಿ ಪಾಳಯ ಸೇರಿಕೊಂಡಿರುವ ಸ್ವಸ್ತಿಕ್ ಚಿಕಾರ, ಕೊಹ್ಲಿಯ ಬಾಲವಾಗಿಬಿಟ್ಟಿದ್ದಾರೆ. ಲೈವ್ ಪಂದ್ಯದಲ್ಲೂ ಡ್ರೇಸಿಂಗ್ ರೂಮ್ನಲ್ಲೂ, ಡಗೌಟ್ನಲ್ಲೂ ಕೊಹ್ಲಿ ಹಿಂದೆ ಚಿಕಾರ ಇದ್ದೇ ಇರುತ್ತಾರೆ. ಸ್ವಸ್ತಿಕ್ ಅವರ ನಡೆಯಿಂದ ಕೊಹ್ಲಿಗೂ ಇರಿಸು ಮುರಿಸಾಗಿದ್ದು, ಅವರು ಕೂಡ ಈ ಹಿಂದಿನ ಸಂದರ್ಶನದಲ್ಲಿ ಚಿಕಾರನನ್ನು ನನ್ನ ರೂಮ್ನಲ್ಲಿ ಇರಿಸಿಕೊಳ್ಳಲು ಬಯಸುವುದಿಲ್ಲ ಎಂದಿದ್ದರು. ಆರ್‌ಸಿಬಿ ಆಟಗಾರರು ಕೂಡ ಚಿಕಾರನನ್ನು ಇದೇ ವಿಷಯವಾಗಿ ಸಾಕಷ್ಟು ಬಾರಿ ಕೀಟಲೆ ಮಾಡಿದ್ದಾರೆ. ಇದೀಗ ಫೋಟೋ ಶೂಟ್ ಸಮಯದಲ್ಲೂ ಚಿಕಾರ, ವಿರಾಟ್ ಬಳಿ ಬಂದಾಗ, ತಂಡದ ಆಟಗಾರರು ಚಿಕಾರನನ್ನ ಕೀಟಲೆ ಮಾಡಿದ್ದಾರೆ.
IPL 2025: ‘ಒಂಟಿಯಾಗಿರುವುದಕ್ಕೆ ಬಿಡಲ್ಲ’; ಕೊಹ್ಲಿಗೆ ಇರಿಸು ಮುರಿಸು ತಂದ ಸ್ವಸ್ತಿಕ್ ಚಿಕಾರ ಚೇಷ್ಟೆ
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸ್ವಸ್ತಿಕ್ ಚಿಕಾರ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತು. ಆದರೆ, ಅವರಿಗೆ ಐಪಿಎಲ್ 2025 ರಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಉತ್ತರ ಪ್ರದೇಶ ಪರ ದೇಶೀಯ ಕ್ರಿಕೆಟ್ ಆಡುವ ಸ್ವಸ್ತಿಕ್ ಚಿಕಾರ, ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 33.33 ಸರಾಸರಿಯಲ್ಲಿ 200 ರನ್ ಗಳಿಸಿದ್ದಾರೆ, ಇದರಲ್ಲಿ 1 ಶತಕವೂ ಸೇರಿದೆ. ಅವರು 2 ಪ್ರಥಮ ದರ್ಜೆ ಪಂದ್ಯಗಳಲ್ಲಿ 74 ರನ್ ಮತ್ತು 4 ಟಿ20 ಪಂದ್ಯಗಳಲ್ಲಿ 15 ರನ್ ಗಳಿಸಿದ್ದಾರೆ. ಆದಾಗ್ಯೂ, ಚಿಕಾರಾ ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಬಹಳ ಕಡಿಮೆ ಅನುಭವವಿದೆ. ಆದರೆ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ, ಅವರು ಯುಪಿ ಟಿ20 ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಚಿಕಾರ 12 ಪಂದ್ಯಗಳಲ್ಲಿ 49.90 ಸರಾಸರಿ ಮತ್ತು 185 ಸ್ಟ್ರೈಕ್ ರೇಟ್‌ನಲ್ಲಿ 499 ರನ್ ಗಳಿಸಿದರು. ಈ ಅವಧಿಯಲ್ಲಿ, ಅವರ ಬ್ಯಾಟ್‌ನಿಂದ 5 ಅರ್ಧಶತಕಗಳು ಮತ್ತು 1 ಶತಕ ಕೂಡ ಸಿಡಿದಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ