IPL 2025: ನಾನು 7 ವರ್ಷ ಆಡಿದ ತಂಡ… ಗೆದ್ದ ಬಳಿಕ ಭಾವುಕರಾದ ಸಿರಾಜ್

|

Updated on: Apr 03, 2025 | 9:24 AM

Mohammed Siraj: ಮೊಹಮ್ಮದ್ ಸಿರಾಜ್ 2018 ರಿಂದ 2024ರವರೆಗೆ ಆರ್​​ಸಿಬಿ ಪರ 87 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 303.2 ಓವರ್​​ಗಳನ್ನು ಎಸೆದಿರುವ ಅವರು 83 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಆರ್​​​ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ಮೂರನೇ ಬೌಲರ್​​ ಎನಿಸಿಕೊಂಡಿದ್ದಾರೆ. ಇದೀಗ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಸಿರಾಜ್ ಆರ್​ಸಿಬಿ ವಿರುದ್ಧದ ಪಂದ್ಯದಲ್ಲೇ ಮಿಂಚಿದ್ದಾರೆ.

IPL 2025: ನಾನು 7 ವರ್ಷ ಆಡಿದ ತಂಡ... ಗೆದ್ದ ಬಳಿಕ ಭಾವುಕರಾದ ಸಿರಾಜ್
Mohammed Siraj
Follow us on

IPL 2025: ಐಪಿಎಲ್ 2025ರಲ್ಲಿ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಆರ್​ಸಿಬಿ ತಂಡದ ಈ ಸೋಲಿಗೆ ಪ್ರಮುಖ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ (Mohammed Siraj). ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಆರ್​ಸಿಬಿಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಗುಜರಾತ್ ಟೈಟಾನ್ಸ್ ವೇಗಿ ಮೊಹಮ್ಮದ್ ಸಿರಾಜ್ ಪವರ್​ಪ್ಲೇನಲ್ಲಿ ಫಿಲ್ ಸಾಲ್ಟ್ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಆರಂಭಿಕ ಆಘಾತ ನೀಡಿದ್ದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ರಜತ್ ಪಾಟಿದಾರ್ ವಿಕೆಟ್ ಒಪ್ಪಿಸಿದರು. ಅಲ್ಲದೆ ಅಂತಿಮವಾಗಿ 20 ಓವರ್​ಗಳಲ್ಲಿ 169 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

170 ರನ್​ಗಳ ಗುರಿ ಪಡೆದ ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ (49) ಆರಂಭದಲ್ಲಿ ಅಬ್ಬರಿಸಿದರೆ, ಆ ಬಳಿಕ ಜೋಸ್ ಬಟ್ಲರ್ (73) ಸ್ಪೋಟಕ ಇನಿಂಗ್ಸ್ ಆಡಿದರು. ಈ ಮೂಲಕ 17.5 ಓವರ್​ಗಳಲ್ಲಿ 170 ರನ್​ ಬಾರಿಸಿ ಗುಜರಾತ್ ಟೈಟಾನ್ಸ್ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಇದನ್ನೂ ಓದಿ
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದುವೇ ಅಸಲಿ ಕಾರಣ
RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್
David Warner: ಡೇವಿಡ್ ವಾರ್ನರ್​ಗೆ ಒಲಿದ ನಾಯಕತ್ವ..!
VIDEO: ಎಂಎಸ್ ಧೋನಿ ಎಂಟ್ರಿಗೆ ಕಿವಿ ಮುಚ್ಚಿ ಕೂತ ನೀತಾ ಅಂಬಾನಿ

ಸಿರಾಜ್​ಗೆ ಒಲಿದ ಪಂದ್ಯಶ್ರೇಷ್ಠ ಪ್ರಶಸ್ತಿ:

ಈ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 4 ಓವರ್​ಗಳಲ್ಲಿ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಸಿರಾಜ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಈ ಪ್ರಶಸ್ತಿ ಪಡೆದು ಮಾತನಾಡಿದ ಮೊಹಮ್ಮದ್ ಸಿರಾಜ್, ಆರ್​ಸಿಬಿ ವಿರುದ್ಧ ಆಡುವಾಗ ನಾನು ಸ್ವಲ್ಪ ಭಾವುಕನಾಗಿದ್ದೆ. ಏಕೆಂದರೆ ಕಳೆದ 7 ವರ್ಷಗಳ ಕಾಲ ನಾನು ಆರ್​ಸಿಬಿ ಪರ ಆಡಿದ್ದೆ. ಇದೀಗ ಕೆಂಪು ಬಣ್ಣದ ಜೆರ್ಸಿಯಿಂದ ನೀಲಿ ಬಣ್ಣದ ಜೆರ್ಸಿಗೆ ಬದಲಾಗಿದ್ದೇನೆ. ಇದಾಗ್ಯೂ ಆರ್​ಸಿಬಿ ತಂಡವನ್ನು ಎದುರಿಸುವುದು ನಿಜವಾಗೂ ಭಾವನಾತ್ಮಕವಾಗಿತ್ತು ಎಂದಿದ್ದಾರೆ.

ಆರಂಭದಲ್ಲಿ ಭಾವುಕನಾದರೂ, ಚೆಂಡು ಪಡೆದ ಬಳಿಕ ನಾನು ಸರಿಯಾದೆ. ಏಕೆಂದರೆ ನಾನು ಎದುರಾಳಿಯಾಗಿ ಕಣಕ್ಕಿಳಿದಿರುವುದು ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಭಾವುಕತೆಯನ್ನು ಸೈಡ್​ನಲ್ಲಿರಿಸುವುದು ಅನಿವಾರ್ಯವಾಗಿತ್ತು ಎಂದು ಸಿರಾಜ್ ಹೇಳಿದ್ದಾರೆ.

ಅಲ್ಲದೆ ಈ ಪ್ರದರ್ಶನಕ್ಕೆ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಹಾಗೂ ಸಹ ಆಟಗಾರ ಇಶಾಂತ್ ಶರ್ಮಾ ನೀಡಿದ ಬೆಂಬಲವೇ ಕಾರಣ. ಏಕೆಂದರೆ ಕಳೆದ ಕೆಲ ತಿಂಗಳಿಂದ ನಾನು ಸ್ಥಿರವಾಗಿ ಆಡುತ್ತಿದ್ದೆ. ಇದರಿಂದ ನಾನು ನನ್ನ ಬೌಲಿಂಗ್​ನಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಿದ್ದೆ.

ಆದರೆ ಯಾವಾಗ ವಿರಾಟ್ ಸಿಕ್ಕಿತೋ ಆ ವೇಳೆ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡೆ. ನನ್ನ ಫಿಟ್ನೆಸ್‌ನಲ್ಲಿ ಕೆಲಸ ಮಾಡಿದೆ. ಗುಜರಾತ್ ಟೈಟಾನ್ಸ್ ತಂಡ ನನ್ನನ್ನು ಆಯ್ಕೆ ಮಾಡಿದ ಬಳಿಕ, ನಾನು ಆಶಿಶ್ ಭಾಯ್ (ಆಶಿಶ್ ನೆಹ್ರಾ) ಅವರೊಂದಿಗೆ ಮಾತನಾಡಿದೆ. ಬೌಲಿಂಗ್ ಅನ್ನು ಆನಂದಿಸಿ ಬೌಲಿಂಗ್ ಮಾಡು ಎಂದರು.

ಇದನ್ನೂ ಓದಿ: IPL 2025: ಹೀನಾಯ ಅತ್ಯಂತ ಹೀನಾಯ ದಾಖಲೆ ಬರೆದ RCB

ಇನ್ನು ಇಶು ಭಾಯ್ (ಇಶಾಂತ್ ಶರ್ಮಾ) ನನಗೆ ಯಾವ ಲೈನ್ ಮತ್ತು ಲೆಂಗ್ತ್ ಬೌಲಿಂಗ್ ಮಾಡಬೇಕೆಂದು ಹೇಳಿಕೊಟ್ಟರು. ಈ ಮೂಲಕ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಆರ್​ಸಿಬಿ ವಿರುದ್ಧ ಅತ್ಯುತ್ತಮವಾಗಿ ದಾಳಿ ಸಂಘಟಿಸಿದೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.