IPL 2025: ಜೈಲು ಜೆರ್ಸಿ ತೋರಿಸಿ ಸಿಎಸ್‌ಕೆ ತಂಡವನ್ನು ಸ್ವಾಗತಿಸಿದ ಆರ್‌ಸಿಬಿ ಫ್ಯಾನ್ಸ್; ವಿಡಿಯೋ ವೈರಲ್

RCB Fans Troll CSK with Jail Jersey: ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಐಪಿಎಲ್ 2025 ಪಂದ್ಯಕ್ಕೂ ಮುನ್ನ, ಆರ್‌ಸಿಬಿ ಅಭಿಮಾನಿಗಳು "ಜೈಲು ಜೆರ್ಸಿ"ಗಳನ್ನು ಪ್ರದರ್ಶಿಸುವ ಮೂಲಕ ಚೆನ್ನೈ ತಂಡವನ್ನು ವಿಶಿಷ್ಟವಾಗಿ ಸ್ವಾಗತಿಸಿದ್ದಾರೆ. 2016-17ರಲ್ಲಿ ಸಿಎಸ್‌ಕೆಗೆ ಆಗಿದ್ದ ನಿಷೇಧವನ್ನು ನೆನಪಿಸುವ ಈ ಕ್ರಮವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

IPL 2025: ಜೈಲು ಜೆರ್ಸಿ ತೋರಿಸಿ ಸಿಎಸ್‌ಕೆ ತಂಡವನ್ನು ಸ್ವಾಗತಿಸಿದ ಆರ್‌ಸಿಬಿ ಫ್ಯಾನ್ಸ್; ವಿಡಿಯೋ ವೈರಲ್
Rcb Fans

Updated on: May 03, 2025 | 7:11 PM

ಐಪಿಎಲ್ 2025 (IPL 2025) ರ ಹೈವೋಲ್ಟೇಜ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಆರ್‌ಸಿಬಿ ಅಭಿಮಾನಿಗಳು ಸಿಎಸ್​ಕೆ ತಂಡವನ್ನು ವಿಭಿನ್ನವಾಗಿ ಸ್ವಾಗತಿಸಿದ್ದಾರೆ. ವಾಸ್ತವವಾಗಿ, ಸಿಎಸ್‌ಕೆ ಆಟಗಾರರ ಬಸ್ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗುತ್ತಿದ್ದಾಗ, ಕ್ರೀಡಾಂಗಣದ ಹೊರಗೆ ಆರ್‌ಸಿಬಿ ಅಭಿಮಾನಿಗಳು ‘ಜೈಲು ಜೆರ್ಸಿ’ (Jail Jersey) ತೋರಿಸುವ ಮೂಲಕ ಇಡೀ ತಂಡವನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಕ್ರೀಡಾಂಗಣದ ಹೊರಗೆ ಜೈಲು ಜೆರ್ಸಿಯನ್ನು ಮಾರಾಟ ಮಾಡುತ್ತಿದ್ದು, ಕೆಲವು ಅಭಿಮಾನಿಗಳು ಈ ಜೈಲು ಜೆರ್ಸಿಯನ್ನು ಖರೀದಿಯನ್ನು ಸಹ ಮಾಡಿದ್ದಾರೆ. ಈ ಮೂಲಕ ಆರ್​ಸಿಬಿ ಅಭಿಮಾನಿಗಳು ಧೋನಿಯ ಇಡೀ ತಂಡವನ್ನು ಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜೈಲು ಜೆರ್ಸಿ ಪ್ರದರ್ಶನ

ಐಪಿಎಲ್‌ನ ಅತಿ ದೊಡ್ಡ ಪ್ರತಿಸ್ಪರ್ಧಿಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು. ಈ ಎರಡು ತಂಡಗಳು ಮುಖಾಮುಖಿಯಾದಾಗಲೆಲ್ಲ ತೀವ್ರ ಪೈಪೋಟಿ ಕಂಡುಬರುತ್ತದೆ. ಉಭಯ ತಂಡಗಳ ಕದನವೆಂದರೆ ಇಡೀ ಕ್ರೀಡಾಂಗಣವೇ ಎರಡೂ ತಂಡಗಳ ಅಭಿಮಾನಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಹಾಗೆಯೇ ಎರಡು ತಂಡಗಳ ಅಭಿಮಾನಿಗಳ ನಡುವೆ ಹಲವು ಬಾರಿ ಘರ್ಷಣೆಗಳು ನಡೆದಿವೆ. ಈ ಸೀಸನ್​ನಲ್ಲಿ ಸತತ ಸೋಲುಗಳಿಂದ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್‌ಕೆ ತಂಡ, ಆರ್‌ಸಿಬಿಯನ್ನು ಎದುರಿಸಲು ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿಳಿದಿದೆ. ಈ ವೇಳೆ ಆತಿಥೇಯ ತಂಡದ ಅಭಿಮಾನಿಗಳು ಇಡೀ ಸಿಎಸ್​ಕೆ ತಂಡವನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದ್ದಾರೆ.

ಕ್ರೀಡಾಂಗಣದ ಹೊರಗೆ ಈ ಜೆರ್ಸಿಯನ್ನು ಮಾರಾಟ ಮಾಡುವ ವ್ಯಕ್ತಿ ತನ್ನ ಸ್ಟಾಲ್‌ನಲ್ಲಿ “ಆರ್‌ಸಿಬಿ vs ಸಿಎಸ್‌ಕೆ ಪಂದ್ಯದ ವಿಶೇಷ ಜೆರ್ಸಿ” ಎಂದು ಬರೆದಿರುವ ಸಣ್ಣ ಬೋರ್ಡ್ ಹಾಕಿದ್ದಾನೆ. ಅಲ್ಲೇ ನಿಂತಿರುವ ಸಾವಿರಾರು ಅಭಿಮಾನಿಗಳ ನಡುವೆ ಕೆಲವು ಅಭಿಮಾನಿಗಳು ಜೈಲು ಜೆರ್ಸಿಯನ್ನು ಸಿಎಸ್​ಕೆ ತಂಡ ಬರುತ್ತಿದೆ ಬಸ್​ ಕಡೆಗೆ ಪ್ರದರ್ಶಿಸಿದ್ದಾರೆ.

ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ ಆರೋಪದಡಿ 2016 ಮತ್ತು 2017 ರ ಸೀಸನ್​ಗಳಿಂದ ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಹೀಗಾಗಿ ಸಿಎಸ್​ಕೆ ತಂಡ 2016 ಮತ್ತು 2017 ರ ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದೀಗ ಆರ್‌ಸಿಬಿ ಅಭಿಮಾನಿಗಳು ಈ ಜೈಲು ಜೆರ್ಸಿಯನ್ನು ಸಿಎಸ್​ಕೆ ಆಟಗಾರರಿಗೆ ತೋರಿಸಿ ಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Sat, 3 May 25